janadhvani

Kannada Online News Paper

ಕೆಸಿಎಫ್ ಕುವೈಟ್ ಮಹಬುಲ ಸೆಕ್ಟರ್: ಸ್ವಲಾತ್ ಮಜ್ಲಿಸ್ ಹಾಗೂ ಬೃಹತ್ ಇಫ್ತಾರ್ ಸಂಗಮ

ಕುವೈಟ್ :ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕುವೈಟ್ ಮಹಬುಲ ಸೆಕ್ಟರ್ ವತಿಯಿಂಂದ ದಿನಾಂಕ 14/03/2025ರ ಶುಕ್ರವಾರ ಅಸರ್ ನಮಾಜಿನ ಬಳಿಕ ಮಹಬುಲ ಬ್ಲಾಕ್ 1ರ KPC ವಿಲ್ಲಾ ದಲ್ಲಿ ಬಹುಮಾನ್ಯ ಸತ್ತಾರ್ ಸಅದಿ ಮಂಜೇಶ್ವರ ಉಸ್ತಾದರ ಅಧ್ಯಕ್ಷತೆಯಲ್ಲಿ, ಕಾರ್ಯದರ್ಶಿ ಸಮೀರ್ ಕಮಲಾಪುರ ಅವರ ಸ್ವಾಗತದೊಂದಿಗೆ, ಬಹು: ಉಮರ್ ಝುಹ್ರಿ (ಕಾರ್ಯದರ್ಶಿ ಕೆಸಿಎಫ್ ಕುವೈತ್ ಸಂಘಟನಾ ವಿಭಾಗ) ಉಸ್ತಾದ್ರವರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ಹಾಗೂ ಬೃಹತ್ ಇಫ್ತಾರ್ ಸಂಗಮ ನಡೆಯಿತು.

ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ, KCF ಕುವೈತ್ ಸದಸ್ಯರಾದ ಬಹು ಮಾಹಿನ್ ಸಖಾಫಿ ಉಸ್ತಾದರು , Sidra ಫೌಂಡೇಶನ್ ನೇತಾರರಾದ ಫಾರೂಕ್ ಸಖಾಫಿ ನೂರಾನಿ ಉಸ್ತಾದರು, KCF IC ಆಡಳಿತ ವಿಭಾಗ ಅಧ್ಯಕ್ಷರು ಹುಸೈನ್ ಎಮ್ಮೆಮಾಡು ಉಸ್ತಾದರು, IC ಸದಸ್ಯ ರಾದ ಯಾಕೂಬ್ ಕಾರ್ಕಳ KCF ಕುವೈತ್ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾದ ಮುಸ್ತಫಾ ಉಳ್ಳಾಲರವರು ಹಾಗೂ ರಾಷ್ಟ್ರೀಯ ಕೊಶಾಧಿಕಾರಿ ಮೂಸ ಇಬ್ರಾಹಿಮ್ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ Sidra ಫೌಂಡೇಶನ್ ನೇತಾರರಾದ ಫಾರೂಕ್ ಸಖಾಫಿ ನೂರಾನಿ ಉಸ್ತಾದರು ರಮದಾನಿನ ಮಹತ್ವ, ಈವರೆಗಿನ ನಮ್ಮ ಇಬಾದತ್ತಿನ ಅವಲೋಕನ ಹಾಗು ಬಾಕಿವಿರುವ ದಿನಗಳ ಇಬಾದತ್ತಿನ ಕುರಿತು ಸವಿಸ್ತಾರವಾಗಿ ಹಾಗು ಕೆಸಿಎಫ್ ಮತ್ತು ಸಿದ್ರಾ ಸಂಸ್ಥೆಯ ಕಾರ್ಯಕ್ರಮಗಳ ಕುರಿತು ಪ್ರಭಾಷಣ ನಡೆಸಿದರು. KCF ಕುವೈತ್ ರಾಷ್ಟೀಯ ಮಾಜಿ ಸದಸ್ಯರಾದ ಮಾಹಿನ್ ಸಖಾಫಿ ಉಸ್ತಾದರು ಧೀರ್ಘ ಕಾಲದ ಅನಿವಾಸಿ ಜೀವನಕ್ಕೆ ವಿದಾಯ ಹೇಳಿ ನಾಡಿಗೆ ಹೊರಡುವದರ ಬಗ್ಗೆ ಹಾಗು ತಮ್ಮ KCF ದಿನಗಳ ಅನುಭವ ಹಂಚಿಕೊಂಡರು. ಅವರಿಗೆ ಈ ಸಂಧರ್ಭದಲ್ಲಿ KCF ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಶಾಲು ಹೊದಿಸಿ ಬೀಳ್ಕೊಡಿಗೆ ಸನ್ಮಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಹಬೂಲ ಸೆಕ್ಟರಿನ ಪ್ರತಿಭೋತ್ಸವದಲ್ಲಿ ವಿಜೇತರಾದ ಸ್ಪರ್ಧಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. KCF ಕುವೈತ್ ರಾಷ್ಟೀಯ ಸಮಿತಿಯಿಂದ ಆಯೋಜಿಸಲಾದ Salary Challenge ಕಾರ್ಯಕ್ರಮದ ಪ್ರಚಾರ ನಡೆಸಲಾಯಿತು. ಹಾಗೂ ಕುವೈಟ್ ರಾಷ್ಟ್ರೀಯ ಸಮಿತಿಯ ಆಡಳಿತ ವಿಭಾಗ ಅಧ್ಯಕ್ಷ ಉಮರುಲ್ ಫಾರೂಕ್ ಸಖಾಫಿ ಆಶಂಷಾ ಕೋರಿ ದುವಾ ಮಾಡಿದರು.

ಈ ಕಾರ್ಯಕ್ರಮ್ಮದಲ್ಲಿ ಆಯೋಜಿಸಿದ ಇಫ್ತಾರ್ ಕೂಟಕ್ಕೆ KCF ಕುವೈತ್ ರಾಷ್ಟೀಯ, ಝೋನ್, ಸೆಕ್ಟರ್ ಯೂನಿಟ್ ನಾಯಕರು ಹಾಗು ಕಾರ್ಯಕರ್ತರಲ್ಲದೆ KPC ಬಿಲ್ಡಿಂಗ್ನ ಅನೇಕ ಸಹೋದರರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮ್ಮಕ್ಕಾಗಿ ಸ್ಥಳ, ವ್ಯವಸ್ಥೆಯನ್ನು ಪ್ರೊಫೆಷನಲ್ ವಿಭಾಗದ ನೇತಾರರಾದ ತೌಫಿಕ್ ಕಾರ್ಕಳರವರ ನೇತೃತ್ವದಲ್ಲಿ ಸೆಕ್ಟರಿನ ಅನೇಕ ನಾಯಕರ, ಕಾರ್ಯಕರ್ತರ ಸಹಾಯ ಹಾಗು ಸಹಕಾರದಿಂದ ಮಾಡಲಾಯಿತು.

ವರದಿ✍🏻 ಇಬ್ರಾಹಿಂ ವೇಣೂರು
ಪ್ರಕಾಶನ ಮತ್ತು ಪ್ರಚಾರ ವಿಭಾಗ