janadhvani

Kannada Online News Paper

ಗಲ್ಫ್ ದೇಶಗಳಿಗೆ ಟಿಕೆಟ್ ದರ ಇಳಿಸಿದ ವಿಮಾನ ಕಂಪನಿಗಳು

ಕಲ್ಲಿಕೋಟೆ : ಹೈದರಾಬಾದ್‌ಗೆ ಕರಿಪ್ಪೂರ್‌ನಿಂದ ಪ್ರಯಾಣ ಬೆಳೆಸಬೇಕಾದರೆ 5,800 ರೂ. ಪಾವತಿಸಬೇಕಾಗುತ್ತದೆ.ಆದರೆ ಕೇವಲ 4,500 ರೂಪಾಯಿ ಇದ್ದರೆ ದುಬೈಗೆ ಪ್ರಾಯಾಣ ಬೆಳೆಸಬಹುದು ಅದೇ ರೀತಿ 5,500 ರೂಪಾಯಿಗಳಿಗೆ ಶಾರ್ಜಾಗೂ ಹಾರಿ ಹೋಗಬಹುದು. ಈದ್ ಆಚರಣೆಯ ನಂತರ ದರ ಹೆಚ್ಚಳವಾಗುವ ಸೀಸನ್ ಆದರೂ, ಹೆಚ್ಚಿನ ಗಲ್ಫ್ ದೇಶಗಳಿಗೆ ಟಿಕೆಟ್ ದರಗಳು ಕುಸಿದಿದೆ.

ಪ್ರಯಾಣಿಕರ ಮತ್ತು ಟಿಕೆಟ್ ಖರೀದಿಸುವವರ ಸಂಖ್ಯೆ ಇಳಿಮುಖವಾಗಿರುವುದೇ ಪ್ರಮುಖ ಕಾರಣವೆನ್ನಲಾಗಿದೆ. ರಮಝಾನ್ ಮತ್ತು ಈದ್ ಪ್ರಯುಕ್ತ ಮರಳುವ ವಲಸಿಗರನ್ನು ಗಮನಿಸಿ ಟಿಕೆಟ್ ದರವನ್ನು ಸಾಮಾನ್ಯವಾಗಿ  ಹೆಚ್ಚಿಸಲಾಗುತ್ತದೆ. ಆದರೆ, ಈ ಋತುವಿನಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ಸೀಸನ್‌ನಲ್ಲಿ ಟಿಕೆಟ್ ಖರೀದಿಸುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಗಲ್ಫ್ ದೇಶಗಳಲ್ಲಿನ ಅನೇಕ ಕಂಪನಿಗಳು ರಿಟರ್ನ್ ಟಿಕೆಟ್ ಗಳೊಂದಿಗೆ ರಜಾದಿನಗಳನ್ನು ನೀಡುತ್ತಿವೆ. ಅನೇಕ ಜನರು ಆನ್ ಲೈನ್ ನಲ್ಲಿ ಟಿಕೇಟ್ ಗಳನ್ನು ಬುಕ್ ಮಾಡಿದ್ದಾರೆ.

ಹಿಂದಿನ ವರ್ಷಗಳಲ್ಲಿ ಟಿಕೆಟ್ ಲಭಿಸದ ಸಮಸ್ಯೆ ಈ ಸಲ ಆಗಿಲ್ಲ. ಯಾತ್ರಿಕರ ಕೊರತೆಯೇ ಕಾರಣ. ಇದಲ್ಲದೆ, ಅನೇಕ ಪ್ರಯಾಣ ಏಜೆನ್ಸಿಗಳ ಟಿಕೆಟ್‌ಗಳು ಬಾಕಿ ಉಳಿದಿವೆ. ದೇಶೀಯ ವಿಮಾನ ನಿಲ್ದಾಣಗಳ ದರಗಳಲ್ಲಿ ಯಾವುದೇ ಕಡಿತ ಇಲ್ಲ. ಅಲ್ಲದೆ, ಪ್ರಯಾಣಿಕರಿಗೆ ಬೆಂಗಳೂರಿಗೆ ಮತ್ತು ಇತರ ಸ್ಥಳಗಳಿಗೆ ಟಿಕೆಟ್ ಸಿಗುತ್ತಿಲ್ಲ. ಕೋಯಿಕ್ಕೋಡ್ ನಿಂದ ಮುಂಬೈಗೆ 3,500 ಮತ್ತು ಹೈದರಾಬಾದ್ ‌ಗೆ 5,800 ರೂ. ದರವಿದೆ.

ನಿಪ್ಹಾ ವೈರಸ್‌ ನ ಭೀತಿ ಹರಡಿದಾಗ ಹಲವು ರೈಲು ಯಾತ್ರೆಗಳಿಗೆ ತಿಲಾಂಜಲಿ ಹಾಡಿ ವಿಮಾನ ಯಾತ್ರೆಯನ್ನು ಮೆಚ್ಚಿಕೊಂಡಿದ್ದರು. ಆ ಕಾರಣಕ್ಕಾಗಿ ದೇಶಿಯ ಯಾತ್ರೆಗೆ ಟಿಕೆಟ್ ಲಭಿಸದ ಪ್ರಸಂಗ ಕೂಡ ಇತ್ತೀಚೆಗೆ ಕಂಡು ಬಂದಿದ್ದವು.

error: Content is protected !! Not allowed copy content from janadhvani.com