janadhvani

Kannada Online News Paper

ಇಂದಿನಿಂದ ಕನ್ಯಾನ ಉದಯಾಸ್ತಮಾನ ಉರೂಸ್ ಮುಬಾರಕ್ – ದುಲ್ ಫುಖಾರ್ ಗಲ್ಫ್ ಕಮಿಟಿ ಯಶಸ್ವಿಗೆ ಕರೆ

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಮಝಾರೇ ಶರೀಫ್ ಗಳಲ್ಲೊಂದಾದ ಕನ್ಯಾನ ಹಝ್ರತ್ ಶಾಹುಲ್ ಹಮೀದ್ ವಲಿಯುಲ್ಲಾಹಿ ಖ.ಸಿ.ರವರ ಹೆಸರಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ ನಡೆಸಲ್ಪಡುವ ಉದಯಾಸ್ತಮಾನ ಉರೂಸ್ ಮುಬಾರಕ್ ಗೆ ಇಂದು ವಿದ್ಯುಕ್ತ ಚಾಲನೆ ಲಭಿಸಲಿದೆ. ಜನವರಿ 9 ರಿಂದ ಜನವರಿ 19 ರ ತನಕ ಉರೂಸ್ ಕಾರ್ಯಕ್ರಮ ನಡೆಯಲಿದೆ.

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ ಪಿ ಉಸ್ತಾದರ ನೇತೃತ್ವದಲ್ಲಿ ನಡೆಯುವ ಉದಯಾಸ್ತಮಾನ ಉರೂಸ್ ಮುಬಾರಕಿನ ಉದ್ಘಾಟನಾ ದಿನವಾದ ಇಂದು ಸಯ್ಯಿದ್ ಶಹೀರ್ ಅಲ್ ಬುಖಾರಿ ಪೊಸೋಟು, ಮೌಲಾನ ಪೇರೋಡು ಅಬ್ದುಲ್ ರಹಿಮಾನ್ ಸಖಾಫಿ , ಕೆ.ಎಂ ಇಬ್ರಾಹಿಂ ಫೈಝಿ ಕನ್ಯಾನ ಮುಂತಾದವರು ಭಾಗವಹಿಸಲಿದ್ದಾರೆ

ಕೇರಳ ಮತ್ತು ಕರ್ನಾಟಕದ ಸುಪ್ರಸಿದ್ದ ವಾಗ್ಮಿಗಳೂ ಸಾದಾತುಗಳೂ ಭಾಗವಹಿಸುವ ಮುಂದಿನ 9 ದಿವಸಗಳ ಕಾಲ ನಡೆಯುವ ಧಾರ್ಮಿಕ ಮತ ಪ್ರವಚನ ಹಾಗೂ ಕೊನೆಯ ದಿನದ ಮೌಲಿದ್ ಮತ್ತು ಅನ್ನದಾನ ಕಾರ್ಯಕ್ರಮದಲ್ಲಿ ಸರ್ವರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ದುಲ್ ಫುಖಾರ್ ಗಲ್ಫ್ ಕಮಿಟಿ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ದುಲ್ ಫುಖಾರ್ ಗಲ್ಫ್ ಕಮಿಟಿಯ ಪ್ರಾಯೋಜಕತ್ವದಲ್ಲಿ ಪ್ರತಿ ದಿನ ರಾತ್ರಿಯ ಉರೂಸ್ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ನೇರ ಪ್ರಸಾರ ಮಾಡಲಾಗುತ್ತದೆ.

error: Content is protected !! Not allowed copy content from janadhvani.com