janadhvani

Kannada Online News Paper

ಎಸ್ಸೆಸ್ಸೆಫ್ ಪಡುಬಿದ್ರಿ ಶಾಖೆ ವತಿಯಿಂದ ಶೈಖುನಾ ಪಡುಬಿದ್ರಿ ಉಸ್ತಾದ್ ಅನುಸ್ಮರಣೆ ಹಾಗೂ ಬುರ್ದಾ ಮಜ್ಲಿಸ್

ಪಡುಬಿದ್ರಿ: ಎಸ್ಸೆಸ್ಸೆಫ್ ಪಡುಬಿದ್ರಿ ಶಾಖೆ ಇದರ 29 ನೇ ವಾರ್ಷಿಕೋತ್ಸವದ ಪ್ರಯುಕ್ತ ಉಸ್ತಾದುಲ್ ಅಸಾತೀದ್ ಶೈಖುನಾ ಮರ್ಹೂಮ್ ಪಡುಬಿದ್ರಿ ಉಸ್ತಾದ್ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಕರುಂಬಿಲ್ ವಾಳಕ್ಕುಲಂ ವೆಣ್ಣಿಯೂರು ಮಲಪ್ಪುರಂ ರವರ 22 ನೇ ಆಂಡ್ ಅನುಸ್ಮರಣಾ ಸಂಗಮ ಹಾಗೂ ಬೃಹತ್ ಬುರ್ದಾ ಮಜ್ಲಿಸ್
2025 ಜನವರಿ 31 ಮತ್ತು ಫೆಬ್ರವರಿ 1 ರಂದು ಪಡುಬಿದ್ರಿ ಮಸೀದಿ ಮೈದಾನದಲ್ಲಿ ಜರುಗಲಿದೆ.ಈ ಕಾರ್ಯಕ್ರಮದಲ್ಲಿ ಸಯ್ಯಿದ್ ಕಿಲ್ಲೂರು ತಂಙಳ್ , ಮೌಲಾನಾ ಕಾವಳಕಟ್ಟೆ ಹಝ್ರತ್ , ಅನಸ್ ಅಮಾನಿ ಕಣ್ಣೂರು ಕೇರಳ ,ಶುಕೂರ್ ಇರ್ಫಾನಿ ಚೆಂಬರಿಕ ಕಾಸರಗೋಡು,ಅಝರ್ ರಬ್ಬಾನಿ ಕಲ್ಲೂರು ಹಾಗೂ ಸಂಗಡಿಗರು ,
ಇನ್ನಿತರೂ ಉಲಮಾ ಹಾಗೂ ಉಮರಾಗಳು‌ ಭಾಗವಹಿಸಲಿದ್ದಾರೆ.

ಮರ್ಹೂಮ್ ಪಡುಬಿದ್ರಿ ಉಸ್ತಾದ್ ಅವರು, ವಲಿಯುಲ್ಲಾಹೀ ಮರ್ಹೂಮ್ ಕೈಪಟ್ಟ ಬೀರಾನ್ ಕುಟ್ಟಿ ಮುಸ್ಲಿಯಾರ್ ರವರ ಪ್ರಧಾನ ಶಿಷ್ಯರಲ್ಲೊಬ್ಬರು, ಎಂದೆಂದಿಗೂ ಮರೆಯಲಾಗದ ಅಮರ ಚೇತನ , ಉಡುಪಿ ಜಿಲ್ಲೆಯ ಮಾಣಿಕ್ಯ ಮುತ್ತು , ಇತಿಹಾಸ ಪ್ರಸಿದ್ಧ ಪಡುಬಿದ್ರಿ ಮುಹಿಯುದ್ದೀನ್ ಜುಮುಅ ಮಸ್ಜಿದ್ ನಲ್ಲಿ 33 ವರ್ಷಗಳ ಕಾಲ ಖತೀಬ್ , ಮುದರ್ರಿಸ್‌ ಹಾಗೂ ಖಾಝಿ ಯಾಗಿ ಆತ್ಮೀಯ ಚೈತನ್ಯ ತುಂಬಿದ, ನೊಂದವರ ಬಾಳಿಗೆ ಅಭಯ ಕೇಂದ್ರ ವಾಗಿದ್ದ , ಸೂಫೀವರ್ಯರಾಗಿದ್ದರು.✍️ಪಿ ಎಂ ಎಸ್ ಪಡುಬಿದ್ರಿ

error: Content is protected !! Not allowed copy content from janadhvani.com