ದುಬೈ: ದುರಂತಗಳನ್ನು ಎದುರಿಸುತ್ತಿರುವ ದೇಶಗಳ ನಾಗರಿಕರಿಗೆ ದುಬೈ ಒಂದು ವರ್ಷ ವಾಸವಿರಬಹುದಾದ ಉಚಿತ ವಿಸಾ ನೀಡಲು ಸಜ್ಜಾಗಿದೆ.
ಯುದ್ಧ ಮತ್ತು ನೈಸರ್ಗಿಕ ವಿಪತ್ತುಗಳಿಂದ ಕಂಗಾಲಾಗಿರುವ ದೇಶಗಳ ನಾಗರಿಕರಿಗೆ ಒಂದು ವರ್ಷದ ನಿವಾಸವನ್ನು ಒದಗಿಸಲು ಯುಎಇ ಸಚಿವಾಲಯ ನಿರ್ಧರಿಸಿದೆ.
ಇದು ಯಾತನೆ ಅನುಭವಿಸುವವರಿಗೆ ಸಾಂತ್ವನ ಮತ್ತು ಭದ್ರತೆಯನ್ನು ಒದಗಿಸುವ ಪ್ರಕ್ರಿಯೆಯ ಭಾಗವಾಗಿದೆ. ಜುಲೈ 1ರಿಂದ ಅಕ್ಟೋಬರ್ 31 ರವರೆಗೆ ವೀಸಾಗಾಗಿ ಅರ್ಜಿ ಸಲ್ಲಿಸಬಹುದು. ಈ ಕುರಿತು ವಿವರಗಳನ್ನು ಶೀಘ್ರವಾಗಿ ಘೋಷಿಸಲಾಗುವುದು.