janadhvani

Kannada Online News Paper

ನಿಖರ ಮಾಹಿತಿಗಳನ್ನು ಜನರಿಗೆ ತಲುಪಿಸುವಲ್ಲಿ ಅತ್ಯಂತ ಪ್ರಾಮಾಣಿಕತೆ ಮೆರೆದ ಮಾಧ್ಯಮ

ಸುದ್ದಿಗಳು ಸಿಕ್ಕಿದರೆ ಸಾಕು ಎಂಬ ಹುಂಬುತನಕ್ಕೆ ಬೀಳದೆ ಸಿಕ್ಕ ಸುದ್ದಿಗಳ ಸುತ್ತ ಸತ್ಯತೆಯನ್ನು ಹುಡುಕಿ ಅದು ಸತ್ಯವಾಗಿದ್ದರೆ ಮಾತ್ರ ಪ್ರಕಟಿಸುವ ಜನಧ್ವನಿಯ ನಿಲುವು ಮಾಧ್ಯಮಗಳಿಗೆ ಮಾದರಿ ಕೂಡ ಹೌದು‌.

ಜನಧ್ವನಿಗೆ ಸ್ಪಟಿಕದ ಸಂಭ್ರಮ

✍️ ಎಂ ಹೆಚ್ ಹಸನ್ ಝುಹ್‌ರಿ, ಮಂಗಳಪೇಟೆ

ಮಾಧ್ಯಮಗಳು ಜನಪರವಾಗಿರಬೇಕು ಮತ್ತು ವಸ್ತುನಿಷ್ಠ ವರದಿಗಳನ್ನು ಮಾತ್ರ ಪ್ರಕಟಿಸಬೇಕು. ಜನರನ್ನು ವಂಚಿಸುವ ಸುಳ್ಳು ಸುದ್ದಿಗಳು ಪ್ರಕಟಿಸಿದರೆ ಜನರು ಮಾಧ್ಯಮ ಮೇಲಿನ ನಂಬಿಕೆಯನ್ನು ಕಳೆದು ಕೊಳ್ಳುತ್ತಾರೆ. ಬಳಿಕ ಆ ಮಾಧ್ಯಮಗಳು ಯಾವ ವರದಿ ಪ್ರಕಟಿಸಿದರೂ ಜನರು ಸಂಶಯ ದೃಷ್ಟಿಯಿಂದ ನೋಡುತ್ತಾರೆ. ಇಂದಿನ ಬಹುತೇಕ ಮಾಧ್ಯಮಗಳ ವರದಿಗಳು ನಂಬಿಕೆಗೆ ಅರ್ಹವೇ ? ಎಂದು ಜನರು ಭಾವಿಸುವಂತಾಗಿದೆ. ಈ ನಡುವೆ ಜನಪರವಾಗಿ ಮತ್ತು ಕರಾರುವಕ್ಕಾದ ವರದಿಗಳ ಮೂಲಕ ಜನ ಮನ ಸೆಳೆದ ಆನ್‌ಲೈನ್ ಮಾಧ್ಯಮವಾಗಿದೆ ಜನಧ್ವನಿ.

ನಿಖರವಾದ ಮಾಹಿತಿಗಳನ್ನು ಮಾತ್ರ ಜನರಿಗೆ ತಲುಪಿಸುವಲ್ಲಿ ಅತ್ಯಂತ ಪ್ರಾಮಾಣಿಕತೆ ಮೆರೆದ ಮಾಧ್ಯಮ. ವರದಿ ಪ್ರಕಟಿಸಿದರೆ ಸಾಕು, ಅದರ ವಾಸ್ತ ನೋಡಬೇಕಾಗಿಲ್ಲ ಎಂಬ ಬರಗೆಟ್ಟ ನೀತಿಯನ್ನು ಅನುಸರಿಸದೆ ಯಾವ ವರದಿಗಳೇ ಆಗಿರಲಿ ಆತುರ ತೋರದೆ ಅದರ ಸತ್ಯಾಸತ್ಯತೆಯನ್ನು ಅರಿತು ವಾಸ್ತವ ಎಂದು ತಿಳಿದ ಮೇಲೆಯೇ ಪ್ರಕಟಿಸುವ ಜನಧ್ವನಿ ಆನ್‌ಲೈನ್ ಮಾಧ್ಯಮ ಜನರ ನಂಬಿಕೆಯನ್ನು ಉಳಿಸಿಕೊಂಡಿದೆ ಮತ್ತು ವರದಿಗಳ ಗುಣಮಟ್ಟಗಳನ್ನು ಕಾಯ್ದುಕೊಂಡಿದೆ.

ಹದಿನೈದು ವರ್ಷ ಪೂರ್ತಿಗೊಳಿಸಿ ಸ್ಪಟಿಕ ಸಂಭ್ರಮದಲ್ಲಿರುವ ಜನಧ್ವನಿಯು ದೇಶದ ಸುದ್ದಿಯಂತೆ ವಿದೇಶಗಳ ಸುದ್ದಿಗೂ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ. ವಿದೇಶಗಳಲ್ಲಿ ಏನೇ ನಡೆದರು ಅದನ್ನು ವರದಿ ಮಾಡುವ ಮೂಲಕ ಜನರಿಗೆ ವಿದೇಶ ಸುದ್ದಿ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ವಿದೇಶದಲ್ಲಿ ದುಡಿಯುವವರ ಕುಟುಂಬಗಳಿಗೆ ವಿದೇಶ ಸುದ್ದಿಗಳಲ್ಲಿ ಹೆಚ್ಚು ಆಸಕ್ತಿ. ಹಾಗಾಗಿ ಅವರು ನಿಖರ ಮತ್ತು ಸತ್ಯ ಸುದ್ದಿ ಗಳಿಗಾಗಿ ಜನಧ್ವನಿ ಯನ್ನು ಆಶ್ರಯಿಸುತ್ತಾರೆ‌. ತಮಗೆ ಬರುವ ಎಲ್ಲಾ ಸುದ್ದಿ ಗಳನ್ನು ಉಚಿತ ವಾಗಿ ಪ್ರಕಟಿಸುವ ಮೂಲಕ ಜನಮನ್ನಣೆ ಗಳಿಸಿದೆ. ಜನರಿಗೆ ನಿಜ ಸ್ಥಿತಿ ಗಳು ತಲುಪಬೇಕೆಂದು ಜನಧ್ವನಿಯ ಪ್ರಾಮಾಣಿಕ ಸೇವೆ ನಿಜಕ್ಕೂ ಅಭಿನಂದನಾರ್ಹ.‌

ಸುದ್ದಿಗಳು ಸಿಕ್ಕಿದರೆ ಸಾಕು ಎಂಬ ಹುಂಬುತನಕ್ಕೆ ಬೀಳದೆ ಸಿಕ್ಕ ಸುದ್ದಿಗಳ ಸುತ್ತ ಸತ್ಯತೆಯನ್ನು ಹುಡುಕಿ ಅದು ಸತ್ಯ ವಾಗಿದ್ದರೆ ಮಾತ್ರ ಪ್ರಕಟಿಸುವ ಜನಧ್ವನಿಯ ನಿಲುವು ಮಾಧ್ಯಮಗಳಿಗೆ ಮಾದರಿ ಕೂಡ ಹೌದು‌. ಪ್ರಕಟಿಸುವ ವರದಿಗಳಲ್ಲಿ ಪಕ್ಷಪಾತ ತೋರದೆ ನೈಜ ಸುದ್ದಿಗಳಿಗೆ ಮಾತ್ರ ಆದ್ಯತೆ ನೀಡುವ ಮೂಲಕ ಜನಧ್ವನಿ ಮನೆಮಾತಾಗಿದೆ. ಆನ್‌ಲೈನ್ ಮೂಲಕ ಸುದ್ದಿ ಗಳನ್ನು ಜನರಿಗೆ ತಲುಪಿಸುವ ಜನಧ್ವನಿಯೂ ಹದಿನೈದು ವರ್ಷ ಪೂರ್ತಿಗೊಲಿಸಿ ಮುನ್ನಡೆಯುತ್ತಿದೆ.‌ ನಿಖರ ಸುದ್ದಿಗಳಿಗಾಗಿ ಸುದ್ದಿ ಯಾದ ಜನಧ್ವನಿ ದೀರ್ಘ ಕಾಲ ಬದುಕುಳಿಯಲಿ ಎಂದು ಹಾರೈಸೋಣ.