janadhvani

Kannada Online News Paper

ಕೇರಳ ರಾಜ್ಯ ಹಜ್ ಸಮಿತಿ ಅಧ್ಯಕ್ಷರಾಗಿ ಅಡ್ವೊಕೇಟ್ ಹುಸೈನ್ ಸಖಾಫಿ ಚುಳ್ಳಿಕೋಡ್ ಆಯ್ಕೆ

ತಿರುವನಂತಪುರದಲ್ಲಿ ನಡೆದ ಸಭೆಯಲ್ಲಿ ಸಮಿತಿ ಸದಸ್ಯ ಉಮರ್ ಫೈಝಿ ಮುಕ್ಕಂ ಅಧ್ಯಕ್ಷ ಸ್ಥಾನಕ್ಕೆ ಹುಸೈನ್ ಸಖಾಫಿ ಹೆಸರನ್ನು ಸೂಚಿಸಿದರು

ತಿರುವನಂತಪುರಂ | 24-2027 ಸಾಲಿನ ಕೇರಳ ರಾಜ್ಯ ಹಜ್ ಸಮಿತಿ ಅಧ್ಯಕ್ಷರಾಗಿ ಅಡ್ವೊಕೇಟ್ ಹುಸೈನ್ ಸಖಾಫಿ ಚುಳ್ಳಿಕೋಡ್ ಅವಿರೋಧವಾಗಿ ಆಯ್ಕೆಯಾದರು. ಹಜ್ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಮಲಪ್ಪುರಂ ಜಿಲ್ಲಾಧಿಕಾರಿ ವಿ.ಆ‌ರ್.ವಿನೋದ್ ಅಧ್ಯಕ್ಷತೆಯಲ್ಲಿ ತಿರುವನಂತಪುರದಲ್ಲಿ ನಡೆದ ಸಭೆಯಲ್ಲಿ ಸಮಿತಿ ಸದಸ್ಯ ಉಮರ್ ಫೈಝಿ ಮುಕ್ಕಂ ಅಧ್ಯಕ್ಷ ಸ್ಥಾನಕ್ಕೆ ಹುಸೈನ್ ಸಖಾಫಿ ಹೆಸರನ್ನು ಸೂಚಿಸಿದರು. ಅಡ್ವ. ಮೊಯ್ದಿನ್ ಕುಟ್ಟಿ ಬೆಂಬಲ ವ್ಯಕ್ತಪಡಿಸಿದರು. ಚುನಾವಣಾಧಿಕಾರಿ ಬಿಂದು ವಿ.ಆ‌ರ್ ಚುನಾವಣಾ ಪ್ರಕ್ರಿಯೆಯ ಅಧ್ಯಕ್ಷತೆ ವಹಿಸಿದ್ದರು. ಬಳಿಕ ರಾಜ್ಯ ಕ್ರೀಡೆ, ಅಲ್ಪಸಂಖ್ಯಾತರ ಕಲ್ಯಾಣ, ವಕ್ಫ್ ಹಾಗೂ ಹಜ್ ಯಾತ್ರೆ ಇಲಾಖೆ ಸಚಿವ ವಿ. ಅಬ್ದುಲ್ ರಹಮಾನ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ನೂತನ ಹಜ್ ಸಮಿತಿಯ ಮೊದಲ ಸಭೆಯಲ್ಲಿ 2025 ರ ಹಜ್‌ ಸಿದ್ಧತೆಗಳನ್ನು ಮೌಲ್ಯಮಾಪನ ಮಾಡಲಾಯಿತು.

ಮಲಪ್ಪುರಂನ ಕುಝಿಮಣ್ಣ, ತವನೂರಿನವರಾದ ಹುಸೈನ್ ಸಖಾಫಿ ಅವರು ಸಮಸ್ತ ಮುಶಾವರ ಸದಸ್ಯ, ಮರ್ಕಝ್ ಕಾರ್ಯಕಾರಿ ಸದಸ್ಯ ಮತ್ತು ಕೋಝಿಕ್ಕೋಡ್ ಜಾಮಿಯಾ ಮರ್ಕಝ್ ನ ಪ್ರೊ-ಚಾನ್ಸಲರ್ ಆಗಿದ್ದಾರೆ. ಪ್ರಸ್ತುತ ಮಂಜೇರಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿದ್ದಾರೆ. ರಷ್ಯಾ, ಕೆನಡಾ, ಅಮೇರಿಕಾ, ಈಜಿಪ್ಟ್, ಮಲೇಷ್ಯಾ, ಯುಎಇ, ಲಿಬಿಯಾ, ಜೋರ್ಡಾನ್ ಮತ್ತು ಮೊರಾಕೊ ದೇಶಗಳಲ್ಲಿ ನಡೆದ ವಿವಿಧ ಅಂತರರಾಷ್ಟ್ರೀಯ ವಿದ್ವತ್ ಸಮ್ಮೇಳನಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಆವರು ಬಹುಭಾಷಾ ವಿದ್ವಾಂಸರು ಮತ್ತು ಭಾಷಣಕಾರರಾಗಿದ್ದಾರೆ.

ಕೇರಳದ ಮುಸ್ಲಿಂ ಸಂಘಟನೆಗಳು ಮತ್ತು ಅಲ್ಪಸಂಖ್ಯಾತರ ಸಮಸ್ಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹುಸೈನ್ ಸಖಾಫಿ ಅವರು ಈ ಹಿಂದೆ ಪ್ರಾರ್ಥನಾ ಸ್ಥಳಗಳ ಗಣತಿಗಾಗಿ ಸರ್ಕಾರ ನೇಮಿಸಿದ ಸಮಿತಿಯ ಸದಸ್ಯರಾಗಿದ್ದರು. ಕಾಂತಪುರಂ ಎ.ಪಿ.ಅಬೂಬಕ‌ರ್ ಮುಸ್ಲಿಯಾರ್ ಅವರ ಪ್ರಮುಖ ಶಿಷ್ಯಂದಿರಲ್ಲೊಬ್ಬರಾಗಿದ್ದಾರೆ ಚುಳ್ಳಿಕೋಡ್ ಸಖಾಫಿ.

ಅವರು ಮರ್ಕಝ್ ಶರಿಯಾ ಕಾಲೇಜಿನಿಂದ ಧಾರ್ಮಿಕ ಅಧ್ಯಯನದಲ್ಲಿ ಬಿರುದು, ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ ಅರೇಬಿಕ್ ಭಾಷೆ ಮತ್ತು ನ್ಯಾಯಶಾಸ್ತ್ರದಲ್ಲಿ ಬಿರುದು ಮತ್ತು ಅರೇಬಿಕ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಆವರು 2021 ರಲ್ಲಿ ಆಂಧ್ರಪ್ರದೇಶದ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು 2004 ರಲ್ಲಿ ಕ್ಯಾಲಿಕಟ್ ವಿಶ್ವವಿದ್ಯಾನಿಲಯದಿಂದ ‘ಇಸ್ಲಾಮಿಕ್ ಕರ್ಮಶಾಸ್ತ್ರಕ್ಕೆ ಅರೇಬಿಕ್ನಲ್ಲಿ ಕೇರಳದ ವಿದ್ವಾಂಸರ ಕೊಡುಗೆ’ ಎಂಬ ವಿಷಯದ ಕುರಿತು ತಮ್ಮ ಪಿಎಚ್‌ಡಿ ಪಡೆದರು.

ಅವರು ಈಜಿಪ್ಟ್ ನ ಅಲ್ ಅಝ್ ಹರ್ ವಿಶ್ವವಿದ್ಯಾಲಯ ಮತ್ತು ದೆಹಲಿಯ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಿಂದ ಅರೇಬಿಕ್ ಮತ್ತು ಉರ್ದುವಿನಲ್ಲಿ ವಿವಿಧ ಅಲ್ಪಾವಧಿಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದಾರೆ.

ಅವರು ಪ್ರಮುಖ ವಿದ್ವಾಂಸರೂ, ಸೂಫಿಯವರೂ ಆಗಿದ್ದ ಸಿ.ಎಸ್.ಮೊಯ್ದೀನ್ ಕುಟ್ಟಿ ಮುಸ್ಲಿಯಾರ್ ಅವರ ಪುತ್ರ ಸಿ.ಎಸ್.ಮುಹಮ್ಮದ್ ಮುಸ್ಲಿಯಾರ್, ಕಾಡುಂಗಲ್ಲೂರು ವಾಚಪುರಂನಲ್ಲಿರುವ ಆಮಿನಾ ದಂಪತಿಯ ಪುತ್ರ. ಪತ್ನಿ ತಾಮರಶ್ಮೀರಿ ಅಂಡೋಣ ಸ್ವದೇಶಿ ಝೀನತ್‌. ಮಕ್ಕಳು: ಅಮೀನ್ ಮುಬಾರಕ್ ಸಖಾಫಿ, ಹುಸ್ನಾ ಮುಬಾರಕ್, ಅದೀಬ್‌ ಮುಬಾರಕ್. ಸೋದರಳಿಯರು: ಅಬ್ದುರ್ರವೂಫ್ ಅಝ್ಹರಿ ಮತ್ತು ಜೆಬಿನ್.

error: Content is protected !! Not allowed copy content from janadhvani.com