janadhvani

Kannada Online News Paper

ಉಮ್ರಾ ಯಾತ್ರಿಕರು ಏಪ್ರಿಲ್ 29 ರ ಮುಂಚಿತವಾಗಿ ಸ್ವದೇಶಕ್ಕೆ ಮರಳಬೇಕು- ಹಜ್ ಉಮ್ರಾ ಸಚಿವಾಲಯ

ಎಲ್ಲಾ ಯಾತ್ರಿಕರು, ಉಮ್ರಾ ಕಂಪನಿಗಳು ಮತ್ತು ಸೇವಾ ಪೂರೈಕೆದಾರರು ನಿಯಮಗಳು ಮತ್ತು ನಿರ್ಗಮನ ಗಡುವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಚಿವಾಲಯವು ಒತ್ತಾಯಿಸಿದೆ.

ಜಿದ್ದಾ: ಮುಂಬರುವ ಹಜ್ ಋತುವಿನ ಸಿದ್ಧತೆಗಳ ಭಾಗವಾಗಿ, ಉಮ್ರಾ ಯಾತ್ರಿಕರು ಸೌದಿ ಅರೇಬಿಯಾವನ್ನು ಪ್ರವೇಶಿಸಲು ಕೊನೆಯ ದಿನ ಏಪ್ರಿಲ್ 13, 2025 (15 ಶವ್ವಾಲ್ 1446 ) ಎಂದು ಘೋಷಿಸಿದೆ.

ಅದೇ ರೀತಿ, ಏಪ್ರಿಲ್ 29, 2025( ದುಲ್ ಖಅದ 1- 1446) ಉಮ್ರಾ ಯಾತ್ರಿಕರು ಸೌದಿ ಅರೇಬಿಯಾದಿಂದ ನಿರ್ಗಮಿಸಬೇಕಾದ ಕೊನೇ ದಿನವಾಗಿದೆ. ಈ ದಿನಾಂಕವನ್ನು ಮೀರಿ ದೇಶದಲ್ಲಿ ಉಳಿಯುವುದು ಉಲ್ಲಂಘನೆಯಾಗಿದೆ ಮತ್ತು ಅಂತಹ ವ್ಯಕ್ತಿಗಳನ್ನು ಕಾನೂನು ದಂಡನೆಗೆ ಒಳಪಡಿಸಲಾಗುವುದು ಎಂದು ಸಚಿವಾಲಯ ಒತ್ತಿ ಹೇಳಿದೆ.

ಎಲ್ಲಾ ಯಾತ್ರಿಕರು, ಉಮ್ರಾ ಕಂಪನಿಗಳು ಮತ್ತು ಸೇವಾ ಪೂರೈಕೆದಾರರು ನಿಯಮಗಳು ಮತ್ತು ನಿರ್ಗಮನ ಗಡುವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಚಿವಾಲಯವು ಒತ್ತಾಯಿಸಿದೆ. ನಿಗದಿತ ದಿನಾಂಕವನ್ನು ಮೀರಿದ ಯಾವುದೇ ವಿಳಂಬವನ್ನು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ ಮತ್ತು ಅವಧಿ ಮೀರಿದ ಯಾತ್ರಿಕರ ಬಗ್ಗೆ ವರದಿ ಮಾಡಲು ವಿಫಲವಾದ ಕಂಪನಿಗಳು ಪ್ರತೀ ಯಾತ್ರಿಕರ ಪರವಾಗಿ SAR 100,000 ವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ ಮತ್ತು ಹೊಣೆಗಾರರ ವಿರುದ್ಧ ಹೆಚ್ಚುವರಿ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅದು ಎಚ್ಚರಿಸಿದೆ.

ಉಮ್ರಾ ವೀಸಾದಲ್ಲಿ ಸೌದಿ ಅರೇಬಿಯಾಕ್ಕೆ ಆಗಮಿಸುವವರು ಏಪ್ರಿಲ್ 29 ರ ಮೊದಲು ಸ್ವದೇಶಕ್ಕೆ ಮರಳಬೇಕು, ಅದನ್ನು ಮೂರು ತಿಂಗಳ (90-ದಿನ) ಅವಧಿ ಎಂದು ಪರಿಗಣಿಸುಲಾಗುವುದಿಲ್ಲ. ಹಜ್ ಸಿದ್ಧತೆಯ ಭಾಗವಾಗಿ ಪ್ರತಿ ವರ್ಷವೂ ಇದೇ ರೀತಿಯ ನಿರ್ಬಂಧವನ್ನು ವಿಧಿಸಲಾಗುತ್ತದೆ. ಪ್ರಸ್ತುತ ನೀಡಲಾಗುತ್ತಿರುವ ಉಮ್ರಾ ವೀಸಾಗಳಲ್ಲಿ, ಉಮ್ರಾ ವೀಸಾ ಹೊಂದಿರುವವರಿಗೆ ಏಪ್ರಿಲ್ 29 ರವರೆಗೆ ಮಾತ್ರ ಸೌದಿ ಅರೇಬಿಯಾದಲ್ಲಿ ಉಳಿಯಲು ಅವಕಾಶವಿದೆ ಎಂದು ಉಲ್ಲೇಖಿಸಲಾಗಿದೆ.

ಸಾಮಾನ್ಯವಾಗಿ, ಉಮ್ರಾ ವೀಸಾವು 90 ದಿನಗಳ ಕಾಲಾವಧಿ ಹೊಂದಿರುತ್ತದೆ, ಆದರೆ ಹಜ್ ಸಿದ್ಧತೆಯ ಹಿನ್ನೆಲೆಯಲ್ಲಿ, 90 ದಿನಗಳ ಅವಧಿಯನ್ನು ಪೂರ್ಣಗೊಳಿಸಲು ದಿನಗಳು ಬಾಕಿ ಇದ್ದರೂ ಏಪ್ರಿಲ್ 29 ರ ನಂತರ ಸೌದಿಯಲ್ಲಿ ಉಳಿಯಲು ಸಾಧ್ಯವಿಲ್ಲ ಎಂದರ್ಥ.