ಪುತ್ತೂರು :- ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಂಟ್ಯಾರ್ ಬ್ರಾಂಚ್ ವತಿಯಿಂದ ಆದಿತ್ಯವಾರ ಸಂಟ್ಯಾರ್ ಶಾಲಾ ಬಳಿ ಮರ್ಹೂಂ ಆಶಿರ್ (ಅಪ್ಪು) ಕಲ್ಲರ್ಪೆ ಸ್ಮರಣಾರ್ಥ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ) ಹಾಗೂ ಏ.ಜೆ ಆಸ್ಪತ್ರೆ ರಕ್ತನಿಧಿ ಮಂಗಳೂರು ಸಹಯೋಗದೊಂದಿಗೆ ಸಾರ್ವಜನಿಕ ರಕ್ತದಾನ ಶಿಬಿರ ಹಾಗೂ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಸಹಯೋಗದೊಂದಿಗೆ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಸಂಟ್ಯಾರ್ ಬ್ರಾಂಚ್ ಅಧ್ಯಕ್ಷರಾದ ಝಕರಿಯಾ ರವರು ವಹಿಸಿದ್ದರು. ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಶಾಕಿರ್ ಅಳಕೆಮಜಲುರವರು ಉದ್ಘಾಟನಾ ಮಾತುಗಳನ್ನಾಡಿ “ಎಲ್ಲಾ ಧರ್ಮದವರದ್ದು ಒಂದೇ ಬಣ್ಣದ ರಕ್ತ , ಯಾವ ಧರ್ಮದವರು ಯಾವ ಧರ್ಮದವರಿಗೂ ರಕ್ತ ನೀಡಬಹುದು. ಹಗೆತನ , ದ್ವೇಷ ಬಿಟ್ಟು ಎಲ್ಲರೂ ಸಮಾನತೆಯಿಂದ ಸೌಹಾರ್ಧತೆಯಿಂದ ಬಾಳಬೇಕು ” ಎಂದು ಹೇಳಿದರು. ಎಸ್ಡಿಪಿಐ ಕುಂಬ್ರ ಬ್ಲಾಕ್ ಅಧ್ಯಕ್ಷರಾದ ರಿಯಾಝ್ ಬಳಕ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ದ.ಕ.ಜಿ.ಪ.ಹಿ.ಪ್ರಾ.ಶಾಲೆ ಹಂಟ್ಯಾರು ಇದರ SDMC ಅಧ್ಯಕ್ಷರಾದ ಬಾಬು ಮರಿಕೆರವರು ಮಾತನಾಡಿ ” ಇಂದಿನ ಯುಗದಲ್ಲಿ ಅಪೌಷ್ಠಿಕಾಂಶ ಆಹಾರಗಳನ್ನು ಸೇವಿಸಿ ಅರೋಗ್ಯವನ್ನು ಹದಗೆಡಿಸುತ್ತಿದ್ದಾರೆ.ಹಣ ನೀಡಿ ಆರೋಗ್ಯ ಕೆಡಿಸಿ ಮತ್ತೆ ಅದೇ ಹಣ ನೀಡಿ ಆರೋಗ್ಯವನ್ನು ಸರಿಪಡಿಸಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ.ಅಂತಹ ಸೇವನೆಗಳನ್ನು ಕಡಿಮೆ ಮಾಡಬೇಕು. ಜನಸಾಮಾನ್ಯರಿಗೆ ತಮ್ಮ ಅರೋಗ್ಯ ತಪಾಸಣೆ ಮಾಡಲು ಇಂತಹ ಕಾರ್ಯಕ್ರಮಗಳು ಇನ್ನೂ ನಡೆಯಬೇಕು ಎಸ್ಡಿಪಿಐ ಸಂಟ್ಯಾರ್ ಬ್ರಾಂಚ್ ಕಾರ್ಯಕರ್ತರ ಈ ಕಾರ್ಯಕ್ರಮ ಶ್ಲಾಘನೀಯ ಎಂದು ಅಭಿನಂದಿಸಿ “ಒಳಿತು ಮಾಡು ಮನುಷಾ” ಎಂಬ ಹಾಡನ್ನು ಹಾಡಿ ಗಮನಸೆಳೆದರು.
ನಮ್ಮಂತಹ ಜನಸಾಮಾನ್ಯರು ತಮ್ಮ ಆಸ್ಪತ್ರೆಗಳಿಗೆ ವೈದ್ಯಕೀಯ ಉದ್ದೇಶಕ್ಕಾಗಿ ಬಂದರೆ ಅವರನ್ನು ಕಡೆಗಣಿಸದೆ ಉತ್ತಮ ರೀತಿಯಲ್ಲಿ ಸುಶ್ರೂಷೆ ನೀಡಿ ಎಂದು ಆಗಮಿಸಿದಂತಹ ಎಲ್ಲಾ ವೈದ್ಯರುಗಳಲ್ಲಿ ವಿನಂತಿಸಿಕೊಂಡರು”. ಪುತ್ತೂರಿನ ಖ್ಯಾತ ಮಧುಮೇಹ ತಜ್ಞರಾದ ಡಾ|| ನಝೀರ್ ಅಹಮ್ಮದ್ ರವರು ಮಾತನಾಡಿ ” ಇಂತಹ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮಗಳ ಜೊತೆಗೆ ರೋಗಗಳು ಬಾರದಂತೆ ಸಾಧ್ಯವಾಗುವ ರೀತಿಯಲ್ಲಿ ಹೇಗೆ ತಡೆಗಟ್ಟಬಹುದು ಎಂಬ ಜಾಗೃತಿ ಅಭಿಯಾನಗಳನ್ನು ಕೈಗೊಳ್ಳಬೇಕು. ಎಸ್ಡಿಪಿಐ ಪಕ್ಷದ ಅಧೀನದಲ್ಲಿ ಇಂತಹ ಕಾರ್ಯಕ್ರಮಗಳು ಹಲವಾರು ಕಡೆಗಳಲ್ಲಿ ನಡೆದಿದ್ದು ಸಾಧ್ಯವಾದಷ್ಟು ಕಾರ್ಯಕ್ರಮಗಳಲ್ಲಿ ನಾನೂ ಭಾಗವಹಿಸಿದ್ದೇನೆ, ಅವರ ಈ ಕಾರ್ಯ ಪ್ರಶಂಸನೀಯ ” ಎಂದರು .ಕಾರ್ಯಕ್ರಮದ ಕೊನೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. 40 ಯುನಿಟ್ ರಕ್ತದಾನ ಸಂಗ್ರಹಿಸಲಾಯಿತು ಹಾಗೂ 130 ಕ್ಕಿಂತ ಹೆಚ್ಚಿನ ಊರವರು ಆರೋಗ್ಯ ತಪಾಸಣೆ ನಡೆಸಿದರು.
ಈ ಸಂದರ್ಭದಲ್ಲಿ SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಅಶ್ರಫ್ ಬಾವು , ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮಾರ್ಕೆಟಿಂಗ್ ಮುಖ್ಯಸ್ಥರಾದ ಉಮೇಶ್ ಗೌಡ, ಮೂಳೆ ತಜ್ಞರಾದ ಡಾ.ಹರ್ಶ ರಾವ್, ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ (ರಿ) ಇದರ ನಿರ್ವಾಹಕರಾದ ರಿಯಾಝ್ ಕಣ್ಣೂರು , ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ಕುರಿಯ , ಬದ್ರಿಯಾ ಜುಮಾ ಮಸೀದಿ ಸಂಟ್ಯಾರ್ ಇದರ ಜಮಾಅತ್ ಕಮಿಟಿ ಪ್ರಧಾನ ಕಾರ್ಯದರ್ಶಿ ಹಮೀದ್ ಕಲ್ಲರ್ಪೆ , ಎಸ್ಡಿಪಿಐ ಆರ್ಯಾಪು ಗ್ರಾಮ ಸಮಿತಿ ಅಧ್ಯಕ್ಷರಾದ ಬಶೀರ್ ವಾಗ್ಲೆ , ಕಾರ್ಯದರ್ಶಿ ಮಸೂದ್ ಸಂಟ್ಯಾರ್ , ಸುಬುಲ್ ಸಲಾಂ ಮದ್ರಸ ಸಂಟ್ಯಾರ್ ಇದರ ಮ್ಯಾನೇಜ್‌ಮೆಂಟ್ ಸದಸ್ಯರಾದ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ , ಅನ್ಸಾರಿಯಾ ಯಂಗ್ಮೆನ್ಸ್ ಅಸೋಸಿಯೇಶನ್ ಸಂಟ್ಯಾರ್ ಇದರ ಅಧ್ಯಕ್ಷರಾದ ಫವಾಝ್ ಮರಿಕೆ , SKSSF ಇದರ ಅಧ್ಯಕ್ಷರಾದ ಜಲೀಲ್ ಮರಿಕೆ ಹಾಗೂ ಯುವ ಉದ್ಯಮಿಯಾದ ಸಮೀರ್ ಚಾಂದ್, ಹಸೈನಾರ್ ಆರ್ಯಾಪು ರವರು ಉಪಸ್ಥಿತರಿದ್ದರು.
ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ( ರಿ ) ಮತ್ತು ಏ.ಜೆ.ಆಸ್ಪತ್ರೆ ರಕ್ತನಿಧಿ ಮಂಗಳೂರು ಹಾಗೂ ಜನಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಇದರ ಸಿಬ್ಬಂದಿ ವರ್ಗದವರು ಸಹಕರಿಸಿದರು.ಅಝೀಝ್ ಟೋಪ್ಕೋ ಕಾರ್ಯಕ್ರಮ ನಿರೂಪಿಸಿದರು. ಎಸ್ಡಿಪಿಐ ಸಂಟ್ಯಾರ್ ಬ್ರಾಂಚ್ ಕಾರ್ಯದರ್ಶಿ ಶಾಫಿ ಮರಿಕೆ ಸ್ವಾಗತಿಸಿ ವಂದಿಸಿದರು.
ಸನ್ಮಾನ
ರಾತ್ರಿ-ಹಗಲು, ಗಾಳಿ-ಮಳೆಯನ್ನು ಲೆಕ್ಕಿಸದೆ ಊರಿಗೆ ಬೆಳಕು ನೀಡಲು ಜೀವ ಒತ್ತೆ ಇಟ್ಟು ಸೇವೆಗೈಯುತ್ತಿರುವ ಊರಿನ ಲೈನ್ ಮ್ಯಾನ್ ಗಳಾದ ಚಂದ್ರಶೇಖರ್ ಮೆಸ್ತಕ್ ಯಾದಗಿರಿ ಹಾಗೂ ಪೀರು ನಾಯ್ಕ್ ಚಿಕ್ಕಬಳ್ಳಾಪುರ ರವರ ಸೇವೆಯನ್ನು ಗುರುತಿಸಿ ಕಾರ್ಯಕ್ರಮದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.