ಉಳ್ಳಾಲ: ಯು.ಟಿ.ಎಂ ಚಾರಿಟೇಬಲ್ ಟ್ರಸ್ಟ್ ಉಳ್ಳಾಲ ಇದರ ವತಿಯಿಂದ ಯತೀಂ,ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಪುಸ್ತಕ ವಿತರಣಾ ಸಮಾರಂಭ ಇತ್ತೀಚೆಗೆ ಉಳ್ಳಾಲದ ಟ್ರಸ್ಟ್ ನ ಕಛೇರಿಯಲ್ಲಿ ನಡೆಯಿತು.
ಟ್ರಸ್ಟಿನ ಅಧ್ಯಕ್ಷರಾದ ಹಾಜಿ ಫಾರೂಕ್ ಅಬ್ಬಾಸ್ ಉಳ್ಳಾಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಮೊಯ್ದಿನ್ ಹಾಜಿ ಮೊಂಟೆಪದವು ಸ್ವಾಗತಿಸಿದರು. ಕಾರ್ಯಕಾರೀ ಸದಸ್ಯರಾದ ಅಬ್ದುಲ್ ಖಾದರ್ ಸಾದಾತ್ ಉಳ್ಳಾಲ ಉದ್ಘಾಟಿಸಿದರು.” ಈ ಸಂದರ್ಭದಲ್ಲಿ ಮಾತನಾಡಿದ ಹಾಜಿ ಫಾರೂಕ್ ಅಬ್ಬಾಸ್ ; “ವರ್ಷಂಪ್ರತಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆಗೆ ಉದಾರ ದೇಣಿಗೆ ನೀಡಿ ಸಹಕರಿಸುವ ಸಹೋದರರು ಎಂದಿಗೂ ಅಭಿನಂದನಾರ್ಹರು, ಎಂದು ಹೇಳಿದರು .
ಕೋಶಾಧಿಕಾರಿ ಬಶೀರ್ ಉಳ್ಳಾಲ, ಸದಸ್ಯರಾದ ಆರಿಫ್ ಡಿ.ಎಂ, ಉಪಸ್ಥಿತರಿದ್ದರು. ಶರೀಫ್ ಕೋಟಪುರ ಧನ್ಯವಾದವಿತ್ತರು.







