janadhvani

Kannada Online News Paper

ಡಿಕೆಯಸ್ಸಿ ಯ ಶೈಕ್ಷಣಿಕ ಕ್ರಾಂತಿ ಶ್ಲಾಘನೀಯ, ಮಹಾ ವಿದ್ಯಾಲಯವಾಗಿ ಉನ್ನತಿಗೇರಲಿ- ನಸೀರ್ ಅಹ್ಮದ್

ದಮ್ಮಾಮ್: ಡಿಕೆಯಸ್ಸಿ ಯ ಶೈಕ್ಷಣಿಕ ಕ್ರಾಂತಿ ಶ್ಲಾಘನೀಯ, ಮಹಾ ವಿದ್ಯಾಲಯವಾಗಿ ಉನ್ನತಿಗೇರಲಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ವಿಧಾನಪರಿಷತ್ ಸದಸ್ಯರಾದ ಜನಾಬ್ ನಸೀರ್ ಅಹ್ಮದ್ ಹೇಳಿದರು.

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ 30ನೇ ಸಂಸ್ಥಾಪನಾ ವರ್ಷದ ಅಂಗವಾಗಿ, ಡಿಕೆಎಸ್‌ಸಿ ದಮ್ಮಾಮ್ ವಲಯದ ಅಧೀನದಲ್ಲಿ ಮರ್ಹೂಂ ಮುಮ್ತಾಝ್ ಅಲಿ ವೇದಿಕೆಯಲ್ಲಿ ಆಯೋಜಿಸಿದ ಬೃಹತ್ ಕುಟುಂಬ ಸಮ್ಮಿಲನದಲ್ಲಿ ಅವರು ಸಮಾರಂಭವನ್ನು ಉದ್ಘಾಟಿಸುತ್ತಾ ಮಾತನಾಡುತ್ತಿದ್ದರು.

ಡಿಕೆಯಸ್ಸಿಯು ಕಳೆದ 30 ವರ್ಷಗಳಿಂದ ಸಮುದಾಯದ ಮಕ್ಕಳಿಗೆ ಲೌಕಿಕ ಹಾಗೂ ಧಾರ್ಮಿಕ ವಿದ್ಯಾಭ್ಯಾಸ ಗೈಯ್ಯುತ್ತಿರುವ ಬೃಹತ್ ಸಂಘಟನೆಯಾಗಿ ಕಾರ್ಯಾಚರಿಸುತ್ತಿದೆ. ಡಿಕೆಯಸ್ಸಿಯ ಮುಂದಿನ ಶೈಕ್ಷಣಿಕ ಯೋಜನೆಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸಲು ಸದಾ ಸಿಧ್ಧ ಎಂದು ನುಡಿದರು.
ಪ್ರೊಜೆಕ್ಟರ್ ಮೂಲಕ ಮರ್ಕಝ್ ನ ಕಾರ್ಯಕಲಾಪಗಳನ್ನು ಬಿತ್ತರಿಸಲಾಯಿತು.

ಉಸ್ತಾದ್ ಸಿರಾಜುದ್ದೀನ್ ಖಾಸಿಮಿಯವರ ದುಆದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿಶೇಷ ಅತಿಥಿಗಳಾಗಿ ಆಗಮಿಸಿದ್ದ
ಎಲೈಡ್ ಸೈನ್ಸ್ ಆಫ್ ಹೆಲ್ತ್ ಚೆಯರ್ಮ್ಯಾನ್ ಡಾ! ಯು.ಟಿ. ಇಫ್ತಿಖಾರ್ ಫರೀದ್ ಮಾತನಾಡುತ್ತಾ ಮೂರು ದಶಕಗಳಿಂದ ಉಡುಪಿ ಜಿಲ್ಲೆಯ ಮೂಳೂರ್ ನಲ್ಲಿ ಮರ್ಕಝ್ ತಅಲಿಮಿಲ್ ಇಹ್ಸಾನ್ ಎಂಬ ಸಂಸ್ಥೆಯಲ್ಲಿ ಯತೀಂ, ಮಿಸ್ಕೀನ್, ಹಿಫ್ಳ್,ಉರ್ದು ವಿಭಾಗ, ಮದ್ರಸ, ಹಾಗೂ ಇಹ್ಸಾನ್ ಕಾಲೇಜ್ ನಲ್ಲಿ ಪ್ಲೇ ಸ್ಕೂಲ್ ನಿಂದ ಡಿಗ್ರಿ ತನಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಸಂತೋಷದ ವಿಷಯ. ನಮ್ಮ ಸಮುದಾಯದ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಗೈಯ್ಯುವರೇ ನಮ್ಮಿಂದಾಗುವ ಸರ್ವ ಸಹಾಯ ಸಹಕಾರಗಳನ್ನು ನೀಡಲು ಸದಾ ನಿಮ್ಮೊಂದಿಗಿದ್ದೇನೆ ಎಂದು ಹುರಿದುಂಬಿಸಿದರು.

ಖ್ಯಾತ ವಾಗ್ಮಿ ಹಾಫಿಳ್ ಸಿರಾಜುದ್ದೀನ್ ಖಾಸಿಮಿ ಮುಖ್ಯ ಪ್ರಭಾಷಣಗೈದರು.
ಡಿಕೆಯಸ್ಸಿ ಫ್ಯಾಮಿಲಿ ಮುಲಾಖಾತ್ ಚೆಯರ್ಮ್ಯಾನ್ ಅಬ್ದುಲ್ ಅಝೀಝ್ ಮೂಳೂರು ರವರ ಅಧ್ಯಕ್ಷತೆಯಲ್ಲಿ ಅಬ್ದುಲ್ ಹಮೀದ್ ಉಳ್ಳಾಲ ಸ್ವಾಗತಿಸಿದರು. ಮುಲಾಖಾತ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಲೀ ಅಲ್ ಮುಝೈನ್ ಕಾರ್ಯಕ್ರಮ ನಿರೂಪಿಸಿದರು. ಇಸ್ಮಾಯೀಲ್ ಕಾಟಿಪಳ್ಳ ಖಿರಾಅತ್ ಪಠಿಸಿದರು.
ಮುಖ್ಯ ಅತಿಥಿಗಳಾಗಿ ಹಾಜಿ ಝಕರಿಯ್ಯಾ ಜೋಕಟ್ಟೆ (ಅಲ್ ಮುಝೈನ್), ಅಶ್ರಫ್ ಕರ್ನಿರೆ (ಎಕ್ಸ್‌ಪರ್ಟೈಸ್), ಮುಶ್ತಾಖ್ ಅಹ್ಮದ್ ಬೆಂಗಳೂರು (ಪತ್ಹೇ ಅಲ್ ಜುಬೈಲ್ ) ಶಕೀಲ್ (ಮಕಾವಿ) ಇಸ್ಮಾಯೀಲ್ ಮುಂಬೈ (ಇಸ್ಮಾಯೀಲ್ ಇಬ್ರಾಹೀಂ ಪಾರ್ಟ್ನರ್ಸ್) ನಝೀರ್ ಹುಸೈನ್ (ಅಲ್ ಫಲಾಹ್), ಮುಹಮ್ಮದ್ ಕಮ್ಮರಡಿ,ಇಮ್ತಿಯಾಝ್ ಉಳ್ಳಾಲ( ಎ ಎಸ್ ಕ್ಯೂ ಗ್ರೂಪ್),ಮುಹಮ್ಮದ್ ಕುಕ್ಕುವಳ್ಳಿ ( ಮಾಜಿ ಅಧ್ಯಕ್ಷ ಡಿಕೆಯಸ್ಸಿ ಬುರೈದ ಘಟಕ) ಶರೀಫ್ ಬಜ್ಪೆ ( ಮಝೂನ್ ಅಲ್ ಅಲೀ) ಮೊದಲಾದ ಗಣ್ಯರು
ಉಪಸ್ಥಿತರಿದ್ದರು.

ಗಣ್ಯರಿಗೆ ಮೊಮೆಂಟೊ ಮತ್ತು ಶಾಲು ಹೊದಿಸಿ ಆದರಪೂರ್ವಕ ಸನ್ಮಾನಿಸಲಾಯಿತು.
ಡಿಕೆಯಸ್ಸಿ ಕೇಂದ್ರ ಸಮಿತಿ ಅಧ್ಯಕ್ಷ ರಾದ ಅಸ್ಸಯ್ಯಿದ್ ಕೆ.ಎಸ್. ಆಟ್ಟಕ್ಕೋಯ ತಂಙಳ್ ಕುಂಬೋಲ್, ಜಿಲ್ಲಾ ಸಮಿತಿ ಅಧ್ಯಕ್ಷ ಸಯ್ಯಿದ್ ಅಹ್ಮದ್ ಮುಖ್ತಾರ್ ತಂಙಳ್ ದುಆ ಆಶೀರ್ವದಿಸಿದರು. ಕಾರ್ಯಾಧ್ಯಕ್ಷ ಸೀದಿ ಹಾಜಿ ಬಹ್ರೈನ್, ದಮ್ಮಾಂ ವಲಯ ಉಸ್ತುವಾರಿ ರಫೀಖ್ ಎರ್ಮಾಳ್ ಜಿದ್ದಾ, ಫೌಂಡೇಶನ್ ಡೇ ನಿರ್ವಾಹಕ ಇಬ್ರಾಹೀಂ ಕಣ್ಣಂಗಾರ್, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಮಜೀದ್ ಕಣ್ಣಂಗಾರ್, ಡಿಕೆಯಸ್ಸಿ ಜಿಸಿಸಿ ಸಮಿತಿಗಳು ಶುಭ ಹಾರೈಸಿದರು.

ಡಿಕೆಯಸ್ಸಿ ಕೇಂದ್ರ ಸಮಿತಿ ಕೋಶಾಧಿಕಾರಿ ದಾವೂದ್ ಕಜೆಮಾರ್, ಪ್ರಧಾನ ಕಾರ್ಯ ದರ್ಶಿ ಅಬ್ದುಲ್ ಅಝೀಝ್ ಆತೂರು, ಬುರೈದ ಘಟಕ ಅಧ್ಯಕ್ಷ ಅಬ್ದುಲ್ ಖಾದರ್ ಕಣ್ಣಂಗಾರ್, ಫಝಲ್ ಸುರತ್ಕಲ್ ಬಹ್ರೈನ್, ಕುವೈಟ್ ರಾಷ್ಟ್ರೀಯ ಸಮಿತಿಯ ಅಬ್ದುಲ್ಲತೀಫ್ ಮುಲರಪಟ್ನ, ಇಮ್ತಿಯಾಝ್ ಸೂರಿಂಜೆ, ಡಿಕೆಯಸ್ಸಿ ವಿಷನ್ 30 ಚೆಯರ್ಮ್ಯಾನ್ ಹಾತಿಂ ಕೂಳೂರು, ಕೆ.ಎಚ್. ರಫೀಖ್ ಸೂರಿಂಜೆ, ಹಫರ್ ಅಲ್ ಬಾತಿನ್ ಗೌರವಾಧ್ಯಕ್ಷ ನಜೀಂ ಮದನಿ, ಅಧ್ಯಕ್ಷ ಮುಹಮ್ಮದ್ ಮದನಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಮ್ಮುಂಜೆ,
ಅಹ್ಮದ್ ಶಾಹ್, ಅಬ್ದುಲ್ ಹಮೀದ್ ಎಡೂರು, ಅಸ್ಲಂ ಎರ್ಮಾಳ್ ، ದಮ್ಮಾಂ ವಲಯಾಧ್ಯಕ್ಷ ಅಬ್ದುಲ್ ಹಮೀದ್ ಕಾಪು, ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರೋಯಲ್, ಖಜಾಂಜಿ ಅಬ್ದುಲ್ ಕರೀಂ ಪಾಣೆಮಂಗಳೂರು, ಮುಲಾಖಾತ್ ಕೋಶಾಧಿಕಾರಿ ಉಸ್ಮಾನ್ ಹೊಸಂಗಡಿ، ಅಬೂಬಕ್ಕರ್ ಬರ್ವ ಹಾಗೂ ಜುಬೈಲ್, ಹಫರ್ ಅಲ್ ಬಾತಿನ್, ಅಲ್ ಹಸ್ಸ, ಯೂತ್ ವಿಂಗ್ ಜುಬೈಲ್, ದಮ್ಮಾಂ, ಅಲ್ ಖೋಬರ್ ,ತುಖ್ಬ ಘಟಕದ ಪದಾಧಿಕಾರಿಗಳು, ಹಿತೈಷಿಗಳು, ಇನ್ನಿತರ ಗಣ್ಯರು, ಅನಿವಾಸಿ ಉದ್ಯಮಿಗಳು ಹಾಜರಿದ್ದರು.
ಸಫ್ವಾನ್ ಕಣ್ಣಂಗಾರ್ ಮೀಡಿಯ ನಿರ್ವಹಿಸಿದರು.

ನವೆಂಬರ್ 1 ರಂದು ನಡೆದ ಮಕ್ಕಳ ಕಾರ್ಯಕ್ರಮದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ಮತ್ತು ಬಹುಮಾನ ವಿತರಿಸಲಾಯಿತು. ಫೌಂಡೇಶನ್ ಡೇ ಪ್ರಯುಕ್ತ ನಡೆಸಿದ ಜಿಸಿಸಿ ಕ್ವಿಝ್ ಸ್ಪರ್ಧೆಯ ವಿಜೇತರಿಗೆ ಟ್ರೋಫಿ ವಿತರಿಸಲಾಯಿತು.
ಪ್ರಥಮ ಡಿಕೆಯಸ್ಸಿ ಬಹ್ರೈನ್ ರಾಷ್ಟ್ರೀಯ ಸಮಿತಿ, ದ್ವಿತೀಯ ರಿಯಾದ್ ವಲಯ, ತೃತೀಯ ದಮ್ಮಾಂ ವಲಯ ತನ್ನದಾಗಿರಿಸಿಕೊಂಡಿತು ಅದಲ್ಲದೇ ಸ್ಟೇಟಸ್ ನಲ್ಲಿ ಸ್ಥಾಪಕ ದಿನದ ಪೋಸ್ಟರ್ ಹಾಕಿ ಹೆಚ್ಚು ಮಂದಿ ವೀಕ್ಷಿಸಿದ ಪ್ರಯುಕ್ತ ವಿಶೇಷ ಬಹುಮಾನಗಳನ್ನು ನೀಡಲಾಯಿತು. ಪ್ರಥಮ ಅಬ್ದುಲ್ ಅಝೀಝ್ ಬಜ್ಪೆ, ರಿಯಾದ್,
ದ್ವಿತೀಯ ಅಬೂಬಕ್ಕರ್ ಕಾರಾಜೆ ( ಪಾಣೆ ಮಂಗಳೂರು ಘಟಕ)
ತೃತೀಯ ಯೂಸುಫ್ ಮಂಚಕಲ್ ಕುವೈಟ್ ರವರಿಗೆ ನೀಡಲಾಯಿತು.

ಸ್ವಯಂ ಸೇವಕರ ಜವಾಬ್ದಾರಿ
ಯನ್ನು ಸಮೀರ್ ಪಲಿಮಾರ್, ಊಟದ ವ್ಯವಸ್ಥಾಪಕರಾಗಿ ಅಶ್ರಫ್ ನಾಳ ರವರ ಟೀಂ ಬಹಳ ಮುತುವರ್ಜಿಯಿಂದ ವಹಿಸಿದ್ದರು. ವಾಹನಗಳ ಸಂಚಾರ ವ್ಯವಸ್ಥೆ ಅಬೂಬಕ್ಕರ್ ಅಜಿಲಮೊಗರು ಬಳಗ, ಮೊಮೆಂಟೊ ಮತ್ತು ಆಹ್ವಾನ ಪತ್ರಿಕೆ ಮುದ್ರಣ ಕಾರ್ಯವನ್ನು ಮುಹಮ್ಮದ್ ಹಸನ್ ಮೂಡುತೋಟ ಮತ್ತು ಸುಲೈಮಾನ್ ಸೂರಿಂಜೆ, ಪಿ.ಎಚ್. ಇಸ್ಮಾಯೀಲ್ ಉಸ್ತಾದ್, ಸಾಮಿತ್ ಮತ್ತು ಜುಬೈಲ್ ಯೂತ್ ವಿಂಗ್ ಬಳಗ, ಹಸನ್ ಬಾವ ಕುಪ್ಪೆಪದವು, ಅಬ್ದುಲ್ ಅಝೀಝ್ ಮೂಡುತೋಟ, ಅಶ್ರಫ್ ಉಪ್ಪಳ್ಳಿ, ಶಾಫಿ ರಿಝ್ವಾನ್ ಮಂಗಳೂರು, ಹನೀಫ್ ಜೆಪ್ಪು, ಸಲೀಂ ಉಕ್ಕುಡ, ಬಶೀರ್ ಅಡ್ಕಾರ್,ಅನ್ವರ್ ಪಡುಬಿದ್ರಿ, ಶೌಕತ್ ತೀರ್ಥಹಳ್ಳಿ ಬಹಳ ಮುತುವರ್ಜಿಯಿಂದ ಕಾರ್ಯನಿರ್ವಹಿಸಿದ್ದರು.
ಸ್ತೀಯರಿಗೂ ಪ್ರತ್ಯೇಕ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು.
ಉತ್ತಮ ಭೋಜನ, ಪಾನೀಯ, ಫಲಹಾರಗಳು ಲಭ್ಯವಿದ್ದು ಫ್ಯಾಮಿಲಿ ಮುಲಾಖಾತ್ 2024 ಯಶಸ್ವಿಯಾಗಿತ್ತು.

error: Content is protected !! Not allowed copy content from janadhvani.com