ಮಂಗಳೂರು: ಪ್ರಮುಖ ಧಾರ್ಮಿಕ ಕಾರ್ಯಕರ್ತ ಹಾಗೂ ಸಾಮಾಜಿಕ ಮುಂದಾಳುವಾಗಿದ್ದ ಜನಾಬ್ ಬಿ ಎಂ ಮುಮ್ತಾಝ್ ಅಲೀ ಕೃಷ್ಣಾಪುರ ಅವರ ಆಘಾತಕಾರಿ ನಿಧನಕ್ಕೆ ಕರ್ನಾಟಕ ಮುಸ್ಲಿಂ ಜಮಾಅತ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಸದಾ ಕಾಲ ಸಮಾಜಸೇವೆಯಲ್ಲಿ ತೊಡಗಿಸಿ ಕೊಂಡಿದ್ದ ಉತ್ಸಾಹಿ ಯುವ ನಾಯಕ ಮುಮ್ತಾಝ್ ಅಲೀಯವರು ಎಲ್ಲರೊಂದಿಗೂ ನಗುನಗುತ್ತಲೇ ಬೆರೆಯುವ, ಉತ್ತಮ ಕೆಲಸಗಳನ್ನು ಪ್ರೋತ್ಸಾಹಿಸುವ ಸಜ್ಜನ ವ್ಯಕ್ತಿತ್ವವನ್ನು ಹೊಂದಿದ್ದರು. ಅವರು ಯಾವತ್ತೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಇಳಿಯುವವರೆಂದು ಊಹಿಸಲೂ ಸಾಧ್ಯವಿಲ್ಲ. ಇದರ ಹಿನ್ನೆಲೆಯಲ್ಲಿ ನಿಗೂಢತೆಗಳು ಎದ್ದು ಕಾಣುತ್ತಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ತೀವ್ರ ತನಿಖೆಗೊಳಪಡಿಸಿ ಸತ್ಯವನ್ನು ಹೊರತರಬೇಕು ಎಂದು ಕರ್ನಾಟಕ ಮುಸ್ಲಿಂ ಜಮಾತ್ ಆಗ್ರಹಿಸಿದೆ.
ಮುಮ್ತಾಝ್ ಅಲೀಯವರ ನಿಧನವು ವಿಶೇಷತಃ ದ.ಕ ಜಿಲ್ಲೆಯ ಮುಸ್ಲಿಂ ಸಮುದಾಯಕ್ಕೆ ಬಲು ದೊಡ್ಡ ನಷ್ಟವಾಗಿದೆ. ಅಲ್ಲಾಹನು ಅವರಿಗೆ ಪಾಪಮೋಚನೆ ನೀಡಿ ಪಾರತ್ರಿಕ ವಿಜಯವನ್ನು ಅನುಗ್ರಹಿಸಲಿ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸೆಕ್ರಟರಿಯೇಟ್ ತುರ್ತು ಸಭೆಯಲ್ಲಿ ಪ್ರಾರ್ಥಿಸಿದೆ.
ಮೃತರ ಅಂತ್ಯಕ್ರಿಯೆಯು ಇಂದು ಅಸರ್ ನಮಾಝಿನ ಬಳಿಕ ಕೃಷ್ಣಾಪುರ ಈದ್ದಾ ಮಸೀದಿ ಯಲ್ಲಿ ನೆರವೇರಲಿದ್ದು ಎಲ್ಲಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ವಿನಂತಿಸಿದೆ.