janadhvani

Kannada Online News Paper

ಜಾರಿಗೆಬೈಲು: “ಫತ್’ಹೇ ಮುಬಾರಕ್-ಮದ್ರಸ ಪ್ರಾರಂಭೋತ್ಸವ

ಜಾರಿಗೆಬೈಲು:ಬದ್ರಿಯಾ ಜುಮ್ಮಾ ಮಸ್ಜಿದ್ ಜಾರಿಗೆಬೈಲು-ನಾಳ ಇದರ ಅಧೀನದಲ್ಲಿ, ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಸಿಲೆಬಸ್ ಪ್ರಕಾರ ಕಾರ್ಯಾಚರಿಸುತ್ತಿರುವ ‘ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸ’ದ ಪ್ರಸ್ತುತ ಶೈಕ್ಷಣಿಕ ವರ್ಷದ “ಫತ್’ಹೇ ಮುಬಾರಕ್”-‘ಮದ್ರಸಾ ಪ್ರಾರಂಭೋತ್ಸವ’ವು ಜಮಾಅತ್ ಅಧ್ಯಕ್ಷ ಜನಾಬ್ ಅಬ್ಬೋನು ಶಾಫೀ ಪಲ್ಲಾದೆಯವರ ಅಧ್ಯಕ್ಷತೆಯಲ್ಲಿ ನಡೆಯಿತು”

ಮದ್ರಸ ಮುಖ್ಯೋಪಾಧ್ಯಾಯರಾದ ಎನ್.ಎಂ.ಶರೀಫ್ ಸಖಾಫಿ ನೆಕ್ಕಿಲ್ ರವರು ಫತ್ಹೇ ಮುಬಾರಕ್ ಪ್ರಯುಕ್ತ ಮದ್ರಸ ಪ್ರಸ್ಥಾನದ ಮಹತ್ವಗಳನ್ನು ವಿವರಿಸಿದರು.ಸ್ಥಳೀಯ ಮುದರ್ರಿಸ್ ಅಬ್ದುರ್ರಹ್ಮಾನ್ ಬಾಖವಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ,ಮೌಲಿದ್ ಗೆ ನೇತೃತ್ವ ನೀಡಿದರು.ಸಮಿತಿ ಪರವಾಗಿ ಅಬ್ದುಲ್ ಕರೀಂ ಲತೀಫಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ನೂತನವಾಗಿ ಮದ್ರಸ ಸೇರ್ಪಡೆ ಬಯಸಿರುವ ವಿದ್ಯಾರ್ಥಿ ರಕ್ಷಕರಿಗೆ ಪ್ರವೇಶ ಪತ್ರ ವಿತರಿಸಲಾಯಿತು.ಜೊತೆಗೆ ಎಸ್ಸೆಸ್ಸೆಫ್ ವತಿಯಿಂದ “ಅಲಿಫ್ ಡೇ”ಕೂಡಾ ಹಮ್ಮಿಕೊಳ್ಳಲಾಗಿತ್ತು.ವೇದಿಕೆಯಲ್ಲಿ ಅಧ್ಯಾಪಕರಾದ ಅಬ್ದುರ್ರಝಾಖ್ ಸಅದಿ,ಮುಹಮ್ಮದ್ ರಫೀಕ್ ಮುಸ್ಲಿಯಾರ್, ಮಾಜಿ ಅಧ್ಯಕ್ಷರಾದ ಮುಹಮ್ಮದ್ ಅಲೀ ಹಾಜಿ, ಖಜಾಂಜಿ ಹಮೀದ್ ಮೆಸ್ಕಾಂ, ಪುತ್ತುಮೋನು ಕುಕ್ಕುಡಿ,ಕಾರ್ಯದರ್ಶಿ ಹಾರಿಸ್ ಕುಕ್ಕುಡಿ ಸಹಿತ ಹಲವು ಆಡಳಿತ ಸಮಿತಿ ಪದಾಧಿಕಾರಿಗಳು, ಎಸ್.ವೈ.ಎಸ್ ,ಎಸ್.ಎಸ್.ಎಫ್ ಮತ್ತು ಕೆ.ಸಿ.ಎಫ್ ಸದಸ್ಯರು ಹಾಗೂ ವಿದ್ಯಾರ್ಥಿ ರಕ್ಷಕರು,ಜಮಾಅತರು ಉಪಸ್ಥಿತರಿದ್ದರು.