janadhvani

Kannada Online News Paper

ಸೌದಿ: ತ್ವಾಯಿಫ್‌ನಲ್ಲಿ ಯಾಂತ್ರಿಕ ಉಯ್ಯಾಲೆ ದುರಂತ- 23 ಮಂದಿಗೆ ಗಾಯ, 3 ಜನರ ಸ್ಥಿತಿ ಗಂಭೀರ

'ಗೇಮ್ ಆಫ್ ಡೆತ್' ಎಂದು ಕರೆಯಲ್ಪಡುವ ಈ ಉಯ್ಯಾಲೆ ಕಾರ್ಯಾಚರಣೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ.

ತ್ವಾಯಿಫ್: ಸೌದಿ ಅರೇಬಿಯಾದ ತ್ವಾಯಿಫ್‌ನಲ್ಲಿರುವ ಖಾಸಗಿ ಉದ್ಯಾನವನದಲ್ಲಿ ಯಾಂತ್ರಿಕ ಉಯ್ಯಾಲೆ ಕುಸಿದು ಬಿದ್ದಿದೆ. ಅಲ್-ಹದಾದ ಉದ್ಯಾನವನದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 23 ಜನರು ಗಾಯಗೊಂಡಿದ್ದಾರೆ. ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಅಪಘಾತದ ನಂತರ ಉದ್ಯಾನವನದ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

‘ಗೇಮ್ ಆಫ್ ಡೆತ್’ ಎಂದು ಕರೆಯಲ್ಪಡುವ ಈ ಉಯ್ಯಾಲೆ ಕಾರ್ಯಾಚರಣೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ರಜಾದಿನವನ್ನು ಆಚರಿಸಲು ಆಗಮಿಸಿದ್ದವರು ಅಪಘಾತಕ್ಕೆ ಈಡಾಗಿದ್ದಾರೆ. ಅಪಘಾತದ ಭಯಾನಕ ವೀಡಿಯೊ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿವೆ. ವೀಡಿಯೋ

ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ, ರೆಡ್ ಕ್ರೆಸೆಂಟ್ ಮತ್ತು ನಾಗರಿಕ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಗಾಯಾಳುಗಳನ್ನು ತಕ್ಷಣ ಕಿಂಗ್ ಅಬ್ದುಲ್ ಅಝೀಝ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಘಟನೆಯ ಬಗ್ಗೆ ನಿಖರವಾದ ತನಿಖೆಯನ್ನು ಘೋಷಿಸಲಾಗಿದೆ. ಉದ್ಯಾನವನದ ಸುರಕ್ಷತಾ ಮಾನದಂಡಗಳು ಮತ್ತು ಅಪಘಾತದ ಕಾರಣಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ.