ಉಳ್ಳಾಲ: ಭಾರತದ 79 ನೇ ಸ್ವಾತಂತ್ರೋತ್ಸವವನ್ನು ಕಿನ್ಯಾ, ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ ಪೂಜಾರಿ ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ಕಿನ್ಯ ಪಂಚಾಯತ್ ಉಪಾಧ್ಯಕ್ಷರಾದ ಫಾರೂಕ್ ಕಿನ್ಯ ಅವರು ಸ್ವಾತಂತ್ರೋತ್ಸವ ಕುರಿತು ಸಂದೇಶ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಕಿನ್ಯ ಮೂರನೇ ವಾರ್ಡಿನಲ್ಲಿ ಹಲವಾರು ವರ್ಷಗಳಿಂದ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಿದ ರೇವತಿ ಟೀಚರ್, ಹಮೀದ್ ಮಿಂಪ್ರಿ ಮತ್ತು ಅಹ್ಮದ್ ಬಾವು ಪಡ್ಪು ಇವರಿಗೆ ಮೂರನೇ ವಾರ್ಡ್ ಸದಸ್ಯರ ವತಿಯಿಂದ ಸನ್ಮಾನಿಸಲಾಯಿತು.

ಮೂರನೇ ವಾರ್ಡಿನಲ್ಲಿ ಯುವಕರಿಗೆ ಇಂಡಿಪೆಂಡೆನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟವನ್ನು ಏರ್ಪಡಿಸಿ ಅದರ ವಿಜೇತ ತಂಡಕ್ಕೆ ಬಹುಮಾನ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಕಿನ್ಯ ಪಂಚಾಯತ್ ಅಧ್ಯಕ್ಷರಾದ ಮಾಲಿನಿ, ಉಪಾಧ್ಯಕ್ಷರಾದ ಫಾರೂಕ್ ಕಿನ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ತುಳಸಿ,ಕಿನ್ಯ ಗ್ರಾಮ ಪಂಚಾಯತ್ ಸದಸ್ಯರಾದ ಸಯ್ಯದ್ ತ್ವಾಹ ತಂಗಳ್, ಬುಶ್ರಾ ಹನೀಫ್, ಮಿಂಪ್ರಿ ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಮಿಂಪ್ರಿ, ಮಸೀದಿ ಉಪಾಧ್ಯಕ್ಷರಾದ ಲತೀಫ್ ಮಿಂಪ್ರಿ, ಅಂಗನವಾಡಿ ಮೇಲ್ವಿಚಾರಕಿ ಶ್ರೀಮತಿ ರೇವತಿ, ಆನಂದ್ ಮಿಂಪ್ರಿ ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು.ಆರಿಫ್ ಕಿನ್ಯ ಧನ್ಯವಾದ ಸಲ್ಲಿಸಿದರು.







