ಚಿಕ್ಕಮಗಳೂರು ಜಿಲ್ಲೆಯ ಪ್ರತಿಷ್ಠಿತ ಧಾರ್ಮಿಕ ಹಾಗು ಶಿಕ್ಷಣ ಸಂಸ್ಥೆಯಾದ ಜಾಮಿಯಾ ಕಂಜೂಲ್ ಇಮಾನ್ ಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಜನ್ಮ ದಿನಾಚರಣೆ ಅಂಗವಾಗಿ 12 ದಿನಗಳ ಮಿಲಾದ್ ಆಚರಣೆಯು ಅದ್ದೂರಿಯಾಗಿ ವಿಜ್ರಂಭಣೆಯಿಂದ ಆಚರಿಸಲಾಗುವುದು ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ಅಲ್ ಹಾಜ್ ಫೈರೋಜ್ ಅಹಮದ್ ರಜ್ವಿ ರವರು ತಿಳಿಸಿದ್ದಾರೆ .
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಜ್ವಿ ರಬ್ಬಿವುಲ್ ಅವ್ವಲ್ ಚಂದ್ರದರ್ಶನದ ಮೊದಲ ದಿನದಿಂದ 12 ನೆ ರಬ್ಬಿವುಲ್ ಅವ್ವಲ್ ರವರಿಗೆ ಪ್ರತಿನಿತ್ಯ ಇಶಾ ನಮಾಜಿನ ಬಳಿಕ ಧಾರ್ಮಿಕ ವಿದ್ವಾಂಸರಿಂದ ಪ್ರವಚನ ಹಾಗು ನಾತೆ ಷರೀಫ್ ಗಾಯನ ಪ್ರತಿಭೋತ್ಸವ ಸ್ಫರ್ಧೆ,ಬುರ್ದ ಮಜ್ಲಿಸ್, ಅನ್ನ ಸಂತರ್ಪಣೆಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿದೆ ಎಂದು ತಿಳಿಸಲಾಗಿದೆ 12 ನೆ ಅಂತಿಮ ದಿನದಂದು ಪ್ರಖ್ಯಾತ ಸುನ್ನಿ ವಿದ್ವಾಂಸರಿಂದ ಪ್ರವಚನ ಹಾಗು ವಿಜೇತ ಸ್ಪರ್ಧಿಗಳಿಗೆ ನಗದು ಬಹುಮಾನವನ್ನು ನೀಡಲಾಗುವುದು ನಂತರ ಅದೇ ರಾತ್ರಿ ಜಾಗರಣೆ ಮಾಡಿ ಬೆಳಗ್ಗಿನ ಜಾವ ಸುಬಹ ಸಾದಿಕ್ ಸಂದರ್ಭದಲ್ಲಿ ಮೌಲುದ್ ಪಠಿಸಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.