janadhvani

Kannada Online News Paper

ಭಾರತದಿಂದ ಜಿದ್ದಾಕೆ ಹೊರಟಿದ್ದ ವಿಮಾನ ಪಾಕಿಸ್ತಾನದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್

ಇಂಡಿಗೋದ 6E 63 ವಿಮಾನವು ಶನಿವಾರ ರಾತ್ರಿ 8.30 ಕ್ಕೆ ದೆಹಲಿಯಿಂದ ಹೊರಟಿತ್ತು

ಕರಾಚಿ, ಪಾಕಿಸ್ತಾನ: ದೆಹಲಿಯಿಂದ ಸೌದಿ ಅರೇಬಿಯಾದ ಜಿದ್ದಾಗೆ ಹೊರಟಿದ್ದ ಇಂಡಿಗೋ ವಿಮಾನ ವೈದ್ಯಕೀಯ ಪರಿಸ್ಥಿತಿಯಿಂದ ಕರಾಚಿಯ ಜಿನ್ನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಇಂಡಿಗೋದ 6E 63 ವಿಮಾನವು ಶನಿವಾರ ರಾತ್ರಿ 8.30 ಕ್ಕೆ ದೆಹಲಿಯಿಂದ ಹೊರಟಿತು, ಆದರೆ ಎರಡು ಗಂಟೆಗಳ ನಂತರ ವಿಮಾನದಲ್ಲಿ ವ್ಯಕ್ತಿಯೊಬ್ಬರು ಗಂಭೀರ ಆರೋಗ್ಯ ಸಮಸ್ಯೆಗೆ ಒಳಗಾದ ಹಿನ್ನೆಲೆ ಪಾಕಿಸ್ತಾನದಲ್ಲಿ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

ಜಿಯೋ ನ್ಯೂಸ್ ಪ್ರಕಾರ, 55 ವರ್ಷದ ಭಾರತೀಯರೊಬ್ಬರು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದು, ಅವರಿಗೆ ತಕ್ಷಣದ ವೈದ್ಯಕೀಯ ನೆರವು ಹಿನ್ನೆಲೆಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ.

ಅನಾರೋಗ್ಯಗೊಂಡ ಪ್ರಯಾಣಿಕರಿಗೆ ತಕ್ಷಣಕ್ಕೆ ಆಕ್ಸಿಜನ್‌ ನೀಡಿದರೂ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆ ಭಾರತೀಯ ವಿಮಾನಯಾನ ಸಂಸ್ಥೆ ಕರಾಚಿ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ ಅನ್ನು ಸಂಪರ್ಕಿಸಿದೆ.

ಮಾನವೀಯ ನೆಲೆ ಆಧಾರದ ಮೇಲೆ ಕರಾಚಿ ಏ‌ರ್ ಟ್ರಾಫಿಕ್ ಕಂಟ್ರೋಲ್ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶಕ್ಕೆ ಅವಕಾಶ ನೀಡಿತು. ವಿಮಾನ ಲ್ಯಾಂಡ್ ಆಗುತ್ತಿದ್ದಂತೆ, ಅಲ್ಲಿ ವೈದ್ಯಕೀಯ ತಂಡವು ಪ್ರಯಾಣಿಕರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲು ವಿಮಾನ ಪ್ರವೇಶಿಸಿದರು.

ಈ ಸಮಸ್ಯೆ ಪರಿಹಾರ ಕಂಡ ಬಳಿಕ ವಿಮಾನವು ಕರಾಚಿಯಿಂದ ಸೌದಿ ಅರೇಬಿಯಾದ ಜಿದ್ದಾಗೆ ತೆರಳುವ ಬದಲಾಗಿ ದೆಹಲಿಗೆ ವಾಪಸ್ ಮರಳಿ ಅನಾರೋಗ್ಯಗೊಂಡ ಪ್ರಯಾಣಿಕನನ್ನು ಇಳಿಸಿದ ಬಳಿಕ ಮತ್ತೆ ಜಿದ್ದಾಕೆ ಹೊರಟಿದೆ ಎಂದು ವರದಿ ತಿಳಿಸಿದೆ.

error: Content is protected !! Not allowed copy content from janadhvani.com