ಮಸ್ಕತ್ : ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಅಲ್ಪಾವಧಿಯ ವಿಸಾವನ್ನು ಒಮಾನ್ ಪರಿಚಯಿಸುತ್ತಿದೆ. ಹತ್ತು ದಿನ ವೀಸಾಗೆ ಐದು ರಿಯಾಲ್‌ಗಳನ್ನು ಪಾವತಿಸಬೇಕಾಗುತ್ತದೆ.
ಒಂದು ತಿಂಗಳು ಮತ್ತು ಒಂದು ವರ್ಷಕ್ಕೆ ಕೂಡ ವೀಸಾ ಇದೆ. ಹೊಸ ತಿದ್ದುಪಡಿಯು ಪ್ರವಾಸೋದ್ಯಮ ವಲಯದಲ್ಲಿ ಒಂದು ಪ್ರಮುಖ ಬದಲಾವಣೆಯೆಂದು ನಿರೀಕ್ಷಿಸಲಾಗಿದೆ.
ವೀಸಾ ಬದಲಾವಣೆಯ ಶುಲ್ಕ 50 ರಿಯಾಲ್ ಆಗಿರುತ್ತದೆ. ಇದನ್ನು ಹಿಂತಿರುಗಿಸಲಾಗುವುದಿಲ್ಲ. ಕಳೆದ ವರ್ಷ ಕೂಡ ಸುಧಾರಣೆಗಳನ್ನು ತರಲಾಗಿತ್ತು. ಒಂದು ವರ್ಷದ ಪ್ರವಾಸಿ ವಿಸಾದಲ್ಲಿ ನೆಲೆಸಿರುವವರಿಗೆ ಮೂರು ವಾರಗಳಿಂದ ಒಂದು ತಿಂಗಳ ವರೆಗೆ ದೇಶದಲ್ಲಿ ಉಳಿಯಲು ವೀಸಾಗಳನ್ನು ವಿಸ್ತರಿಸಲಾಗುವುದು.
ಘೋಷಿಸಿದ 87 ಹುದ್ದೆಗಳಲ್ಲಿನ ವಿಸಾ ನಿಷೇಧವು 6 ತಿಂಗಳವರೆಗೆ ಮುಂದುವರಿಯಲಿದೆ.ಜನವರಿಯಲ್ಲಿ ಜಾರಿಗೆ ಬಂದ ವಿಸಾ ನಿಷೇದದ ಕಾಲಾವಧಿ ಮುಗಿಯುವ ಮುನ್ನ ನಿಷೇಧವನ್ನು ಜುಲೈ 30ರಿಂದ ವಿಸ್ತರಿಸಲಾಗಿದೆ. ಐಟಿ, ಲೆಕ್ಕಪತ್ರ ನಿರ್ವಹಣೆ, ಹಣಕಾಸು, ಮಾರ್ಕೆಟಿಂಗ್, ಮಾರಾಟ, ಆಡಳಿತ, ಮಾನವ ಸಂಪನ್ಮೂಲ, ವಿಮೆ, ಮಾಹಿತಿ ಮಾಧ್ಯಮ, ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ತಾಂತ್ರಿಕ ಇಲಾಖೆಗಳಲ್ಲಿ 87 ಹುದ್ದೆಗಳಲ್ಲಿ ನಿಷೇಧ ಮುಂದುವರಿಯಲಿವೆ. 2013 ರ ವಿವಿಧ ಹುದ್ದೆಗಳ ನಿಯಂತ್ರಣಗಳ ಹೊರತಾಗಿ ಈ ನಿಷೇದ ಎನ್ನಲಾಗಿದೆ.