ಮಜೂರು, ನ.29; ಬದ್ರಿಯ ಜುಮುಅ ಮಸ್ಜಿದ್ ಇದರ ಅಧೀನದಲ್ಲಿ ಕಳೆದ 25 ಸಂವತ್ಸರಗಳಿಂದ ಕಾರ್ಯಾಚರಿಸುತ್ತಾ ಊರಿನ ಹೆಮ್ಮೆಯ ಸಂಸ್ಥೆ ಬೆಳೆದು ಅದೆಷ್ಟೋ ಪ್ರತಿಭಾನ್ವಿತ ಪ್ರತಿಭೆಗಳನ್ನು ಈ ನಾಡಿಗೆ ಸಮರ್ಪಿಸಿದ ಸಿರಾಜುಲ್ ಹುದಾ ದಫ್ ಸಮಿತಿ ಮಲ್ಲಾರು ಮಜೂರು ಇದರ ಸಿಲ್ವರ್ ಜ್ಯುಬಿಲಿ ಸಂಭ್ರಮ ಪ್ರಯುಕ್ತ ದ್ವಿ ದಿನಗಳ ಕಾರ್ಯಕ್ರಮ ನವೆಂಬರ್ 29 & 30 ದಿನಾಂಕಗಳಲ್ಲಿ ಬದ್ರಿಯ ಜುಮುಅ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.
ನವೆಂಬರ್ 29 ಶುಕ್ರವಾರ ಜುಮುಅ ಬಳಿಕ BJM ಅಧ್ಯಕ್ಷ ಜನಾಬ್ ಶೌಕತ್ ಅಲಿ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಿದ್ದಾರೆ. ಮಗ್ರಿಬ್ ನಮಾಜಿನ ಬಳಿಕ 5ನೇ ವರ್ಷದ ದಫ್ ರಾತಿಬ್ ಮಜ್ಲಿಸ್ ಮಾಜಿ ದಫ್ ಉಸ್ತಾದ್ ಇಬ್ರಾಹಿಂ ಮುಸ್ಲಿಯಾರ್ ದುಆಃ ನೆರವೇರಿಸಲಿದ್ದು, ಕೊಂಬಗುಡ್ಡೆ ಮಸ್ಜಿದ್ & ಮದ್ರಸ ಇಮಾಮ್ ಮುಹಮ್ಮದ್ ತಾಜುದ್ದೀನ್ ಸಖಾಫಿ ಉದ್ಘಾಟನೆಗೈಯ್ಯಲಿದ್ದಾರೆ.
ಪಿ.ಪಿ. ಬಶೀರ್ ಉಸ್ತಾದ್ ಮಜೂರು ದಫ್ ರಾತಿಬ್ ನೇತೃತ್ವ ನೀಡಲಿದ್ದು, ಸೂಫಿವರ್ಯ ಅಲ್ಹಾಜ್ ಮುಹಮ್ಮದ್ ಬಾಖವಿ ಪೂಂಜಾಲ್’ಕಟ್ಟೆ ಉಸ್ತಾದ್ ಸಮಾರೋಪ ದುಆಃ ಆಶೀರ್ವಚನ ನೀಡಲಿದ್ದಾರೆ.
ಬದ್ರಿಯ ಜುಮುಅ ಮಸ್ಜಿದ್ ಅಧ್ಯಕ್ಷ ಶೌಕತ್ ಅಲಿ, ಬದ್ರಿಯ ಜುಮುಅ ಮಸ್ಜಿದ್ ಖತೀಬರಾದ ಎಂ.ಕೆ. ಅಬ್ದುರ್ರಶೀದ್ ಸಖಾಫಿ ಅಲ್-ಕಾಮಿಲ್, ಉಪ ಖತೀಬ್ ಅಬೂಬಕ್ಕರ್ ಸಿದ್ದೀಕ್ ಸಅದಿ, ಚಂದ್ರನಗರ ಖತೀಬ್ ಮುಹಮ್ಮದ್ ಮುಸ್ತಫ ಸಖಾಫಿ, ಕೊಂಬಗುಡ್ಡೆ ಮದ್ರಸ ಸದರ್ ಮುಅಲ್ಲಿಮ್ ಅಬೂಬಕರ್ ಸಅದಿ, ದೊಡ್ಡಣಗುಡ್ಡೆ ಮದ್ರಸ ಸದರ್ ಮುಅಲ್ಲಿಮ್ ಅಬ್ದುರ್ರಹ್ಮಾನ್ ಸಅದಿ ಮಜೂರು ಹಾಗೂ ಇನ್ನಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಈ ಕಾರ್ಯಕ್ರಮದಲ್ಲಿ ತಖ್ವೀಯತುಲ್ ಇಸ್ಲಾಂ ಯಂಗ್’ಮೆನ್ಸ್ ಅಸೋಸಿಯೇಷನ್ ವತಿಯಿಂದ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಗುರುತಿಸುವಿಕೆ ನಡೆಯಲಿದೆ.
ನವೆಂಬರ್ 30 ಮಗ್ರಿಬ್ ನಮಾಜಿನ ಬಳಿಕ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾಕೂಟ ನಡೆಯಲಿದ್ದು, ಸಿರಾಜುಲ್ ಹುದಾ ದಫ್ ಸಮಿತಿ ಅಧ್ಯಕ್ಷ ಅಶ್ರಫ್ ಮೂಸ ಮಜೂರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕಬೀರ್ ಸ್ವಾಗತಿಸಲಿದ್ದು, ಬದ್ರಿಯ ಜುಮುಅ ಮಸ್ಜಿದ್ ಖತೀಬರಾದ ಅಲ್ಹಾಜ್ ಎಂ.ಕೆ. ಅಬ್ದುರ್ರಶೀದ್ ಸಖಾಫಿ ಅಲ್-ಕಾಮಿಲ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಬದ್ರಿಯ ಜುಮುಅ ಮಸ್ಜಿದ್ ಅಧ್ಯಕ್ಷ ಶೌಕತ್ ಅಲಿ, ಉಪಾಧ್ಯಕ್ಷ ಸಾದಿಕ್ ಕೆ.ಪಿ., ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಇಬ್ರಾಹಿಂ ಮಲ್ಲಾರು, ಕೋಶಾಧಿಕಾರಿ ನೆಹಮತ್ ಅಲಿ ಅಚ್ಚಲ್, TIYA ಅಧ್ಯಕ್ಷ ಅಬ್ದುಲ್ ರಝಾಕ್ ಅಭಿಮಾನ್, ಸ್ವಲಾತ್ ಸಮಿತಿ ಅಧ್ಯಕ್ಷ ಉಮರ್ ಪೊಲಿಪು, ದಫ್ ಸಮಿತಿ ಕೋಶಾಧಿಕಾರಿ ಮುಹಮ್ಮದ್ ಮಜೂರು ಹಾಗೂ ಇನ್ನಿತರ ಗಣ್ಯರು, ದಫ್ ಸಮಿತಿ ಅನಿವಾಸಿ ಭಾರತೀಯ ಹಳೇ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಇತ್ತೀಚೆಗೆ ಮುಅಲ್ಲಿಮ್ ಅವಾರ್ಡ್ ಸ್ವೀಕರಿಸಿದ ಬದ್ರಿಯ ಜುಮುಅ ಮಸ್ಜಿದ್ ಖತೀಬರಾದ ಅಲ್ಹಾಜ್ ಎಂ.ಕೆ. ಅಬ್ದುರ್ರಶೀದ್ ಸಖಾಫಿ ಅಲ್-ಕಾಮಿಲ್, ಉದ್ಯಮಿಗಳಾದ ರಜಬ್ ಪರ್ಕಳ, ಮುಹಮ್ಮದ್ ಅಶ್ರಫ್, ಕೆ. ಅಶ್ರಫ್ ನೇಜಾರು, ಶ್ರೀ ಗೌರವ್ ಜಮಾಅತ್ ಮಾಜಿ ಕಾರ್ಯದರ್ಶಿ ಮೊಹಿದ್ದೀನ್ ಹಾಜಿ, ಸಮಾಜ ಸೇವಕರಾದ ಶರ್ಪುದ್ದೀನ್ ಶೇಖ್ ಮಜೂರು, ಡಾ. ಫಾರೂಕ್ ಚಂದ್ರನಗರ, ಸುಲೈಮಾನ್ ಚಂದ್ರನಗರ, ಉಮರ್ ಪೊಲಿಪು ಇವರನ್ನು ಗೌರವಿಸಿ ಸನ್ಮಾನಿಸಲಾಗುವುದು.
ಅದೇ ರೀತಿ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧಾಕೂಟ ನಡೆಯಲಿದೆ ಎಂದು ದಫ್ ಸಮಿತಿ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕಬೀರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.