ಮನಾಮ: ನಾವು ಅಧಿಕೃತವಾಗಿ ಸ್ವಲಾತ್ ಹೇಳುವ ಮೂಲಕ ಅಲ್ಲಾಹನ ಬಳಿ ನಮಗೆ ಸ್ಥಾನ ಲಭಿಸುತ್ತದೆ. ನಮ್ಮ ಪಾಪಗಳನ್ನು ತೊಳೆದು ಹೃದಯವನ್ನು ಶುದ್ಧೀಕರಿಸಲು ದಿನ ನಿತ್ಯ ಅತ್ಯಧಿಕವಾಗಿ ಸ್ವಲಾತ್ ಹೇಳಬೇಕು. ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಪರಿಹಾರ ಸ್ವಲಾತ್ ಮಾತ್ರವಾಗಿದೆ. ಸ್ವಲಾತ್ ನಮ್ಮ ಜೀವನದ ಉಸಿರಾಗಲಿ ಎಂದು ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಮಶ್’ಹೂರ್ ತಂಙಳ್ ತಲಕ್ಕಿರವರು ಹೇಳಿದರು.
ಮುಹಮ್ಮದ್ ನಬಿ ﷺ ಮಾನವೀಯತೆಯ ಮಾರ್ಗದರ್ಶಿ ಎಂಬ ಘೋಷ ವಾಕ್ಯದೊಂದಿಗೆ ಕೆಸಿಎಫ್ ಬಹರೈನ್ ಮನಾಮ ಸೆಕ್ಟರ್ ಆಯೋಜಿಸಿದ ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಬಹು. ಮುಹಮ್ಮದ್ ಸಫ್ವಾನ್ ಸಖಾಫಿ ಉಸ್ತಾದರು ಪ್ರವಾದಿ ﷺ ರವರ ಜೀವನ ಚರಿತ್ರೆಯನ್ನು ಮನದಟ್ಟಾಗುವಂತೆ ವಿವರಿಸುತ್ತಾ, ನಮಗೆ ಪ್ರವಾದಿ ﷺ ರು ಎಲ್ಲದಕ್ಕೂ ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಜನರ ತಪ್ಪುಗಳನ್ನು ತಂತ್ರೋಪಕವಾಗಿ ತಿದ್ದುಪಡಿಸುತ್ತಿದ್ದರು. ಅದರಿಂದ ಮನಃಪರಿವರ್ತನೆಗೊಂಡು ಅವರು ಇಸ್ಲಾಂ ಧರ್ಮ ಸ್ವೀಕರಿಸುತ್ತಿದ್ದರು. ನಮ್ಮ ಮಕ್ಕಳಿಗೆ ಪ್ರವಾದಿ ﷺ ರವರ ಜೀವನ ಚರ್ಯೆಯನ್ನು ಕಲಿಸಿ ಕೊಡಬೇಕು. ಎಲ್ಲಕ್ಕಿಂತಲೂ ಮಿಗಿಲಾಗಿ ಪ್ರವಾದಿ ﷺ ರವರನ್ನು ನಾವು ಪ್ರೀತಿಸಬೇಕು. ಆ ಪ್ರೇಮ ಹೃದಯದಲ್ಲಿ ಸ್ಥಿರವಾಗಬೇಕು. ಹಾಗಾದರೆ ಮಾತ್ರ ನಾವು ಪರಿಪೂರ್ಣ ಸತ್ಯ ವಿಶ್ವಾಸಿ ಯಾಗುವುದು ಎಂದು ಸಫ್ವಾನ್ ಸಖಾಫಿ ಉಸ್ತಾದರು ಒತ್ತಿ ಹೇಳಿದರು.
ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಯೂಸುಫ್ ಅಲ್ ಮಹ್’ಮೂದ್ ಮುಹಮ್ಮದ್ ಅಲಿ ಅಲವೀ, ಡಿಕೆಯಸ್ಸಿ ಸೆಂಟ್ರಲ್ ಕಮಿಟಿ ವರ್ಕಿಂಗ್ ಅಧ್ಯಕ್ಷ ಮುಹಮ್ಮದ್ ಸೀದಿ ಹಾಜಿ, ಆರ್’ಎಸ್’ಸಿ ಚೇರ್ಮಾನ್ ಶಿಹಾಬ್ ಉಸ್ತಾದ್ ಪರಪ್ಪ, ಲೈಫ್ ಲೈನ್ ಮಾಲಕ ತಾಜುದ್ದೀನ್ ಖಾದರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಮಶ್’ಹೂರ್ ತಂಙಲ್ ತಲಕ್ಕಿ, ಡಾ. ಯೂಸುಫ್ ಅಲ್ ಮಹ್’ಮೂದ್ ಮುಹಮ್ಮದ್ ಅಲಿ ಅಲವೀ, ಜಮಾಲುದ್ದೀನ್ ವಿಟ್ಲ, ಎಸ್, ಎಂ, ಫಾರೂಖ್, ಮುಹಮ್ಮದ್ ಸೀದಿ ಹಾಜಿ, ತಾಜುದ್ದೀನ್ ಲೈಫ್ ಲೈನ್ ರವರನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ಶಿಹಾಬ್ ಉಸ್ತಾದ್ ಹಾಗೂ ಹಾಫಿಳ್ ಫಾಳಿಲಿ ಫಯಶ್ವಿ ಅವರ ನೇತೃತ್ವದಲ್ಲಿ ಮೌಲಿದ್ ಹಾಗೂ ಬುರ್ದಾ ಮಜ್ಲಿಸ್ ನಡೆಯಿತು. ಕೆಸಿಎಫ್ ಮನಾಮ ಸೆಕ್ಟರ್ ಉಪಾಧ್ಯಕ್ಷರಾದ ಇಬ್ರಾಹೀಂ ಮುಸ್ಲಿಯಾರ್ ದುಆ ಗೈದರು. ಮುಹಮ್ಮದ್ ಶಾಮಿಲ್ ಪೈಂಬಚ್ಚಾಲ್ ಖಿರಾಅತ್ ಪಠಿಸಿದರು. ಸ್ವಾಗತ ಸಮಿತಿ ವೈಸ್ ಚೇರ್ಮಾನ್ ಕರೀಂ ಉಚ್ಚಿಲ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮನಾಮ ಸೆಕ್ಟರ್ ಅಧ್ಯಕ್ಷರಾದ ಅಹ್ಮದ್ ಮುಸ್ಲಿಯಾರ್ ಗಟ್ಟಮನೆ ಸ್ವಾಗತಿಸಿದರು. ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಹನೀಫ್ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು. ಮನಾಮ ಸೆಕ್ಟರ್ ಕೋಶಾಧಿಕಾರಿ ಸಮದ್ ಮಾದಾಪುರ ಧನ್ಯವಾದ ಸಲ್ಲಿಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿ, ಝೋನಲ್, ಸೆಕ್ಟರುಗಳ ನಾಯಕರು, ಕಾರ್ಯಕರ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
✍️ ಎಂ.ಎ. ವೇಣೂರು
@ಕೆಸಿಎಫ್ ಬಹರೈನ್