janadhvani

Kannada Online News Paper

ಬೀಫ್: ಕೇಂದ್ರ ಸರಕಾರಕ್ಕೆ ಒತ್ತಡ ಹೇರುವ ಬದಲು, ಮಂಗಳೂರು ವ್ಯಾಪಾರಸ್ಥರ ವಿರುದ್ಧ ಯಾಕೆ?

ಮಂಗಳೂರಿನ ಕೆಲವು ಬಡ ವ್ಯಾಪಾರಸ್ಥರ ಫೋಟೋ ಹಾಕಿ ಜೀವ ಬೆದರಿಕೆಯೊಡ್ಡುವ ಪೋಸ್ಟರೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ

ಮಂಗಳೂರು: ಇಲ್ಲಿನ ಕೆಲವು ಬಡ ವ್ಯಾಪಾರಸ್ಥರ ಫೋಟೋ ಹಾಕಿ ಜೀವ ಬೆದರಿಕೆಯೊಡ್ಡುವ ಪೋಸ್ಟರೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರಕಾರ ಮಂಗಳೂರಲ್ಲಿ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕಾಗಿದೆ ಎಂದು ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿ ಅಶ್ರಫ್ ಕಿನಾರ ಆಗ್ರಹಿಸಿದ್ದಾರೆ.

ಮುಸಲ್ಮಾನರ ಪವಿತ್ರ ರಂಝಾನ್ ತಿಂಗಳು ಆಗಮಿಸುವಾಗ ಕೆಲವು ಸಮಾಜಘಾತುಕ ಶಕ್ತಿಗಳು ಅಶಾಂತಿಗಾಗಿ ಹಾತೊರೆಯುತ್ತಾ ಇರುತ್ತದೆ. ಕಳೆದ ಕೆಲವು ದಿನಗಳಲ್ಲಿ ಮಂಗಳೂರು ನಗರದಲ್ಲಿ ಕೆಲವು ದುಷ್ಟ ಶಕ್ತಿಗಳು ಬೀಫ್ ಮಾರಾಟಗಾರರಿಗೆ ಕಿರಿಕ್ ನೀಡುತ್ತಿದೆ. ಅಲ್ಲದೇ, ಸಂಘಟನೆಯ ಕೆಲವರಿಂದ ಪತ್ರಿಕಾಗೋಷ್ಠಿಯನ್ನು ಕಾಣಲು ಸಾಧ್ಯವಾಗಿದೆ. ಇಲ್ಲಿ ಕಾನೂನು ವ್ಯವಸ್ಥೆಯನ್ನು ಕಾಪಾಡಲು ಪೋಲೀಸ್ ಇಲಾಖೆ ಸಕ್ರಿಯವಾಗಿದೆ. ಆದರೂ, ಅನೈತಿಕ ಪೋಲೀಸ್ ಗಿರಿ ನಡೆಸುವ ಇಂತಹ ಶಕ್ತಿಗಳ ಅಟ್ಟಹಾಸ ಮಿತಿ ಮೀರುತ್ತಿದೆ.

ಭೀಪ್ ರಫ್ತಿನಲ್ಲಿ ಕೇಂದ್ರದ ಮೋದಿ ಸರಕಾವೇ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದ್ದು, ಹಲವು ಬಿಜೆಪಿ ಬೆಂಬಲಿತರ ಮಾಲಕತ್ವದ ಬೀಫ್ ಕಂಪೆನಿಗಳು ಮುಸ್ಲಿಂ ನಾಮದಲ್ಲಿ ವಿದೇಶಕ್ಕೆ ಬೀಫ್ ರಫ್ತು ಮಾಡುತ್ತಿದೆ. ಇದರ ವಿರುಧ್ಧ ಧ್ವನಿ ಎತ್ತಲು ಸಾಧ್ಯವಾಗದ ಕೆಲವು ಶಕ್ತಿಗಳು ಮಂಗಳೂರಲ್ಲಿ ಅನಾವಶ್ಯಕ ಗೋಗೆರೆಯುತ್ತಿದ್ದಾರೆ.ಅಲ್ಲದೇ ವ್ಯಾಪಾರಸ್ಥರ ವಿರುದ್ಧ ಜೀವ ಬೆದರಿಕೆಯ ಪೋಸ್ಟರ್ ಪ್ರಚಾರ ಮಾಡುತ್ತಿದ್ದಾರೆ.

ಇಂತಹ ಸಮಾಜ ಘಾತುಕ ಶಕ್ತಿಗಳ ಅನೈತಿಕ ಪೋಲೀಸ್ ಗಿರಿ ವಿರುದ್ಧ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಸರಕಾರ ಮಧ್ಯ ಪ್ರವೇಶಿಸಬೇಕು. ಅನೈತಿಕ ಪೋಲೀಸ್ ಗಿರಿ ನಿರ್ಮೂಲನೆಗಾಗಿ ಸ್ಥಾಪಿತವಾದ ಆ್ಯಂಟಿ ಕಮ್ಯೂನಲ್ ಸ್ಕಾಡ್ ಕೂಡಲೇ ಇಂತಹವರನ್ನು ಮಟ್ಟ ಹಾಕಬೇಕು.

ಮುಸ್ಲಿಮರ ಹಬ್ಬದ ಸಂದರ್ಭದಲ್ಲಿ ಮಂಗಳೂರಲ್ಲಿ ಆಶಾಂತಿಯನ್ನು ಸೃಷ್ಟಿಸಲು ಪ್ರಯತ್ನಿಸುವವರ ವಿರುಧ್ಧ ಸೂಕ್ತ ಕಾನೂನು ಕ್ರಮ ಜರುಗಿಸದಿದ್ದರೆ ಮಂದಿನ ಅನಾಹುತಕ್ಕೆ ಜಿಲ್ಲಾಡಳಿತ ನೇರ ಹೊಣೆಯಾಗಬೇಕಾಗಬಹುದು ಎಂದು ಅಶ್ರಫ್ ಕಿನಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದಿಂದ ಬೀಫ್ ರಫ್ತು ಮಾಡುತ್ತಿರುವ ಕೆಲವು ಹಿಂದೂಪರ ಕಂಪನಿಗಳು