janadhvani

Kannada Online News Paper

ಸೌದಿಯಲ್ಲಿ ಮನೆಕೆಲಸದ ಮಹಿಳೆಯರಿಗೂ ಡ್ರೈವಿಂಗ್ ಲೈಸನ್ಸ್

ಜಿದ್ದಾ : ಸೌದಿ ಅರೇಬಿಯಾದಲ್ಲಿ ಮನೆಕೆಲಸದ ಮಹಿಳೆಯರಿಗೆ ಚಾಲನಾ ಪರವಾನಗಿಯನ್ನು ನಿಷೇಧಿಸಲು ಯಾವುದೇ ಕಾನೂನು ಜಾರಿಯಲ್ಲಿಲ್ಲ ಎಂದು ಟ್ರಾಫಿಕ್ ಅಥಾರಿಟಿ ತಿಳಿಸಿದೆ. ಮನೆಕೆಲಸದ ಮಹಿಳೆಯರೂ ಪರವಾನಗಿ ಪಡೆಯಬಹುದು. ಈ ಕಾನೂನುನಿಂದಾಗಿ ಲಕ್ಷಗಟ್ಟಲೆ ಮನೆಯ ಚಾಲಕರು ತಮ್ಮ ಕೆಲಸವನ್ನು ಕಳಕೊಳ್ಳಲಿರುವುದಾಗಿ ಅಂದಾಜಿಸಲಾಗಿದೆ.

ಸೌದಿ ಟ್ರಾಫಿಕ್ ಮುಖ್ಯಸ್ಥ ಕರ್ನಲ್ ಅಬ್ದುಲ್ಲಾ ಅಲ್ ಬಝಾಮಿ ಅವರು, ಮನೆಕೆಲಸದ ಮಹಿಳೆಯರನ್ನು ಡ್ರೈವಿಂಗ್ ನಿಂದ ತಡೆಯುವ ಕಾನೂನು ಸೌದಿ ಸಂಚಾರ ಕಾಯಿದೆಯಲ್ಲಿಲ್ಲ ಎಂದು ಹೇಳಿದರು.

ಕಾರ್ಮಿಕರ ಸಮಾಜ ಕಲ್ಯಾಣ ಸಚಿವಾಲಯವು ನಿನ್ನೆ ಮಹಿಳಾ ಚಾಲಕರನ್ನು ರಿಕ್ರೂಟ್ಮೆಂಟ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೆ ನೀಡಿತ್ತು. ಮನೆ ಕೆಲಸದ ಮಹಿಳೆಯರನ್ನು ಬೇಕಾದಲ್ಲಿ  ಡ್ರೈವರ್ಗಳಾಗಿಸ ಬಹುದು ಎನ್ನುವ ಸೂಚನೆ ಸಂಚಾರ ಮುಖ್ಯಸ್ಥರ ಸಲಹೆಯಲ್ಲಿದೆ. 190 ಮನೆಕೆಲಸದ ಮಹಿಳೆಯರು ಈಗಾಗಲೇ ತರಬೇತಿಗಾಗಿ ಅರ್ಹತೆ ಪಡೆದಿದ್ದಾರೆ ಮತ್ತು ಈ ಕ್ಷೇತ್ರಗಳಲ್ಲಿ ಹೆಚ್ಚಿನವರು ಅರ್ಹತೆ ಪಡೆಯಲಿದ್ದಾರೆ ಎಂದು ಅವರು ಹೇಳಿದರು.

ಮಹಿಳೆಯರು ಮತ್ತು ಮಹಿಳಾ ಕೆಲಸಗಾರರಿಗೆ ಹೌಸ್ ಡ್ರೈವಿಂಗ್ ಪರವಾನಗಿಗಳು ಲಭಿಸಿದ ನಂತರ ಕುಟುಂಬದ ಖರ್ಚು ವೆಚ್ಚಗಳನ್ನು ಕಡಿಮೆಗೊಳಿಸುವ ನೆಪದಲ್ಲಿ ಮನೆ ಚಾಲಕರನ್ನು ಕ್ರಮೇಣ ಕಡಿತ ಗೊಳಿಸುವ ಸಾಧ್ಯತೆ ಇದೆ. ಈ ಸನ್ನಿವೇಶದಲ್ಲಿ, ದೇಶದಲ್ಲಿ ಕೆಲಸ ಮಾಡುವ ಒಂದು ದಶಲಕ್ಷಕ್ಕೂ ಹೆಚ್ಚಿನ ಮನೆ ಚಾಲಕರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಮನೆ ಚಾಲಕರು ಮತ್ತು ಮನೆ ಕೆಲಸಗಾರರಿಗಾಗಿ ಸುಮಾರು 33 ದಶಲಕ್ಷ ರಿಯಾಲ್ ಗಳನ್ನು ದೇಶದಲ್ಲಿ ಖರ್ಚು ಮಾಡಲಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಜೀವನ ವೆಚ್ಚದಲ್ಲಿ ತಲಾ ಒಬ್ಬೊಬ್ಬರ ಆದಾಯದ ಮೇಲೆ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಅಂದಾಜಿಸುತ್ತಾರೆ.

ಅದೇ ವೇಳೆ,ಪಾನಮತ್ತರಾಗಿ ಅಥವಾ ಅಮಲು ಪದಾರ್ಥಗಳನ್ನು ಸೇವಿಸಿ ವಾಹನ ಚಲಾಯಿಸುವುದು, ಚಲಾವಣೆಯಿಂದ ಸಾವು ಸಂಭವಿಸುವಂತಹ ಗಂಭೀರ ಉಲ್ಲಂಘನೆಗಳಲ್ಲಿ ಭಾಗಿಯಾಗುವ ಮಹಿಳಾ ಚಾಲಕರನ್ನು ಬಂಧಿಸುವ ಸಲುವಾಗಿ ವಿಶೇಷ ಪಾಲನಾ ಕೇಂದ್ರಗಳನ್ನು ಸೌದಿ ಅರೇಬಿಯಾದಲ್ಲಿ ತೆರೆಯಲಾಗಿದೆ. ಸೌದಿ ಅರೇಬಿಯಾದಲ್ಲಿ ಮಹಿಳೆಯರು ವಾಹನ ಚಲಾಯಿಸಬಹುದು ಎನ್ನುವ ಕಾನೂನು ಜಾರಿಯಾಗಿ ಎರಡು ದಿನಗಳಲ್ಲಿ ಹೆಚ್ಚಿನ ಮಹಿಳೆಯರು ವಾಹನದೊಂದಿಗೆ ರಸ್ತೆಗಿಳಿದ ಬಗ್ಗೆ ವರದಿಯಾಗಿದೆ.

error: Content is protected !! Not allowed copy content from janadhvani.com