ಬೆಳ್ತಂಗಡಿ ; ಭಾರತದ 79 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಭಾಗವಾಗಿ ‘ಹೋರಾಟದ ಮೆಲುಕು’ ಕಾರ್ಯಕ್ರಮಕ್ಕೆ ಉಳ್ತೂರು ಮುಹ್ಯಿದ್ದೀನ್ ಜುಮಾ ಮಸ್ಜಿದ್ ವಠಾರದಲ್ಲಿ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
ಅಧ್ಯಕ್ಷರಾದ ಯು. ಅಬ್ಬಾಸ್ ಹಾಜಿಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುದರ್ರಿಸರಾದ ತೌಸೀಫ್ ಸಅದಿ ಹರೇಕಳರವರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವದ ಭಾಗವಾಗಿ ಖಾದಿರಿಯ್ಯ ಮದ್ರಸದ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸದರ್ ಮುಅಲ್ಲಿಂ ನವಾಝ್ ಸಅದಿ ಕಕ್ಯಪದವು, ನಈಮಿ ಅಝ್‌ಹರಿ ಪಿಲ್ಯ, ಉಪಾಧ್ಯಕ್ಷರಾದ ಕೆ.ಎಚ್ ಅಝೀಝುದ್ದೀನ್ ಕೋಡಿಮಜಲು, ಪ್ರಧಾನ ಕಾರ್ಯದರ್ಶಿ ಯು.ಎಚ್ ಇಬ್ರಾಹಿಂ, ಕೋಶಾಧಿಕಾರಿ ಮುಸ್ತಫಾ ತಂಙಳ್, ಆಡಳಿತ ಸಮಿತಿ ಸದಸ್ಯರಾದ ಯು.ಎಂ ಅಬ್ದುರ್ರಹ್ಮಾನ್, ಎಸ್‌ವೈಎಸ್ ಉಳ್ತೂರು ಅಧ್ಯಕ್ಷರಾದ ಬಿ.ಮುಹಮ್ಮದ್, ಮಂಗಳತೇರು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಇನ್ನಿತರರು ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಕೊನೆಗೊಳಿಸಲಾಯಿತು.







