janadhvani

Kannada Online News Paper

ಜನವರಿ 13-15 ರಂದು ಇಹ್ಸಾನ್ ಸ್ನೇಹ ಸಂಚಾರ

ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಯುವಜನ ಸಂಘ, ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ,ಕರ್ನಾಟಕ ಕಲ್ಚರಲ್ ಫೌಂಡೇಷನ್‌ ಸಂಘಟನೆಗಳ ನೇತೃತ್ವದಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ ಪ್ರದೇಶಗಳನ್ನು ಗುರುತಿಸಿ ಸಮುದಾಯದ ಅಲ್ಲಿರುವ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ ಯನ್ನು ಕಲ್ಪಿಸುತ್ತಿರುವ ಇಹ್ಸಾನ್ ಕರ್ನಾಟಕ ಸಂಸ್ಥೆಯು
ಕಳೆದ ಹನ್ನೆರಡು ವರ್ಷಗಳಿಂದ ನಿರಂತರವಾಗಿ ಅಚ್ಚುಕಟ್ಟಾಗಿ ಜವಾಬ್ದಾರಿಯನ್ನು ವಹಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ.
ಹೀಗೆ ಸುಮಾರು 18 ರಷ್ಟು ಧಾರ್ಮಿಕ ಲೌಕಿಕ ಸಮನ್ವಯ ಕೇಂದ್ರ ಗಳು ಕಾರ್ಯಾಚರಿಸುತ್ತಿದೆ.

ಇಹ್ಸಾನ್ ಕರ್ನಾಟಕ ಸಂಸ್ಥೆಯ ಆಧೀನದಲ್ಲಿರುವ ಕ್ಯಾಂಪಸ್ ಗಳ ಸುಮಾರು 4500 ರಷ್ಟು ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಅವರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತರುವ ಉದ್ದೇಶದಿಂದ ಅಂತರ್ ಕ್ಯಾಂಪಸ್ ಪ್ರತಿಭಾ ಸಂಗಮ ಹಾಗೂ ಸಾರ್ವಜನಿಕ ಸಮಾವೇಶ ಇಹ್ಸಾನೋತ್ಸ್ಸವ- 25 ಇದೇ ಬರುವ 19,20 ದಿನಾಂಕಗಳಲ್ಲಿ ಕೊಪ್ಪಳ ಗಂಗಾವತಿಯಲ್ಲಿ ನಡೆಯಲಿದೆ.

ಅದರ ಪ್ರಚಾರಾರ್ಥ ವಾಗಿ ದ. ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ 13,14,&15 ರಂದು ಇಹ್ಸಾನ್ ಸ್ನೇಹ ಸಂಚಾರ ಎಂಬ ವಾಹನ ಸಂದೇಶ ಯಾತ್ರೆಯು ನಡೆಯಲಿದೆ.
13 ರಂದು ಬೆಳಿಗ್ಗೆ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಝಿಯಾರತ್ ನೊಂದಿಗೆ ಚಾಲನೆಗೊಳ್ಳಲಿದ್ದು ಸಯ್ಯಿದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಬಿ ಜಿ ಹನೀಫ್ ಹಾಜಿ ಧ್ವಜ ಹಸ್ತಾಂತರ ಮಾಡಲಿದ್ದಾರೆ. ಸಯ್ಯಿದ್ ಜಲಾಲುದ್ದೀನ್ ತಂಙಳ್ ದುಆ ಮಾಡಲಿದ್ದಾರೆ. ಶಿಹಾಬುದ್ದೀನ್ ಸಖಾಫಿ ಉಳ್ಳಾಲ, ಡಾ ಎಂ ಎಸ್ ಎಂ ಝೈನಿ ಕಾಮಿಲ್, ಎನ್ ಕೆ ಎಂ ಶಾಫಿ ಸಅದಿ ಬೆಂಗಳೂರು, ಎಸ್ ವೈ ಎಸ್ ರಾಜ್ಯಾಧ್ಯಕ್ಷ ಎಂ ವೈ ಹಫೀಳ್ ಸಅದಿ ಕೊಡಗು, ಕೆ ಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಹಾಜಿ ಶೇಖ್ ಬಾವ ಮಂಗಳೂರು ಎನ್ ಎಸ್ ಅಬ್ದುಲ್ಲಾ ಹಾಜಿ
ಸಯ್ಯಿದ್ ಖುಬೈಬ್ ತಂಙಳ್, ಬಷೀರ್ ಸಖಾಫಿ,ಇಸಾಕ್ ಹಾಜಿ,ಇಬ್ರಾಹಿಮ್ ಅಹ್ಸನಿ
ಸಹಿತ ಹಲವಾರು ಉಮರಾ ಉಲಮಾ ನಾಯಕರು ಭಾಗವಹಿಸಲಿದ್ದಾರೆ. ಅಂದು ಸಂಜೆ 6 ಗಂಟೆಗೆ ಉಪ್ಪಿನಂಗಡಿಯ ಕುಪ್ಪೆಟ್ಟಿಯಲ್ಲಿ ಸಮಾರೋಪ ಗೊಳ್ಳಲಿದೆ.


14 ರಂದು ಬೆಳಿಗ್ಗೆ ಉಜಿರೆ ಯಿಂದ ಪ್ರಾರಂಭಗೊಂಡು ಅಂದು ಸಂಜೆ ಮೂಡಬಿದಿರೆ ಯಲ್ಲಿ ಸಮಾರೋಪ ಗೊಳ್ಳಲಿದೆ.
15 ರಂದು ಬೆಳಿಗ್ಗೆ ಕಾರ್ಕಳ ಸಾಣೂರಿನಿಂದ ಪ್ರಾರಂಭಗೊಂಡು ಸಂಜೆ ಕುಂದಾಪುರ ಕೋಡಿಯಲ್ಲಿ ಸಮಾರೋಪ ಗೊಳ್ಳಲಿದೆ.

ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದವರು: ಹಾಫಿಳ್ ಯಾಕೂಬ್ ಸಅದಿ ನಾವೂರು (ಚೀಫ್ ಕೋಆರ್ಡಿನೇಟರ್ ಇಹ್ಸಾನ್ ಸ್ನೇಹ ಸಂಚಾರ ಸಮಿತಿ)

ಭಾಗವಹಿಸಿದವರು:ಡಾ ಎಂ ಎಸ್ ಎಂ ಝೈನಿ ಕಾಮಿಲ್
(ಸಂಚಾಲಕರು ಇಹ್ಸಾನೋತ್ಸ್ಸವ ಸಮಿತಿ)
ಎಂಪಿಎಂ ಅಶ್ರಫ್ ಸಅದಿ ಮಲ್ಲೂರು (ಚೇರ್ ಮಾನ್ ಇಹ್ಸಾನ್ ಸ್ನೇಹ ಸಂಚಾರ ಸಮಿತಿ)
ಸಿ ಎಚ್ ಮುಹಮ್ಮದಲಿ ಸಖಾಫಿ ಅಶ್ಹರಿಯ್ಯಾ
(ಜನರಲ್ ಕನ್ವೀನರ್ ಇಹ್ಸಾನ್ ಸ್ನೇಹ ಸಂಚಾರ ಸಮಿತಿ)
ಅಶ್ರಫ್ ಕಿನಾರ ಮಂಗಳೂರು
( ಕೋಆರ್ಡಿನೇಟರ್ ಇಹ್ಸಾನೋತ್ಸ್ಸವ- ಸಮಿತಿ
ಅಲಿಕುಂಞಿ ಹಾಜಿ ಪಾರೆ (ಅಧ್ಯಕ್ಷರು ಕರ್ನಾಟಕ ಮುಸ್ಲಿಂ ಜಮಾಅತ್ ದ. ಕ ಜಿಲ್ಲೆ )
ವಿಯು ಇಸ್ಹಾಕ್ ಝುಹ್ರಿ (ಅಧ್ಯಕ್ಷರು ಎಸ್ ವೈ ಎಸ್ ದ. ಕ ಜಿಲ್ಲೆ)
ನವಾಝ್ ಸಖಾಫಿ ಅಡ್ಯಾರ್ ಪದವು
( ಕೋಆರ್ಡಿನೇಟರ್ ಇಹ್ಸಾನೋತ್ಸ್ಸವ- ಸಮಿತಿ
ಸಲೀಂ‌ ಕನ್ಯಾಡಿ( ಕೋಆರ್ಡಿನೇಟರ್ ಇಹ್ಸಾನೋತ್ಸ್ಸವ- ಸಮಿತಿ
ಇಸ್ಮಾಯಿಲ್ ಮಾಸ್ಟರ್ ಮಂಜನಾಡಿ (ಸದಸ್ಯರು ಇಹ್ಸಾನ್ ಸ್ನೇಹ ಸಂಚಾರ ಸಮಿತಿ)
ಸಯ್ಯಿದ್ ಇಸಾಕ್ ತಂಙಳ್ ಕಣ್ಣೂರು (ಸದಸ್ಯರು ಇಹ್ಸಾನ್ ಸ್ನೇಹ ಸಂಚಾರ ಸಮಿತಿ)
ಮುತ್ತಲಿಬ್ ಮೂಡುಬಿದಿರೆ( ಸದಸ್ಯರು ಇಹ್ಸಾನ್ ಸ್ನೇಹ ಸಂಚಾರ ಸಮಿತಿ)
ಹಸನ್ ಪಾಂಡೇಶ್ವರ( ಸದಸ್ಯರು ಇಹ್ಸಾನ್ ಸ್ನೇಹ ಸಂಚಾರ ಸಮಿತಿ).

error: Content is protected !! Not allowed copy content from janadhvani.com