ಕೋಝಿಕ್ಕೋಡ್ : ಸೌದಿ ಜೈಲಿನಲ್ಲಿರುವ ಅಬ್ದುರ್ ರಹೀಮ್ ಬಿಡುಗಡೆ ಕುರಿತ ತೀರ್ಪು ಮತ್ತೆ ಮುಂದೂಡಲಾಗಿದೆ. ಪ್ರಕರಣದ ಪರಿಗಣನೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ರಹೀಮ್ ಕಾನೂನು ನೆರವು ಸಮಿತಿಯ ಅಧಿಕಾರಿಗಳು ತಿಳಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಕೋರಿದ ದಾಖಲೆಗಳನ್ನು ಇಂದು ಹಾಜರುಪಡಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ತೀರ್ಪನ್ನು ಮುಂದೂಡುವಂತಾಯ್ತು. ತಾಂತ್ರಿಕ ಕಾರಣಗಳಿಂದ ಪ್ರಕರಣವನ್ನು ಪರಿಗಣಿಸುವ ದಿನಾಂಕವನ್ನು ಮುಂದೂಡಲಾಗಿದೆ ಎಂದೂ ಕಾನೂನು ನೆರವು ಸಮಿತಿ ತಿಳಿಸಿದೆ.
ಕಳೆದ ಸಿಟ್ಟಿಂಗ್ ನಲ್ಲಿ ಮನವಿ ಮಾಡಿದಂತೆ ಕ್ರಮ ಕೈಗೊಳ್ಳಲಾಗಿದೆ. ಇಂದು ವಾದ-ಪ್ರತಿವಾದಗಳು ನಡೆದ ನಂತರ ತೀರ್ಪನ್ನು ಮುಂದೂಡಲಾಯಿತು. ಇದು ತಾಂತ್ರಿಕವಾಗಿ ಸಂಭವಿಸುವುದಾಗಿದೆ. ಮುಂದಿನ ಸಿಟ್ಟಿಂಗ್ ನಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುವ ವಿಶ್ವಾಸವಿದೆ. ನ್ಯಾಯಾಲಯದ ಕಡತದಲ್ಲಿ ರಹೀಮ್ ಪರ ವಕೀಲರ ವಾದವನ್ನು ಅಂಗೀಕರಿಸಲಾಗಿದೆ. ಸದ್ಯ ಹತಾಶರಾಗುವ ಅಗತ್ಯವಿಲ್ಲ ಎಂದು ಕಾನೂನು ನೆರವು ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.