ದೋಹಾ : ವಿವಿಧತೆಯಲ್ಲಿ ಏಕತೆಯನ್ನು ಸಾರುವ ಸುಂದರ ಭಾರತದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಸಾರ್ವಜನಿಕ ಆರೋಗ್ಯ ಬದ್ಧತೆಯೊಂದಿಗೆ ಆಚರಿಸುವ ಉದ್ದೇಶದಿಂದ, ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಖತರ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಗಸ್ಟ್ 15, 2025 ರಂದು ಖತರ್ ನ ಪ್ರತಿಷ್ಠಿತ ಪ್ರಾಥಮಿಕ ಸಾರ್ವಜನಿಕ ಆರೋಗ್ಯ ಸಂಸ್ಥೆಯಾದ ಹಮದ್ ಮೆಡಿಕಲ್ ಕಾರ್ಪೊರೇಷನ್ ಸಹಭಾಗಿತ್ವದೊಂದಿಗೆ ದೋಹಾ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಅಮೇರಿಕನ್ ಹಾಸ್ಪಿಟಲ್ ನಲ್ಲಿ ನಡೆಯಿತು.

ಬೆಳಿಗ್ಗೆ 7:00 ರಿಂದ ಸಂಜೆ 3:00 ಗಂಟೆಯವರೆಗೆ ನಡೆದ ರಕ್ತದಾನ ಶಿಬಿರದಲ್ಲಿ ಸರಿಸುಮಾರು 124 ಜನರು ರಕ್ತದಾನಗೈದರೆ, ಅಮೇರಿಕನ್ ಹಾಸ್ಪಿಟಲ್ ನ ಸಹಭಾಗಿತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ವಿವಿಧ ರೀತಿಯ ತಪಾಸಣೆಯನ್ನು ನಡೆಸಿ ಕಾರ್ಯಕ್ರಮದ ಪ್ರಯೋಜನೆಯನ್ನು ಪಡೆದುಕೊಂಡಿದ್ದಾರೆ. ರಕ್ತದಾನಗೈದ ಪ್ರತೀ ದಾನಿಗಳಿಗೆ ಮತ್ತು ಹಮದ್ ಮೆಡಿಕಲ್ ಕಾರ್ಪೊರೇಷನಿನ ಆರೋಗ್ಯ ಸಿಬ್ಬಂದಿಗಳಿಗೆ ಕೆಸಿಎಫ್ ಖತರ್ ವತಿಯಿಂದ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ನೀಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಶಾಂತಿ ಸೌಹಾರ್ದತೆಯ ಸಂಕೇತವಾದ ಭಾರತದ ರಾಷ್ಟ್ರಧ್ವಜವನ್ನು ಎದೆಯಲ್ಲಿ ಜೋಡಿಸಿಕೊಂಡ 30 ರಷ್ಟು ಕೆಸಿಎಫ್ ಸ್ವಯಂ ಸೇವಕರು ಕಾರ್ಯಕ್ರಮದ ಯಶಸ್ವಿಯಲ್ಲಿ ಉತ್ತಮ ಪಾತ್ರವನ್ನು ವಹಿಸಿದ್ದಾರೆ.
ಆರಂಭದಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೆಸಿಎಫ್ ಖತರ್ ಸಂಘಟನಾ ವಿಭಾಗದ ಅಧ್ಯಕ್ಷರಾದ ಸತ್ತಾರ್ ಅಶ್ರಫಿ ಮಠರವರು ಅಧ್ಯಕ್ಷತೆ ವಹಿಸಿದರು, ಅಮೆರಿಕನ್ ಹಾಸ್ಪಿಟಲ್ ನ ವ್ಯವಸ್ಥಾಪಕರಾದ ಡಾ.ಬಿಗೇಶ್ ಉಣ್ಣಿಕೃಷ್ಣನ್ ರವರು ಉದ್ಘಾಟಿಸಿ, ಕೆಸಿಎಫ್ ಖತರ್ ಆಯೋಜಿಸಿರುವ ಈ ಶಿಬಿರ ಬಗ್ಗೆ ಬಹಳ ಪ್ರಶಂಸೆಯ ಮಾತುಗಳನ್ನಾಡಿದರು. ಐ.ಸಿ.ಎಫ್ ಖತರ್ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಬಷೀರ್ ಪುತ್ತುಪಾಡಂ ಹಾಗೂ RSC ಖತರ್ ಪ್ರಧಾನ ಕಾರ್ಯದರ್ಶಿ ಸಲೀಂ ಮಲಪ್ಪುರಂ ರವರು ಶಿಬಿರಕ್ಕೆ ಶುಭಹಾರೈಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಸ್ಥಳೀಯ ಮಟ್ಟದಲ್ಲಿ ಗಮನಾರ್ಹ ಸೇವೆಯನ್ನು ಸಲ್ಲಿಸುತ್ತಿರುವ ಅಮೇರಿಕನ್ ಹಾಸ್ಪಿಟಲ್ ಗೆ ಸ್ಮರಣಿಕೆಯನ್ನು ನೀಡಿ ಕೆಸಿಎಫ್ ಖತರ್ ವತಿಯಿಂದ ಗೌರವಿಸಲಾಯಿತು. ವೇದಿಕೆಯಲ್ಲಿ, ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಹಾಫಿಲ್ ಉಮರುಲ್ ಫಾರೂಕ್ ಸಖಾಫಿ, ಐ.ಸಿ.ಎಫ್ ಖತರ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶಾ ಕ್ಯಾಲಿಕಟ್, ಐ.ಸಿ.ಎಫ್ಖತರ್ ಮೋರಲ್ ಶಿಕ್ಷಣ ಕಾರ್ಯದರ್ಶಿ ಫಕ್ರುದ್ದೀನ್ ಪೆರಿಂಗೊಟ್ಟುಕ್ಕರ್ , ಅಮೆರಿಕನ್ ಹಾಸ್ಪಿಟಲ್ ಜನರಲ್ ಪ್ರಾಕ್ಟಿಷನೇರ್ ಡಾ. ಅಯ್ಮಾನ್ ಉಪಸ್ಥಿತರಿದ್ದರು.
ಕೆ.ಸಿ.ಎಫ್ ಖತರ್ ಪ್ರೊಫೆಷನಲ್ ವಿಭಾಗದ ಕಾರ್ಯದರ್ಶಿ ಝಕರಿಯ್ಯಾ ಸಮ್ಜಾದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಘಟನೆ ವಿಭಾಗದ ಕಾರ್ಯದರ್ಶಿ ಫಾರೂಕ್ ಜೆಪ್ಪು ವಂದಿಸಿದರು.


