janadhvani

Kannada Online News Paper

ದಾರುಲ್ ಹಿಕ್ಮ ಬೆಳ್ಳಾರೆ: ಅಗಲಿದವರಿಗಾಗಿ ಪ್ರಾರ್ಥನಾ ಸಂಗಮ

ಬೆಳ್ಳಾರೆ : ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಇದರ ಪ್ರಧಾನ ಕಾರ್ಯದರ್ಶಿ ದಾವೂದ್ ಸಹದಿ ಬೆಳ್ಳಾರೆ ಅವರ ತಾಯಿಯ 40 ನೇ ದುಃವಾ ಮಜ್ಲಿಸ್ ಹಾಗೂ ದಾರುಲ್ ಹಿಕ್ಮ ಹಿತೈಷಿಗಳ ಕುಟುಂಬದಿಂದ ಮರಣ ಹೊಂದಿದವರ ಹೆಸರಿನಲ್ಲಿ

ಸಂಸ್ಥೆಯ ಅಧ್ಯಕ್ಷರಾದ ಸಯ್ಯದ್ ಕಾಜೂರ್ ತಂಗಳ್ ಅವರ ನೇತೃತ್ವದಲ್ಲಿ ದಿನಾಂಕ 17-08-2025 ನೇ ಆದಿತ್ಯವಾರ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಗೆ ದಾನಿಗಳ ಸಹಾಯದಿಂದ ಸುಮಾರು 50,000 ರೂಪಾಯಿ ವೆಚ್ಚದಲ್ಲಿ ಹೊಸ ಸೌಂಡ್ ಸಿಸ್ಟಮ್ ಖರೀದಿಗೆ ಸಹಕರಿಸಿದ ದಾನಿಗಳಿಗೆ ವಿಶೇಷ ದುಃವಾ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುದರ್ರಿಸ್ ಹಾಫಿಲ್ ಉಸ್ತಾದ್,ಸದರ್ ಉಸ್ತಾದ್, ಮುಅಲ್ಲಿಮ್ ಉಸ್ತಾದ್ ,ಸಂಸ್ಥೆಯ ಉಪಾಧ್ಯಕ್ಷ ಮಹಮೂದ್ ಹಾಜಿ,ಪ್ರಧಾನ ಕಾರ್ಯದರ್ಶಿ ದಾವೂದ್ ಸಅದಿ, ಹಮೀದ್ ಅಲ್ಫಾ,ಹನೀಫ್ ಸಖಾಫಿ, ಸತ್ತಾರ್ ಸಖಾಫಿ,ಸುಲೈಮಾನ್ ಹಾಜಿ, ಹಸನ್ ಹಾಜಿ,ಮುಸ್ತಫ, ಅಝೀಝ್ ಉಮಿಕ್ಕಲ,ಸಂಶುದ್ಧೀನ್ ಝಂಝಂ,ಹನೀಫ್ ಹಾಜಿ ಇಂದ್ರಾಜೆ ಸಹಿತ ಕೇಂದ್ರ ಸಮಿತಿ ಸದಸ್ಯರು, ಬಶೀರ್ ಕೆ.ಎ ಹಾಗೂ ಕರ್ನಾಟಕ ಮುಸ್ಲಿಂ ಜಮಾಅತ್,SჄS,SSF ನಾಯಕರಾದ ಮಹಮ್ಮದ್ ಹಾಜಿ ಕರಾವಳಿ,ಹಸನ್ ಕುರಿಯಾಜೆ, ಶಾಕಿರ್ ಬೆಳ್ಳಾರೆ, ಅನೀಸ್ ಬೆಳ್ಳಾರೆ ಸಹಿತ ಹಲವಾರು ನಾಯಕರು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸದ ದಾರುಲ್ ಹಿಕ್ಮ ಸಂಸ್ಥೆಯ ಇಬ್ಬರು ಸಹಾಯಿಗಳಿಗೆ ಮೆಮೆಂಟೊ ನೀಡಿ ಗೌರವಿಸಲಾಯಿತು ಕೊನೆಯಲ್ಲಿ ಸೀರಣಿ ವಿತರಿಸಿ ಮೂರು ಸ್ವಲಾತ್ ನೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.