ಮಂಗಳೂರು: ಕಾರುಣ್ಯ ಸೇವೆಯ ಮೂಲಕ ಜನಪ್ರಿಯವಾದ ಅನಿ ಟ್ರೇಡಿಂಗ್ ಸಂಸ್ಥೆಯು 6 ವರ್ಷ ಪೂರೈಸಿ 7ನೇ ವರ್ಷಕ್ಕೆ ಹೆಜ್ಜೆ ಹಾಕುತ್ತಿದೆ.
ಈ ಸಂದರ್ಭದಲ್ಲಿ ಒಂದು ವರ್ಷದ ವಿವಿಧ ಯೋಜನೆಗಳನ್ನು ನಡೆಸಲಿದ್ದೇವೆ ಹಾಗೂ ವಾರ್ಷಿಕ ದಿನದ ಪ್ರಯುಕ್ತ 25ಬಡ ಮಕ್ಕಳಿಗೆ ಕಲಿಕೆಗೆ ಸಹಾಯ ನೀಡುವುದಾಗಿ ಸಂಸ್ಥೆಯ ಸ್ಥಾಪಕ ಲತೀಫ್ ಗುರುಪುರ ತಿಳಿಸಿದ್ದಾರೆ.
ಈ 6 ವರ್ಷದಲ್ಲಿ ಹಲವಾರು ಯುವಕರಿಗೆ ಉದ್ಯೋಗ ಕೊಡುವಲ್ಲಿ ಹಾಗೂ ಹಲವಾರು ಸಾಮಾಜಿಕ ಚಟುವಟಿಕೆ ನಡೆಸಲು ಸಾಧ್ಯವಾಗಿದೆ.
ಇವುಗಳಿಗೆ ಪ್ರಮುಖ ಕಾರಣ ನಮ್ಮ ಜೊತೆಗೆ ಕೆಲಸ ನಿರ್ವಹಿಸುವ ಹಿತೈಷಿಗಳು ಎಂದು ಅವರು ತಿಳಿಸಿದ್ದಾರೆ.
ಯಶಸ್ವಿಯಾಗಿ ಮುನ್ನಡೆಯುವ ಈ ಸಂಸ್ಥೆಯ ಹಿಂದೆ ತಾಯಿಯ ಆಶೀರ್ವಾದ ಜೊತೆಗೆ ಉಲಮಾಗಳ ದುಆ ಕೂಡಾ ಇದೆ ಎಂದು ಲತೀಫ್ ಗುರುಪುರ ತಿಳಿಸಿದ್ದಾರೆ.
7ನೇ ವರ್ಷದಲ್ಲಿ 7 ಹೆಣ್ಣುಮಕ್ಕಳ ಸಾಮೂಹಿಕ ವಿವಾಹ 7 ಸಾಧಕರಿಗೆ ಪ್ರಶಸ್ತಿ ಪ್ರಧಾನ, ಬಡ ಕುಟುಂಬಕ್ಕೆ 7 ಆಟೋ ರಿಕ್ಷಾ ನೀಡುವುದು ಹೀಗೆ ಹಲವಾರು ವಿನೂತನ ಸೇವೆ ನೀಡುವ ಬಗ್ಗೆ ಅವರು ತಿಳಿಸಿದ್ದಾರೆ.