ಅಬುಧಾಬಿ: ಸುಮಾರು ಎರಡು ತಿಂಗಳ ಕಾಲ ಅಬುಧಾಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉತ್ತರ ಪ್ರದೇಶ ಮೂಲದ ಸಂಜಯ್ ಎಂಬ ಯುವಕನಿಗೆ ಕೆಸಿಎಫ್ ಸಹಾಯ ಹಸ್ತ ನೀಡಿದೆ.
ನ್ಯುಮೋನಿಯಾ ಕಾರಣ ಕೋಮಾ ಸ್ಥಿತಿಗೆ ತಲುಪಿ ಆಶ್ರಿತರಿಲ್ಲದೆ ಕಷ್ಟಪಡುತ್ತಿದ್ದ ಸಂಜಯ್ ಅವರನ್ನು ಕೆಸಿಎಫ್ ಸನ್ನದ್ಧ ಸಂಘದ ಮುಹಮ್ಮದ್ ಕುಂಞಿ ಮತ್ತು ಹಕೀಂ ತುರ್ಕಳಿಕೆ ನಿರಂತರ ಬೇಟಿಯಾಗಿ ಆರೈಕೆ ನೀಡಿದ್ದರಲ್ಲದೆ, ಗುಣಮುಖರಾಗಿ ಇತ್ತೀಚೆಗೆ ಸಂಜಯ್ ಅವರನ್ನು ಊರಿಗೆ ಕಳುಹಿಸುವ ವರೆಗೂ ಅವರೊಂದಿಗೆ ಜೊತೆಗಿದ್ದು ಸಂಜಯ್ ಮತ್ತು ಸಹ ಯಾತ್ರಿಕನ ಟಿಕೆಟ್, ವೀಲ್ ಚೇರ್ ಮುಂತಾದ ಸೌಲಭ್ಯಗಳನ್ನು ಒದಗಿಸಲು ನೆರವಾದರು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ನಾಯಕರು ಕೆಸಿಎಫ್ ಅಬುಧಾಬಿ ಸಾಂತ್ವನ ವಿಭಾಗದ ಸೇವೆಯನ್ನು ಶ್ಲಾಘಿಸಿದ್ದಾರೆ.