janadhvani

Kannada Online News Paper

ಸೌದಿ: 20 ಗಂಟೆಗಳಲ್ಲಿ ಚೆಕ್ ಔಟ್ – ಜಾಗತಿಕ ಹಾಸ್ಪಿಟಾಲಿಟಿ ನೀತಿ ಜಾರಿಗೆ

ಗ್ರಾಹಕ ಕೊಠಡಿಯನ್ನು ಬಳಸಬಹುದಾದ ಗರಿಷ್ಠ ಸಮಯವೆಂದರೆ, 20 ಗಂಟೆಗಳಾಗಿರುತ್ತವೆ.

ರಿಯಾದ್: ಹಾಸ್ಪಿಟಾಲಿಟಿ (ಆತಿಥ್ಯ) ಸಂಸ್ಥೆಗಳಲ್ಲಿ 20 ಗಂಟೆಗಳ ನೀತಿಯನ್ನು ಸೌದಿ ಅರೇಬಿಯಾದಲ್ಲಿ ಜಾರಿಗೆ ತರಲಾಗಿದೆ. ಇನ್ನು ಮುಂದೆ, ಗ್ರಾಹಕರು ತಡವಾಗಿ ಚೆಕ್ ಇನ್ ಆದರೂ, 20 ಗಂಟೆಗಳ ಒಳಗೆ ಚೆಕ್ ಔಟ್ ಮಾಡಬೇಕಾಗಿದೆ. ಹೊಸ ನೀತಿಯು ಜಾಗತಿಕ ಹಾಸ್ಪಿಟಾಲಿಟಿ ಮಾನದಂಡಗಳನ್ನು ಅನುಸರಿಸುವ ಭಾಗವಾಗಿದೆ.

ಸೌದಿ ಪ್ರವಾಸೋದ್ಯಮ ಸಚಿವಾಲಯ ನೇತೃತ್ವದಲ್ಲಿ ಈ ಹೊಸ ಕ್ರಮವನ್ನು ಜಾರಿಗೆ ತರಲಾಗಿದೆ. ಇದರ ಪ್ರಕಾರ, ಗ್ರಾಹಕ ಕೊಠಡಿಯನ್ನು ಬಳಸಬಹುದಾದ ಗರಿಷ್ಠ ಸಮಯವೆಂದರೆ, 20 ಗಂಟೆಗಳಾಗಿರುತ್ತವೆ. ಜಾಗತಿಕ ಆತಿಥ್ಯ ಮಾನದಂಡಗಳನ್ನು ಅನುಸರಿಸುವ ಮತ್ತು ಆತಿಥ್ಯ ಸಂಸ್ಥೆಗಳಿಗೆ ಕೊಠಡಿಯನ್ನು ಸಿದ್ಧಪಡಿಸಲು ಸಾಕಷ್ಟು ಸಮಯವನ್ನು ನೀಡುವ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಚೆಕ್-ಇನ್ ಮತ್ತು ಚೆಕ್-ಔಟ್ ಸಮಯವನ್ನು ಸಂಸ್ಥೆಗಳು ನಿರ್ಧರಿಸುತ್ತವೆ. ಇದನ್ನು ಬುಕಿಂಗ್ ದಾಖಲೆಯಲ್ಲಿ ನಿರ್ದಿಷ್ಟಪಡಿಸಬೇಕು. ಕೊಠಡಿ, ಸೌಲಭ್ಯಗಳು ಮತ್ತು ಸೇವೆಗಳನ್ನು ಚಿತ್ರಗಳ ಸಹಿತ ಗ್ರಾಹಕರು ಅರ್ಥಮಾಡಿಕೊಳ್ಳುವ ರೀತಿಯಲ್ಲಿ ಪ್ರಕಟಿಸಬೇಕು ಎಂದು ಸಚಿವಾಲಯ ಹೇಳಿದೆ.