ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಷರೀಫ್ ಕುದ್ರೋಳಿ ಮಂಗಳೂರು ಪ್ರತೀ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮ ಜನವರಿ 31 ರಿಂದ ಪೆಬ್ರವರಿ 08 ರ ತನಕ 9 ದಿವಸಗಳು ನಡೆಯಲಿದ್ದು ಇದರ ಪ್ರಾರಂಭದ ದಿವಸವಾದ ಇಂದು ದರ್ಗಾ ಅಧ್ಯಕ್ಷ ಮುಸ್ತಾಕ್ ಅವರ ಅಧ್ಯಕ್ಷತೆಯಲ್ಲಿ ಬೃಹತ್ ಮೌಲಿದ್ ಹಾಗೂ ರಿಫಾಈ ರಾತೀಬ್ ಮಜ್ಲಿಸ್ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಎಲ್ಲಾ ದೀನಿ ಸ್ನೇಹಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಜ್ಮೀರ್ ಮೌಲಿದ್ ನೊಂದಿಗೆ ಕುದ್ರೋಳಿ ಮಖಾಂ ಉರೂಸ್ ಯಶಸ್ವಿಗಾಗಿ ಪ್ರಾರ್ಥನೆ
ಮಂಗಳೂರು : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಷರೀಫ್ ಕುದ್ರೋಳಿ ಮಂಗಳೂರು ಪ್ರತೀ ಎರಡು ವರ್ಷ ಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮ ಜನವರಿ 31 ರಿಂದ ಪೆಬ್ರವರಿ 08 ರ ತನಕ 9 ದಿವಸಗಳು ನಡೆಯಲಿದ್ದು ಇದರ ಯಶಸ್ಸಿಗಾಗಿ ಜನವರಿ 30 ರಂದು ದರ್ಗಾ ಅಧ್ಯಕ್ಷ ಮುಸ್ತಾಕ್ ಅಧ್ಯಕ್ಷ ತೆಯಲ್ಲಿ ನಡುಪಳ್ಳಿ ಜುಮಾ ಮಸೀದಿ ಖತೀಬ್ ಕೆ ಎಸ್ ರಿಯಾಝ್ ಪೈಝಿ ಕಕ್ಕಿಂಜೆ ಅಜ್ಮೀರ್ ಮೌಲಿದ್ ಗೆ ನೇತೃತ್ವ ನೀಡಿ ದುಆ ನೆರವೇರಿಸಿದರು.
ಪ್ರಸ್ತುತ ಮಜ್ಲಿಸ್ ನಲ್ಲಿ ನಡುಪಳ್ಳಿ ಮುಅದ್ದಿನ್ ಸಿರಾಜ್ ಪೈಝಿ, ದರ್ಗಾ ಉಪಾಧ್ಯಕ್ಷ ಅಲ್ತಾಫ್ , ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ, ಕೋಶಾಧಿಕಾರಿ ಅಬ್ದುಲ್ಲ ಕೆ ಎಚ್ ಬಿ, ಕಾರ್ಯದರ್ಶಿಗಳಾದ ನವಾಝ್,ಆಸಿಫ್ , ಸದಸ್ಯರು ಗಳಾದ ಹಾಜಿ ಕಬೀರ್ ಅಬ್ದುಲ್ ಗಫೂರ್ , ಎನ್ ಕೆ ಅಬೂಬಕ್ಕರ್,ಖಲೀಲ್,ಯೂಸುಫ್, ಮುಸ್ತಫ,ಅಮೀರ್,ಬಷೀರ್,ಮುಸ್ತಫ ಹಾಗೂ ಸ್ಥಳೀಯ ಜಮಾಅತ್ ಬಾಂದವರು ಉಪಸ್ಥಿತರಿದ್ದರು.