ದುಬೈ: ದೇಶದಲ್ಲಿ ಕಾನೂನು ಬಾಹಿರವಾಗಿ ತಂಗುತ್ತಿರುವ ಅಕ್ರಮ ವಲಸಿಗರಿಗೆ ಯುಎಇ ಮೂರು ತಿಂಗಳ ಸಾಮೂಹಿಕ ಕ್ಷಮಾದಾನವನ್ನು ಘೋಷಿಸಿದೆ.
ಆಗಸ್ಟ್ ಒಂದರಿಂದ ಅಕ್ಟೋಬರ್ 31 ರ ವರೆಗಿನ ಮೂರು ತಿಂಗಳ ದೀರ್ಘಾವಧಿಯ ಸಾಮೂಹಿಕ ಕ್ಷಮಾದಾನದಿಂದ ದೇಶದಲ್ಲಿ ಅನಧಿಕೃತವಾಗಿ ತಂಗುತ್ತಿರುವವರಿಗೆ ದಾಖಲೆಗಳನ್ನು ಸರಿಪಡಿಸಲು ಇಲ್ಲವೇ ಯಾವುದೇ ಶಿಕ್ಷೆ ಅನುಭವಿಸದೆ ಸ್ವದೇಶಕ್ಕೆ ಮರಳಲು ಸಾಧ್ಯವಾಗಲಿದೆ.
ಅಕ್ರಮ ವಲಸಿಗರು ಕಾನೂನಾತ್ಮಕ ಶುಲ್ಕ ಪಾವತಿಸಿ ದಾಖಲೆಗಳನ್ನು ಸರಿಪಡಿಸಿ ದೇಶದಲ್ಲೇ ಉಳಿಯಬಹುದು ಇಲ್ಲವೇ ಕಾನೂನು ಪ್ರಕ್ರಿಯೆಗಳನ್ನು ಎದುರಿಸದೆ ದೇಶವನ್ನು ತೊರೆಯಲು ಸಾಧ್ಯ ವಿದೆ ಎಂದು ಫೆಡರಲ್ ಅಥಾರಿಟಿ ಫಾರ್ ಐಡೆಂಟಿಟಿ ಆಂಡ್ ಸಿಟಿಝನ್ಶಿಪ್ ಆಕ್ಟಿಂಗ್ ಡೈರೆಕ್ಟರ್ ಜನರಲ್ ಬ್ರಿಗೇಡಿಯರ್ ಸಈದ್ ರಖನ್ ಅಲ್ ರಾಶಿದಿ ಹೇಳಿದರು.
2013 ರಲ್ಲಿ ಸುಮಾರು 62,000 ಅಕ್ರಮ ವಲಸಿಗರು ಯಾವುದೇ ಶಿಕ್ಷೆಯಿಲ್ಲದೆ ಸಾಮೂಹಿಕ ಕ್ಷಮಾದಾನ ಮೂಲಕ ಯುಎಇ ತೊರೆದಿದ್ದರು.