janadhvani

Kannada Online News Paper

ದೇಶದ ಅತಿ ದೊಡ್ಡ ಮೌಲಿದ್ ಸಂಗಮ ‘ಮೌಲಿದುಲ್ ಅಕ್ಬರ್’ – ನಾಳೆ ಜಾಮಿಉಲ್ ಫುತೂಹಿನಲ್ಲಿ

ರಬೀಉಲ್ ಅವ್ವಲ್ ತಿಂಗಳ ಮೊದಲ ಸೋಮವಾರದಂದು ಮರ್ಕಝ್ ಆಯೋಜಿಸುವ ಅಲ್ ಮೌಲಿದುಲ್ ಅಕ್ಬರ್ ಆಧ್ಯಾತ್ಮಿಕ ಸಂಗಮ

ನಾಲೆಡ್ಜ್ ಸಿಟಿ/ ಕಲ್ಲಿಕೋಟೆ : ಪ್ರವಾದಿವರ್ಯರ ಜನ್ಮದಿಂದ ಅನುಗ್ರಹೀತವಾದ ರಬೀಉಲ್ ಅವ್ವಲ್ ತಿಂಗಳ ಮೊದಲ ಸೋಮವಾರದಂದು ಮರ್ಕಝ್ ಆಯೋಜಿಸುವ ಅಲ್ ಮೌಲಿದುಲ್ ಅಕ್ಬರ್ ಆಧ್ಯಾತ್ಮಿಕ ಸಂಗಮ ನಾಳೆ ಬೆಳಿಗ್ಗೆ 5 ರಿಂದ ಮಧ್ಯಾಹ್ನ 12.30 ರವರೆಗೆ ಮರ್ಕಝ್ ನಾಲೆಡ್ಜ್ ಸಿಟಿಯ ಜಾಮಿಉಲ್ ಫುತೂಹಿ ಮಸೀದಿಯಲ್ಲಿ ಜರುಗಲಿದೆ.

ಸಮಸ್ತ ಉಪಾಧ್ಯಕ್ಷರೂ, ಮರ್ಕಝ್ ವಿದ್ಯಾ ಸಂಸ್ಥೆಯ ಅಧ್ಯಕ್ಷರೂ ಸಯ್ಯಿದ್ ಅಲಿ ಬಾಫಖಿ ತಂಙಳರು ಪ್ರಾರ್ಥನೆ ನೆರವೇರಿಸಲಿದ್ದಾರೆ. ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ. ಪಿ ಅಬೂಬಕ್ಕರ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಆಯೋಜಿಸಲಾಗುವ ಪ್ರಸ್ತುತ ಮೌಲಿದುಲ್ ಅಕ್ಬರ್ ಆಧ್ಯಾತ್ಮಿಕ ಸಂಗಮದಲ್ಲಿ ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷರಾದ ಇ.ಸುಲೈಮಾನ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು.

ಸಮಸ್ತ ಉಪಾಧ್ಯಕ್ಷರೂ ಮರ್ಕಝ್ ಉಪಾಧ್ಯಕ್ಷರೂ ಆಗಿರುವ ಸಯ್ಯದ್ ಕೆ. ಎಸ್ ಆಟಕೋಯ ತಂಙಳ್ ಕುಂಬೋಲ್ ಉದ್ಘಾಟಿಸಲಿದ್ದಾರೆ. ಕೇರಳ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಇಬ್ರಾಹೀಮುಲ್ ಬುಖಾರಿ, ಸಮಸ್ತ ಕೋಶಾಧಿಕಾರಿ ಕೋಟ್ಟೂರು ಕುಂಞಮ್ಮು ಮುಸ್ಲಿಯಾರ್, ಸಮಸ್ತ ಕಾರ್ಯದರ್ಶಿ ಪೊನ್ಮಳ ಅಬ್ದುಲ್ ಖಾದಿರ್ ಮುಸ್ಲಿಯಾರ್, ಸಮಸ್ತ ಕಾರ್ಯದರ್ಶಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಮರ್ಕಝ್ ಸಂಸ್ಥೆಯ ನಿರ್ದೇಶಕ ಸಿ.ಮುಹಮ್ಮದ್ ಫೈಝಿ , ಹುಸೈನ್ ಸಖಾಫಿ ಚುಳ್ಳಿಕೋಡ್ ಮುಂತಾದ ಗಣ್ಯರು ಮಾತನಾಡಲಿದ್ದಾರೆ.

ಡಾ. ಎ. ಪಿ ಮುಹಮ್ಮದ್ ಅಬ್ದುಲ್ ಹಕೀಮ್ ಅಝ್ಹರಿ ಸಂದೇಶ ಭಾಷಣ ಮಾಡುವರು. ಸ್ವಾಗತ ಸಂಘದ ಅಧ್ಯಕ್ಷ ಸಯ್ಯಿದ್ ತುರಾಬ್ ಅಸ್ಸಖಾಫ್ ತಂಙಳ್ ಸ್ವಾಗತ ಭಾಷಣ ನಿರ್ವಹಿಸುವರು. ಮರ್ಕಝ್ ಸಂಸ್ಥೆಯ ಉಪಾಧ್ಯಕ್ಷ ಕೆ. ಕೆ ಅಹಮದ್‌ ಕುಟ್ಟಿ ಮುಸ್ಲಿಯಾರ್‌ ಕಟ್ಟಿಪ್ಪಾರ, ಸಿರಾಜುಲ್‌ ಉಲಮಾ ಹೈದ್ರೂಸ್‌ ಮುಸ್ಲಿಯಾರ್‌, ಮಾರಾಯಮಂಗಲಂ ಅಬ್ದುರ್ರಹ್ಮಾನ್‌ ಫೈಝಿ, ಕೆ. ಪಿ ಮುಹಮ್ಮದ್ ಮುಸ್ಲಿಯಾರ್ ಕೊಂಬಂ , ಅಬೂ ಹನೀಫಲ್ ಫೈಝಿ ತೆನ್ನಲ, ವಿ ಪಿ ಎಂ ಫೈಝಿ ವಿಲ್ಯಾಪಳ್ಳಿ, ಸಯ್ಯಿದ್ ಶರಫುದ್ದೀನ್ ಜಮಲುಲ್ಲೈಲಿ ಚೇಳಾರಿ, ಎಸ್ ವೈ ಎಸ್ ಅಧ್ಯಕ್ಷ ಸಯ್ಯಿದ್ ತ್ವಾಹ ತಂಗಳ್ ಕುಟ್ಯಾಡಿ , ಪೊನ್ಮಳ ಮುಹ್ಯುದ್ದೀನ್ ಕುಟ್ಟಿ ಬಾಖವಿ, ಇಸ್ಮಾಯೀಲ್ ಬುಖಾರಿ ಕಡಲುಂಡಿ, ಪಿ. ಎಸ್. ಕೆ ಮೊಯ್ದು ಮುಸ್ಲಿಯಾರ್ ಮಾಡವನ, ಪಟ್ಟುವಂ ಅಬೂಬಕ್ಕರ್ ಮುಸ್ಲಿಯಾರ್, ಸಯ್ಯಿದ್ ಹಬೀಬ್ ಕೋಯಾ ತಂಗಳ್ ಚೇರಕ್ಕಾಪರಂಬು, ಸಯ್ಯಿದ್ ಶಿಹಾಬುದ್ದೀನ್ ಅಹ್ದಲ್ ತಂಗಳ್ ಮುತ್ತನೂರು, ದೇವರ್ಶೋಲ ಅಬ್ದುಸ್ಸಲಾಂ ಮುಸ್ಲಿಯಾರ್, ಎಸ್‌ಎಸ್‌ಎಫ್‌ ರಾಷ್ಟ್ರೀಯ ಕಾರ್ಯದರ್ಶಿ ಸಿ ಪಿ ಉಬೈದುಲ್ಲಾಹ್ ಸಖಾಫಿ, ಎಸ್ ಎಸ್ ಎಫ್ ರಾಜ್ಯಾಧ್ಯಕ್ಷ ಫಿರ್ದೌಸ್ ಸಖಾಫಿ ಕಡವತ್ತೂರು, ಮರ್ಕಝ್ ಕೋಶಾಧಿಕಾರಿ ಎ.ಪಿ ಕರೀಂ ಹಾಜಿ, ಸದನತುಲ್ ಫುತೂಹ್ ಚೆಯರ್ಮ್ಯಾನ್ ಅಬ್ದುರ್ರಹ್ಮಾನ್ ಹಾಜಿ ಕುಟ್ಟೂರು, ಸಿದ್ಧೀಖ್ ಸಖಾಫಿ ನೇಮಮ್, ಅಲಂಗಾರ್ ಶರಫು ಹಾಜಿ, ರಫೀಖ್ ಅಹಮ್ಮದ್ ಸಖಾಫಿ, ಅಬ್ದುಲ್ ಕರೀಂ ಸಖಾಫಿ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.

ಕೇರಳ ಮತ್ತು ರಾಷ್ಟ್ರದ ವಿವಿಧ ಕಡೆಗಳಿಂದ ಆಗಮಿಸುವ ಇಪ್ಪತ್ತರಷ್ಟು ಸಂಘಗಳು ಮೌಲಿದ್ ಪಾರಾಯಣಗಳಿಗೆ ನೇತೃತ್ವ ನೀಡುವರು. ಮೌಲಿದ್ ಸಂಗಮದಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಂದ ವಿಶ್ವಾಸಿಗಳು ತಲುಪಲಿದ್ದಾರೆ. ವಿಶೇಷವಾಗಿ ಸಿದ್ಧಪಡಿಸಲಾದ ರೌಲತ್ತುಲ್ ಮುಸ್ತಫದಲ್ಲಿ ವಿಶ್ವಾಸಿಗಳು ಆಸಾರುಗಳನ್ನು ದರ್ಶಿಸಲು ಸೌಲಭ್ಯವನ್ನು ಕಲ್ಪಿಸಲಾಗಿದೆ. ಪವಿತ್ರ ರಬೀಉಲ್ ಅವ್ವಲ್ ತಿಂಗಳನ್ನೂ ಮೌಲಿದುಲ್ ಅಕ್ಬರನ್ನು ಸ್ವಾಗತಿಸಲು ಜಾಮಿಉಲ್ ಫುತೂಹ್ ಮಸೀದಿಯು ಸಂಪೂರ್ಣವಾಗಿ ಸಜ್ಜಾಗಿದೆ.

error: Content is protected !! Not allowed copy content from janadhvani.com