ಮಂಜನಾಡಿ: ಕೋಝಿಕ್ಕೋಡು ಜಿಲ್ಲೆಯ ಮಡೂವೂರಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಖುತುಬುಲ್ ಆಲಂ ಶೈಖ್ ಸಿಎಂ ವಲಿಯುಲ್ಲಾಹಿ (ಖ.ಸಿ )ರವರ ಸ್ಮರಣಾರ್ಥ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ನೇತೃತ್ವದಲ್ಲಿ ಮಡವೂರಿನಲ್ಲಿ ಕಳೆದ 35 ವರ್ಷಗಳಿಂದ ಕಾರ್ಯಾಚರಣೆ ಮಾಡುತ್ತಿರುವ ಸಿಎಂ ಸೆಂಟರ್ ವಿದ್ಯಾ ಸಂಸ್ಥೆಯ 35ನೇ ವಾರ್ಷಿಕ ಸಮ್ಮೇಳನದ ಕರ್ನಾಟಕ ರಾಜ್ಯದ ಪ್ರಚಾರ ಉದ್ಘಾಟನಾ ಸಮಾವೇಶವು ಜನವರಿ 31 ಶುಕ್ರವಾರ ಅಪರಾಹ್ನ 3 ಗಂಟೆಗೆ ಮಂಜನಾಡಿ ಅಲ್ ಮದಿನಾ ಕ್ಯಾಂಪಸ್ ನಲ್ಲಿರುವ ಶರಫುಲ್ ಉಲಮಾ ಆಡಿಟೋರಿಯಂ ನಲ್ಲಿ ನಡೆಯಲಿದೆ.
ಶರಫುಲ್ ಉಲಮಾ ಅಬ್ಬಾಸ್ ಉಸ್ತಾದರ ಮಖ್ ಬರ ಝಿಯಾರತ್ ನೊಂದಿಗೆ ಪ್ರಾರಂಭವಾಗುವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಅಶ್ ಅರಿಯ ಮುಹಮ್ಮದ್ ಅಲಿ ಸಖಾಫಿ ನೇತೃತ್ವ ವಹಿಸಲಿದ್ದು, ಮಂಜನಾಡಿ ಅಲ್ ಮದೀನಾ ಕಾಂಪ್ಲೆಕ್ಸ್ ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಸಖಾಫಿ ಉದ್ಘಾಟನೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಡವೂರು ಸಿಎಂ ಸೆಂಟರ್ ಇದರ ಪ್ರಧಾನ ಕಾರ್ಯದರ್ಶಿ ಟಿ.ಕೆ ಅಬ್ದುಲ್ ರಹ್ಮಾನ್ ಬಾಖವಿ, ಸಯ್ಯಿದ್ ಖಲೀಲ್ ಬಾಅಲವಿ ತಂಗಳ್ ಮಡವೂರು, ಮುಸ್ತಫಾ ಸಖಾಫಿ ಮರೆಂಜಾಟಿ ಭಾಗವಹಿಸಲಿದ್ದಾರೆ ಡಾ ಎಮ್ಮೆಸ್ಸೆಮ್ ಅಬ್ದುಲ್ ರಶೀದ್ ಝೖನೀ ಸಂದೇಶ ಭಾಷಣ ಮಾಡಲಿದ್ದಾರೆ ಸುನ್ನಿ ಸಂಘ ಕುಟುಂಬದ ನಾಯಕರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಸರದ ಸುನ್ನೀ ಕಾರ್ಯಕರ್ತರು ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ರಾಜ್ಯ ಪ್ರಚಾರ ಸಮಿತಿ ಕಾರ್ಯದರ್ಶಿ ಸಲೀಮ್ ಕನ್ಯಾಡಿ ಯವರು ತಿಳಿಸಿದ್ದಾರೆ.