janadhvani

Kannada Online News Paper

ಸೌದಿ: ಧಾರಾಕಾರ ಮಳೆ ಮುಂದುವರಿಕೆ- ವಿವಿಧ ಪ್ರಾಂತ್ಯಗಳಲ್ಲಿ ನಾಳೆಯೂ ರೆಡ್ ಅಲರ್ಟ್

ಮದೀನಾ, ಉತ್ತರ ಗಡಿ ಪ್ರದೇಶಗಳು ಮತ್ತು ಹಾಯಿಲ್ ನಲ್ಲಿ ನಾಳೆ ಮಳೆ ಬೀಳಲಿದೆ.

ಜಿದ್ದಾ: ಸೌದಿ ಅರೇಬಿಯಾದ ವಿವಿಧ ಪ್ರಾಂತ್ಯಗಳಲ್ಲಿ ನಾಳೆ ಕೂಡ ರೆಡ್ ಅಲರ್ಟ್ ಘೋಷಿಸಲಾಗಿದೆ. ದೇಶದಲ್ಲಿ ಭಾರೀ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹವಾಮಾನ ಕೇಂದ್ರವು ನಾಳೆ ರೆಡ್ ಅಲರ್ಟ್ ಘೋಷಿಸಿದೆ.ಹಫರಲ್ ಬಾತಿನ್ ಸೇರಿದಂತೆ ಪೂರ್ವ ಪ್ರಾಂತ್ಯದಲ್ಲೂ ರಿಯಾದಿನ ಝುಲ್ಫಾ, ಮಜ್ಮಾ, ಅಲ್-ಘಾತ್, ಶಕ್ರಾ, ದವಾದ್ಮಿ ಮತ್ತು ಅಫೀಫ್ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಭಾರೀ ಮಳೆಯ ಸಂದರ್ಭದಲ್ಲಿ ಎಚ್ಚರಿಕೆ ವಹಿಸುವಂತೆ ನಾಗರಿಕ ರಕ್ಷಣಾ ಇಲಾಖೆ ಸೂಚನೆ ನೀಡಿದೆ. ಮದೀನಾ, ಉತ್ತರ ಗಡಿ ಪ್ರದೇಶಗಳು ಮತ್ತು ಹಾಯಿಲ್ ನಲ್ಲಿ ನಾಳೆ ಮಳೆ ಬೀಳಲಿದೆ. ಅಲ್ಜೌಫ್, ತಬೂಕ್ ಮತ್ತು ಉತ್ತರದ ಗಡಿ ಪ್ರದೇಶಗಳಲ್ಲಿ ಮಂಜು ಮುಸುಕಿದ ವಾತಾವರಣಕ್ಕೆ ಸಾಧ್ಯತೆ ಇದೆ. ಇಂದು ಪಶ್ಚಿಮಘಟ್ಟದ ವಿವಿಧೆಡೆ ಧಾರಾಕಾರ ಮಳೆಯಾಗಿದೆ. ಮಳೆಯೊಂದಿಗೆ ಉತ್ತರದ ಗಡಿ ಪ್ರದೇಶಗಳು ಮತ್ತು ಅಲ್ಜೌಫ್ ಪ್ರದೇಶಗಳಲ್ಲಿ ತಾಪಮಾನವು ಮತ್ತೆ ಕುಸಿಯಲಿದೆ. ಮುಂದಿನ ದಿನಗಳಲ್ಲಿ ಕನಿಷ್ಠ ತಾಪಮಾನ 2 ಡಿಗ್ರಿ ಸೆಲ್ಸಿಯಸ್ ನಿಂದ -2 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

error: Content is protected !! Not allowed copy content from janadhvani.com