ಯಶಸ್ವಿ 91 ವರ್ಷವನ್ನು ಪೂರ್ತಿಗೊಳಿಸಿದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಾದಕಟ್ಟೆ ವತಿಯಿಂದ ದಿನಾಂಕ 14-12-2024 ರಂದು ನಡೆದ ಸಾರ್ವಜನಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅತ್ಯುತ್ತಮ ಸಂಘಟನೆ ಪ್ರಶಸ್ತಿ ಯನ್ನು ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸನ್ಮಾನ್ಯ ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ, ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಂ ಎಸ್ ಮುಹಮ್ಮದ್, ಹೈಕೋರ್ಟ್ ನ ಖ್ಯಾತ ನ್ಯಾಯವಾದಿ ಅರುಣ್ ಶಾಂ, ಕ್ಯಾನ್ಸರ್ ರೋಗ ತಜ್ಞರಾದ ಡಾ.ಅಜಯ್, ಡಾ.ಸಂಗೀತಾ, ಡಾ. ಸುಜಯ್, ಗಲ್ಫ್ ಉದ್ಯಮಿ ಹಮೀದ್ ಕುಲ್ಯಾರು, ಎಸ್ ಎಂ ಎ ರಾಜ್ಯ ಕೋಶಾಧಿಕಾರಿ ಹಮೀದ್ ಹಾಜಿ ಕೊಡುಂಗಾಯಿ, ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹನೀಫ್ ಹಾಜಿ ಗೋಳ್ತಮಜಲು, ಕಾರ್ಯದರ್ಶಿ ನ್ಯಾಯವಾದಿ ಅಬೂಬಕ್ಕರ್ ವಿಟ್ಲ, ಮಂಗಳೂರು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಮೋನಾಕ, ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರಝಾಕ್ ಕುಕ್ಕಾಜೆ, ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹಾಜಬ್ಬ ಹರೇಕಳ, ಐಬಿ ಬಶೀರ್ ಪೈಚಾರ್, ಹೈದರ್ ಪರ್ತಿಪ್ಪಾಡಿ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುದೀಪ್ ಶೆಟ್ಟಿ ಮಾಣಿ, ಸ್ನೇಹ ಮಿಲನ ಅಧ್ಯಕ್ಷರಾದ ನಾರಾಯಣ ಶೆಟ್ಟಿ ಕುಲ್ಯಾರು, ಎಸ್ ಎಂ ಎ ಬಂಟ್ವಾಳ ಝೋನ್ ಮಾಜಿ ಅಧ್ಯಕ್ಷರಾದ ಸಿ ಎಚ್ ಅಬೂಬಕ್ಕರ್, ಯೂಸುಫ್ ತಾಳಿತ್ತನೂಜಿ, ಮಾದಕಟ್ಟೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹಂಝ ಬಾರೆಬೆಟ್ಟು, ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಫ್ ಸಾಲೆತ್ತೂರು, ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಸಿ ಎಚ್ ರಝಾಕ್, ರಾಜೇಶ್ ಗೌಡ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲಿ ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಅಕ್ಷಯ ಚಾರಿಟೇಬಲ್ ಟ್ರಸ್ಟ್ ಕರ್ನಾಟಕ (ರಿ) ಸಂಸ್ಥೆಗೆ ಅತ್ಯುತ್ತಮ ಸಂಘಟನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನೌಫಲ್ ಕೆಬಿಎಸ್ ಸ್ವಾಗತಿಸಿ ವಂದಿಸಿದರು.