janadhvani

Kannada Online News Paper

ಎಸ್‌ವೈಎಸ್ ಸೌಹಾರ್ದ ಸಂಚಾರ: ಜುಲೈ 4 ಮತ್ತು 6 ರಂದು ಸ್ವಾಗತ ಸಮಿತಿ ರೂಪೀಕರಣ ಸಭೆ

ಜುಲೈ 14,15 16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ಸೌಹಾರ್ದ ಸಂಚಾರ ನಡೆಯಲಿದೆ

ಕರಾವಳಿ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆಯ ಪರಂಪರೆಯನ್ನು ಉಳಿಸುವ ಉದ್ದೇಶದಿಂದ ಎಸ್‌ವೈಎಸ್ ರಾಜ್ಯ ಸಮಿತಿಯ ವತಿಯಿಂದ ಜುಲೈ 14,15 16 ದಿನಾಂಕಗಳಲ್ಲಿ ಕುಂದಾಪುರದಿಂದ ಸುಳ್ಯ ತನಕ ಸೌಹಾರ್ದ ಸಂಚಾರ ನಡೆಯಲಿದೆ. ಈ ಪ್ರಯುಕ್ತ ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ವ್ಯಾಪ್ತಿಯ ಕೇಂದ್ರಗಳ ಸ್ವಾಗತ ಸಮಿತಿ ರೂಪೀಕರಣ ಸಭೆಯು ಜುಲೈ 4 ಹಾಗೂ 6 ರಂದು ನಡೆಯಲಿದೆ.

ಬಿ.ಸಿ‌ ರೋಡ್ ಕೇಂದ್ರದ ಸ್ವಾಗತ ಸಮಿತಿಯು ಜುಲೈ 4 ಸಂಜೆ 4:30 ಗಂಟೆಗೆ ಎಸ್‌ಎಸ್‌ ಆಡಿಟೋರಿಯಂ ಪಾಣೆಮಂಗಳೂರು ಹಾಗೂ ಕಲ್ಲಡ್ಕ ಕೇಂದ್ರದ ಸ್ವಾಗತ ಸಮಿತಿಯು ಜುಲೈ 4 ಸಂಜೆ 7:00 ಗಂಟೆಗೆ ದಾರುಲ್ ಅಶ್ಅರಿಯ್ಯಾ ಸುರಿಬೈಲು ಹಾಗೂ ಮಂಗಳೂರು ಮತ್ತು ಪರಂಗಿಪೇಟೆ ಕೇಂದ್ರದ ಸ್ವಾಗತ ಸಮಿತಿಯು ಜುಲೈ 6 ಬೆಳಿಗ್ಗೆ 7 ಗಂಟೆಗೆ ಅಲ್ ಹಸನ್ ಅಕಾಡಮಿ ಬೀರ್ಪುಗುಡ್ಡೆ, ಅಡ್ಯಾರ್ ನಲ್ಲಿ ನಡೆಯಲಿದೆ ಎಂದು ಎಸ್‌ವೈಎಸ್ ದ.ಕ ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಮಾಸ್ಟರ್ ಮರಿಕ್ಕಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.