janadhvani

Kannada Online News Paper

ಸೌದಿ: ಮೊಬೈಲ್ ಚಾರ್ಜರ್ ಸ್ಫೋಟ- ಮರಣ ಹೊಂದಿದ ಆರು ಮಂದಿಯ ದಫನ ಕಾರ್ಯ ಪೂರ್ಣ

ಒಂದೇ ಕುಟುಂಬದ ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿ ಆರು ಜನರು ಮೃತಪಟ್ಟಿದ್ದರು.

ಅಲ್ ಹಸ್ಸಾ: ಸೌದಿ ಅರೇಬಿಯಾದ ಅಲ್ಹಸ್ಸಾದಲ್ಲಿ ಮೊಬೈಲ್ ಫೋನ್ ಚಾರ್ಜರ್ ಸ್ಫೋಟದ ಅಪಘಾತದಲ್ಲಿ ಮೃತಪಟ್ಟ ಆರು ಜನರ ಮೃತದೇಹಗಳನ್ನು ದಫನ ಮಾಡಲಾಯಿತು. ಹುಫೂಫ್‌ನ ಅಲ್ನಾಥಲ್ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಅವರ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಒಂದೇ ಕುಟುಂಬದ ಮೂವರು ಪುರುಷರು ಮತ್ತು ಮೂವರು ಮಹಿಳೆಯರು ಸೇರಿ ಆರು ಜನರು ಮೃತಪಟ್ಟಿದ್ದರು.

ಮೃತರು ಆಲ್ಜಿಬ್ರಾನ್ ಕುಟುಂಬದ ಸದಸ್ಯರು. ಅಹ್ಮದ್ ಹುಸೇನ್ ಅಲ್ಜಿಬ್ರಾನ್, ಅಬ್ದುಲ್ ಇಲಾಹ್ ಹುಸೇನ್ ಅಲ್ಜಿಬ್ರಾನ್, ಮರ್ಯಮ್ ಹುಸೇನ್ ಅಲ್ಜಿಬ್ರಾನ್, ಇಮಾನ್ ಹುಸೇನ್ ಅಲ್ಜಿಬ್ರಾನ್, ಲತೀಫಾ ಹುಸೇನ್ ಅಲ್ಜಿಬ್ರಾನ್ ಮತ್ತು ಅವರ ಸೋದರಳಿಯ ಹಸನ್ ಅಲಿ ಅಲ್ಜಿಬ್ರಾನ್ ನಿಧನರಾದರು. ಐವರು ಒಡಹುಟ್ಟಿದವರು ಮತ್ತು ಒಬ್ಬರು ಅವರ ಸೋದರಳಿಯ. ಮೊಬೈಲ್ ಚಾರ್ಜರ್ ಸ್ಫೋಟದಿಂದ ಉಂಟಾದ ಬೆಂಕಿಯ ಹೊಗೆಯಿಂದ ಉಸಿರುಕಟ್ಟಿ ಅವರು ಮೃತಪಟ್ಟಿದ್ದಾರೆ.

ಮೃತರು ಮನೆಯಲ್ಲಿ ಮಲಗಿದ್ದರು. ಚಾರ್ಜ್ ನಲ್ಲಿರಿಸಿದ್ದ ಮೊಬೈಲ್ ಫೋನ್ ಚಾರ್ಜರ್ ಸ್ಫೋಟಗೊಂಡಿದ್ದು, ಕುಳಿತುಕೊಳ್ಳುವ ಕೋಣೆಯಲ್ಲಿದ್ದ ಸೋಫಾ ಸೆಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಬೆಂಕಿ ಬೇಗನೆ ಮನೆಗೆ ವ್ಯಾಪಿಸಿತು.

ಭಾರೀ ಜನಸಮೂಹದ ಸಮ್ಮುಖದಲ್ಲಿ, ಹುಫೂಫ್ ನ ಅಲ್-ಖುದೂದ್ ಖಬರ್ ಸ್ಥಾನದಲ್ಲಿ ಆರು ಮಂದಿಯ ಜನಾಝವನ್ನು ದಫನ ಮಾಡಲಾಯಿತು.

ತಮ್ಮ ಪ್ರೀತಿಯ ಮಕ್ಕಳನ್ನು ಕಳೆದುಕೊಂಡ ಆಘಾತ ಮತ್ತು ನೋವಿನಲ್ಲಿದೆ ಕುಟುಂಬ ಎಂದು ಅಲ್ ಗಿಬ್ರಾನ್ ಕುಟುಂಬದ ಹಿರಿಯ ಸದಸ್ಯ ಶೈಖ್ ತಾಹಿರ್ ಅಲ್-ಅಹ್ಮದ್ ಹೇಳಿದರು. ಪ್ರೀತಿಪಾತ್ರರ ನಷ್ಟದಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಮತ್ತು ಈ ಅವಘಡವು ನಮಗೆಲ್ಲರಿಗೂ ಅತ್ಯಂತ ದುಃಖವನ್ನು ತಂದಿದೆ, ಆದರೆ ಅವರು ದೇವರ ಕರುಣೆಯತ್ತ ಮರಳಿದ್ದಾರೆಂದು ನಾವು ನಂಬುತ್ತೇವೆ ಎಂದು ಅವರು ಹೇಳಿದರು.

error: Content is protected !! Not allowed copy content from janadhvani.com