ಮಾಣಿ ದಾರುಲ್ ಇರ್ಶಾದ್ ಅಧೀನದ ಕೆಜಿಎನ್ ದಅ್‌ವಾ ಕಾಲೇಜ್ ವಿದ್ಯಾರ್ಥಿ ಸಂಘಟನೆ ಮುಈನುಸ್ಸುನ್ನಃ ನೀಡುವ ‘ಫಿದಾಕ್ ಅವಾರ್ಡ್ -24’ ಯುವ ವಿದ್ವಾಂಸ, ಸುನ್ನಿ ಬರಹಗಾರ ಎಂ ಇಸ್ಮಾಈಲ್ ಸಅದಿ ಅಲ್ ಅಫ್ಳಲಿಯವರಿಗೆ ಡಿ.9 ರಂದು ನೀಡಲಾಗುವುದು, ಪ್ರಶಸ್ತಿಯು 25,000₹ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ ಎಂದು ಮುಈನುಸ್ಸುನ್ನ ಸಂಘಟನೆಯ ಪ್ರಕಟನೆ ತಿಳಿಸಿದೆ.
ಇಫಾದ ಎಂಬ ದೈನಂದಿನ ಧ್ವನಿಪ್ರವಚನ ದ ಮೂಲಕ ಮತ್ತು ಅರಬಿ ಭಾಷೆಯಲ್ಲಿರುವ ಬುರ್ದಾ ಎಂಬ ಪ್ರವಾದಿ ಕೀರ್ತನಕಾವ್ಯದ ಕನ್ನಡ ಭಾವಾನುವಾದ ಸೇರಿದಂತೆ 47 ಕೃತಿಗಳನ್ನು ಬರೆಯುವ ಮೂಲಕ
ಪ್ರವಾದಿ(ಸ)ರ ನಡೆನುಡಿಗಳ ಜ್ಞಾನ ಪ್ರಸಾರ ಮಾಡಿರುವ ಸಾಧನೆಯನ್ನು ಗುರುತಿಸಿ ಮಾಚಾರ್ ಸಅದಿಯವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಸಂಘಟನೆಯ ಪ್ರಕಟನೆ ಹೇಳಿದೆ.
ಕೆಜಿಎನ್ ದಅ್‌ವಾ ಕಾಲೇಜು ಪ್ರಾಂಶುಪಾಲ ಸಯ್ಯಿದ್ ಸ್ವಲಾಹುದ್ದೀನ್ ಜಮಲುಲ್ಲೈಲಿ ಅಲ್ ಅದನಿ, ಖ್ಯಾತ ಬರಹಗಾರ ಎಸ್ ಪಿ ಹಂಝ ಸಖಾಫಿ, ಉಪನ್ಯಾಸಕ ಎ.ಕೆ.ನಂದಾವರವನ್ನೊಳಗೊಂಡ ಫಿದಾಕ್ ಪ್ರಶಸ್ತಿ ಆಯ್ಕೆ ಸಮಿತಿಯು ಮಾಚಾರ್ ಸಅದಿಯವರನ್ನು ಪ್ರಶಸ್ತಿಗೆ ಅಂತಿಮಗೊಳಿಸಿದೆ.
ಡಿ.9 ರಂದು ನಡೆಯುವ ಕೆಜಿಎನ್ ಕಾಲೇಜು ವಾರ್ಷಿಕೋತ್ಸವ-ಫಿದಾಕ್ ಸಮಾರೋಪದಲ್ಲಿ ಕರ್ನಾಟಕ ಸುನ್ನಿ ಜಂಇಯ್ಯತುಲ್ ಉಲಮಾದ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿಯವರು ಮಾಚಾರ್ ಸಅದಿಯವರಿಗೆ ಪ್ರಶಸ್ತಿ ಪ್ರದಾನ ಮಾಡುವರು.
ಮೂಲತಃ ಬೆಳ್ತಂಗಡಿ ತಾಲೂಕಿನ ಬೆಳಾಲ್ ಮಾಚಾರ್ ನಿವಾಸಿಯಾಗಿರುವ ಇಸ್ಮಾಈಲ್ ಸಅದಿಯವರು ಮಾಣಿ ದಾರುಲ್ ಇರ್ಶಾದ್ ಹಾಗೂ ಕಾಸರಗೋಡ್ ಜಾಮಿಅ ಸಅದಿಯ್ಯಾದಲ್ಲಿ ಧಾರ್ಮಿಕ ಶಿಕ್ಷಣ ಪಡೆದು ಧಾರ್ಮಿಕ ಪದವಿ ಪಡೆದು ಧಾರ್ಮಿಕ ಕ್ಷೇತ್ರದಲ್ಲಿ ಸೇವನಿರತರಾಗಿದ್ದಾರೆ. ಪ್ರಸ್ತುತ ಚಿಕ್ಕಮಗಳೂರು ಉಪ್ಪಳ್ಳಿ ಶಾದುಲ್ ಮಸೀದಿಯಲ್ಲಿ ಮುದರ್ರಿಸ್ ಆಗಿ ಸೇವೆ ಸಲ್ಲಿಸುತ್ತಿರುವ ಸಅದಿಯವರು ಉಲಮಾ ಸಂಘಟನೆಯಲ್ಲಿ ತೊಡಗಿಸುವುದರೊಂದಿಗೆ ಸುಮಾರು 47 ಕನ್ನಡದಲ್ಲಿ ಬರೆದಿದ್ದಾರೆ.
ಹಲವು ಅರಬಿಕ್ ಗ್ರಂಥಗಳನ್ನೂ ರಚಿಸಿರುವ ಅವರು ದೈನಂದಿನ ಇಫಾದ ಹದೀಸ್ ಧ್ವನಿಪ್ರವಚನಕ್ಕೆ ಹೆಸರುವಾಸಿಯಾಗಿದ್ದಾರೆ. 3177 ದಿನಗಳಿಂದ ನಿರಂತರವಾಗಿ ಇಫಾದ ಧ್ವನಿಪ್ರವಚನವು ವಾಟ್ಸಪ್, ಮೊಬೈಲ್ ಆ್ಯಪ್ ಮೂಲಕ ಪ್ರಸರಣದಲ್ಲಿದೆ.
*ಮಾಚಾರ್ ಸಅದಿಯವರ ಕನ್ನಡ ಕೃತಿಗಳು:*
1. ಪ್ರವಾದಿ ಪ್ರೇಮದ ಹೃದಯಾವಿಷ್ಕಾರ
2. ಸಂಪೂರ್ಣ ಮನುಷ್ಯ
3. ಕರ್ಮಶಾಸ್ತ್ರ ಅಧ್ಯಯನ (ಭಾಗ – 1)
4. ಮಹಾವಿಸ್ಮಯ
5. ಉಮ್ರಾ ಗೈಡ್
6. ಹಜ್ ‘ಗೈಡ್
7. ಪ್ರೇಮಾನುಭವ
8. ಪ್ರೀತಿ ಎಂದರೆ ಇದೇನಾ?
9. ಅದ್ಭುತ ಪ್ರಪಂಚ
10. ಈ ಸುಖ ಇನ್ನೆಲ್ಲಿ ?
11. ಸಮಸ್ತ ವಿಭಜನೆಯ ಹಿನ್ನೆಲೆ
12. ಖುರ್‌ಆನ್ ನಿತ್ಯ ವಿಸ್ಮಯ
13. ಉಳ್’ ಹಿಯ್ಯತ್ ಪ್ರಶೋತ್ತರಗಳು
14. ರಮಳಾನಿನ ಕರ್ಮಶಾಸ್ತ್ರ
15. ಫಿತ್ರ್ ಝಕಾತ್
16. ಮೌಲಿದಾಚರಣೆ
17. ಕನಸು ಕಂಡವರ ಕಥೆಗಳು
18. ಇಮಾಂ ಅಬೂಹನೀಫಾ (ರ)
19. ಪ್ರವಾಸಿ ಗೈಡ್
20. ಮೂರು ಇಮಾಮರುಗಳು
21. ಯಾತ್ರಾ ವಿಸ್ಮಯ
22. ನಲ್ಮೆಯ ಕಂದನಿಗೆ
23. ಏಕೆ? ಹೇಗೆ? ಮುವತ್ತು ಪ್ರಶ್ನೆಗಳು
24. ಅಲ್-ಹಜ್ಜುಲ್ ಮಬ್ರೂರ್
25. ಇಸ್ಲಾಮಿನ ಸೌಂದರ್ಯ
26. ನಾಳೆಯ ಖಾಝಿ ನಿಮ್ಮ ಮನೆಯಲ್ಲಿ
27. ಪ್ರೇಮಕಾವ್ಯಗಳು
28. ಜಮಾಅತೆ ಇಸ್ಲಾಮಿ (ಅನುವಾದ)
29. ಪಂಚ ಮಹಾ ಔಲಿಯಾ ಶ್ರೇಷ್ಠರು (ಅನುವಾದ)
30. ಸ್ಪೈನ್ ಭೂಮಿಯಲ್ಲೊಂದು ಪಯಣ (ಅನುವಾದ)
31. ಖಸೀದತುಲ್ ಬುರ್ದಾ ಭಾಗ – 1
32. ಖಸೀದತುಲ್ ಬುರ್ದಾ ಭಾಗ – 2
33. ಮುಹಮ್ಮದಿಯ್ಯ ಸೌಂದರ್ಯ ಅಧ್ಯಯನ (ಇಫಾದ ಸರಣಿ)
34. ಅಂತ್ಯ ದಿನದ ಲಕ್ಷಣಗಳು (ಇಫಾದ ಸರಣಿ)
35. ದೌರತುಲ್ ಅರ್ಬಈನ್ (ಲಿಪ್ಯಂತರ)
36. ಮದೀನಾ ಮಸ್ಜಿದ್
37. ಕೊರೋನಾ ಕಲಿಸಿದ ಪಾಠ (ಇಫಾದ ಸರಣಿ)
38. ಪ್ರವಾದಿ ﷺ ಪತ್ನಿ ಹಾಗೂ ಮಕ್ಕಳು (ಇಫಾದ ಸರಣಿ)
39. ಟೈಮಿಗೆ ಟೈಮಿಲ್ಲ
40. ಉಮ್ರಾನುಭವ
41. ಮದೀನಾದ ಹಾದಿ
42. A Route To Madeena (English)
43. ಉಮ್ರಾನುಭವ (English Translate)
44. ಮಖ್ದೂಮರಿಂದ ಕಾಂತಪುರಂ ತನಕ
45. ಅಜ್ಮೀರ್ ಖಾಜಾ
46. ಮಳೆಯಲ್ಲೊಂದು ಉಮ್ರಾ