ಬೆಂಗಳೂರು,ಜು.26: ಸುನ್ನೀ ಯುವಜನ ಸಂಘ ಕರ್ನಾಟಕ ರಾಜ್ಯ ಸಮಿತಿಯ ಕಾರ್ಯಕಾರಿ ಸಭೆಯು ಇಂದು ಬೆಂಗಳೂರಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಮೌಲಾನಾ ಶಾಫಿ ಸಅದಿಯವರು, ಇತ್ತೀಚೆಗೆ ಕರಾವಳಿ ಭಾಗದಲ್ಲಿ ಸಂಚಲನ ಮೂಡಿಸಿದ ಎಸ್ ವೈ ಎಸ್ ಸೌಹಾರ್ದ ಸಂಚಾರದ ಬಗ್ಗೆ ರಾಜ್ಯ ಸಮಿತಿಯನ್ನು ಅಭಿನಂದಿಸಿದರು.

ಇದೇ ವೇಳೆ, ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೌಲಾನಾ ಎನ್ ಕೆ ಎಂ ಶಾಫಿ ಸಅದಿ ಅವರನ್ನು ಎಸ್‌ವೈಎಸ್ ರಾಜ್ಯ ಸಮಿತಿಯ ವತಿಯಿಂದ ಗೌರವಿಸಲಾಯಿತು.
ಸಮಿತಿಯ ರಾಜ್ಯಾಧ್ಯಕ್ಷರಾದ ಬಶೀರ್ ಸಅದಿ ಪೀಣ್ಯ , ಪ್ರಧಾನ ಕಾರ್ಯದರ್ಶಿ ಕೆ.ಎಂ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ , ಕೋಶಾಧಿಕಾರಿ ಮನ್ಸೂರ್ ಅಲಿ ಕೋಟು ಗದ್ದೆ ಸಹಿತ ಸಮಿತಿಯ ರಾಜ್ಯ ನಾಯಕರು ಸಭೆಯಲ್ಲಿ ಹಾಜರಿದ್ದರು.
ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿರುವ ಶಾಫಿ ಸಅದಿಯವರು “ಸಂಘಟನೆಯ ಅನುಭವಸ್ಥ ಸಕ್ರಿಯ ನಾಯಕರನ್ನು ಒಳಗೊಂಡಿರುವ ಎಸ್ ವೈ ಎಸ್ ರಾಜ್ಯ ಸಮಿತಿ, ಸಂಘಟನೆಯ ಚುರುಕಾದ ಕಾರ್ಯಚಟುವಟಿಕೆಗಳಿಂದ ಕೂಡಿರುವ ಬಲಿಷ್ಠ ನಾಯಕರನ್ನು ಒಳಗೊಂಡಿದೆ” ಎಂದಿದ್ದಾರೆ.


