janadhvani

Kannada Online News Paper

ಭಾರೀ ಮಳೆ: DC ಆದೇಶ ಮೇರೆಗೆ ಶಾಲೆ, ಪಿಯು ಕಾಲೇಜು ರಜೆ- ಡಿಗ್ರಿ ಕಾಲೇಜುಗಳಿಗೆ ರಜೆ ನೀಡುವವರು ಯಾರು?

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರೀ ಗಾಳಿ ಮಳೆ ಬೀಸುತ್ತಿದೆ. ಎಲ್ಲೆಲ್ಲೂ ನೀರೆ. ಇವತ್ತು (ಸೋಮವಾರ) ನಾನು ಬೆಳಗ್ಗೆ ಸುರತ್ಕಲ್ ಕಡೆ ಹೊರಟು ಕೂಳೂರು ಹತ್ತಿರವಾಗುತ್ತಿದ್ದಂತೆ ಭಾರೀ ಗಾಳಿ ಬೀಸಿದ ಪರಿಣಾಮ ಗಾಡಿ ಚಲಾಯಿಸಲಾಗದೆ ಪಕ್ಕದ ಶೊರೂಂ ಸನಿಹದಲ್ಲಿ ನಿಂತೆ. ಹಲವು ಡಿಗ್ರಿ ವಿದ್ಯಾರ್ಥಿಗಳು ಬಸ್ಸಿಂದ ಇಳಿದು ಕಾಲೇಜು ಹೋಗುವುದು ಕಾಣಲು ಸಾಧ್ಯವಾಯ್ತು. ಅದರೆ ಎಲ್ಲರೂ ಬೀಸಿದ ಗಾಳಿ ಮಳೆಗೆ ಸಂಪೂರ್ಣ ಒದ್ದೆಯಾಗಿದ್ದರು. ಇವರು ಕಾಲೇಜು ಹೋಗಿ ಮೈಯಲ್ಲಿರುವ ಒದ್ದೆ ಬಟ್ಟೆಯಲ್ಲೇ ಹೇಗೆ ಕ್ಲಾಸ್ ನಲ್ಲಿ ಕೂರುವುದು!? . ಹೇಗೆ ಕಲಿಯುವರು?..ಎಂದು ಆಲೋಚಿಸಿದೆ.

ಮತ್ತೆ ನೇರವಾಗಿ ಜಿಲ್ಲಾಧಿಕಾರಿಯವರಿಗೆ ಕರೆ ಮಾಡಿ ವಿಚಾರಿಸಿದೆ. ಶಾಲಾ,ಪಿಯು ಕಾಲೇಜಿಗೆ ರಜೆ ಸೂಚಿಸಿದ್ದೀರಿ. ಡಿಗ್ರಿಯವರಿಗೆ ಯಾರು ರಜೆ ನೀಡಬೇಕೆಂದು‌ ಕೇಳಿದೆ. ಅದಕ್ಕೆ ಅವರು ಅದು ಆಯಾ ಶಾಲಾ ಮಂಡಳಿ ತೀರ್ಮಾನಿಸಬೇಕೆಂದರು. ಹೆತ್ತವರು ಪ್ರಿನ್ಸಿಪಾಲ್ ಗೆ ಕರೆ ಮಾಡಿ ತಿಳಿಸಲಿ ಎಂದರು.ಇದು ನಡೆಯುವ ಕೆಲಸವೇ…?

ಎಲ್ಲಾ ಡಿಗ್ರಿ ‌ಕಾಲೇಜು ಆಡಳಿತ ಮಂಡಳಿಯೊಂದಿಗೆ ಬಹಿರಂಗ ವಿನಂತಿ‌.

ಜಿಲ್ಲಾಧಿಕಾರಿಯವರು‌ ರಜೆ ಸೂಚಿಸದಿದ್ದರೂ, ಮಕ್ಕಳ ಸುರಕ್ಷತೆಗಾಗಿ ದಯವಿಟ್ಟು ‌ಪರಿಸ್ಥಿತಿ ತಿಳಿದು ಆಯಾ ಆಡಳಿತ ಮಂಡಳಿ ದಯವಿಟ್ಟು ರಜೆ ಘೋಷಿಸಬೇಕೆಂದು ವಿನಂತಿಸುತ್ತಿದ್ದೇನೆ.

ಅಶ್ರಫ್ ಕಿನಾರ ಮಂಗಳೂರು.

(ಉಪಾಧ್ಯಕ್ಷ ರು ದಕ್ಷಿಣ ಕನ್ನಡ ಜಿಲ್ಲಾ ವಕ್ಬ್ ಸಲಹಾ ಸಮಿತಿ)