janadhvani

Kannada Online News Paper

ಮಡವೂರ್ ಸಿ ಎಂ ಸೆಂಟರ್ ಕರ್ನಾಟಕ ಪ್ರಚಾರ ಸಮಿತಿ: ಅಶ್ಅರಿಯಾ ಸಖಾಫಿ, ಸಲೀಂ ಕನ್ಯಾಡಿ ಸಾರಥಿಗಳು

ದಕ್ಷಿಣ ಭಾರತದ ಪ್ರಮುಖ ಝಿಯಾರತ್ ಕೇಂದ್ರ ವಾದ ಮಡವೂರ್ ಮಖಾಮ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಶೈಖುನಾ ಸಿಎಂ ವಲಿಯುಲ್ಲಾಹಿ ಅವರ ಜೀವಿತ ಕಾಲದಲ್ಲಿ ಅವರ ನಿರ್ದೇಶನ ಪ್ರಕಾರ ಪ್ರಾರಂಭಿಸಿದ ಸಿಎಂ ಸೆಂಟರ್ ಶಿಕ್ಷಣ ಸಂಸ್ಥೆಗಳ ಮೂವತ್ತ ಐದನೇ ವಾರ್ಷಿಕ ಮಹಾ ಸಮ್ಮೇಳನ ಶೀಘ್ರದಲ್ಲೇ ನಡೆಯುವ ಹಿನ್ನೆಲೆಯಲ್ಲಿ ಅದರ ಪ್ರಚಾರಾರ್ಥ ಕರ್ನಾಟಕ ರಾಜ್ಯ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು

ಅಧ್ಯಕ್ಷರಾಗಿ ಮುಹಮ್ಮದ್ ಅಲಿ ಸಖಾಫಿ ಅಶ್ಅರಿಯಾ, ಪ್ರಧಾನ ಸಂಚಾಲಕರಾಗಿ ಸಲೀಂ ಕನ್ಯಾಡಿ ಹಾಗೂ ಪ್ರಧಾನ ಸಲಹೆ ಗಾರರಾಗಿ ಡಾ ಅಬ್ದುಲ್ ರಶೀದ್ ಝೖನೀ ಅವರನ್ನು ಆರಿಸಲಾಯಿತು.

ಸಲಹೆಗರಾರಾಗಿ ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ ಕೆ ಎಂ ಕಾಮಿಲ್ ಸಖಾಫಿ, ಎಸ್ ವೈ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾದಿಖ್ ಮಾಸ್ಟರ್ ಬೆಳ್ತಂಗಡಿ, ಎಸ್ ಎಸ್ ಎಫ್ ರಾಜ್ಯ ಕೋಶಾಧಿಕಾರಿ ಮುಸ್ತಫಾ ನಈಮಿ ಹಾವೇರಿ ಅವರನ್ನು ನೇಮಕ ಮಾಡಲಾಯಿತು.

ಸದಸ್ಯರಾಗಿ ಖಲೀಲ್ ಮಾಲಿಕಿ ಬೋಳಂತೂರ್, ಅಬ್ದುಲ್ ಅಝೀಝ್ ಮಿಸ್ಬಾಹಿ ಪುತ್ತೂರು,
ಅಬ್ದುಲ್ ರಹ್ಮಾನ್ ರಝ್ವೀ ಉಡುಪಿ, ಅಹ್ಮದ್ ಮದನಿ ಕೊಡಗು, ಇಸ್ಮಾಯಿಲ್ ಸಅದಿ ಊರುಮನೆ,ಮನ್ಸೂರ್ ಕೋಟಗದ್ದೆ, ಉಮರ್ ಮಾಸ್ಟರ್ ಎನ್ ಎಸ್, ಇಕ್ಬಾಲ್ ಬಪ್ಪಳಿಗೆ, ಸ್ವಾಲಿಹ್ ಮುರ ಇವರನ್ನು ಆರಿಸಲಾಯಿತು.

ಶೀಘ್ರದಲ್ಲೇ ವಿಶಾಲವಾದ ಜಿಲ್ಲಾ ಮಟ್ಟದ ಸಮಾವೇಶ ನಡೆಸಿ ವಿವಿಧ ಯೋಜನೆಗಳನ್ನು ಹಮ್ಮಿ ಕೊಳ್ಳಲು ನಿರ್ಧಾರಿಸಲಾಯಿತು.

ಈ ಕುರಿತು ಮಂಗಳೂರು ಪಂಪ್ವೆಲ್ ಹಿರಾ ಸಭಾಂಗಣದಲ್ಲಿ ಸೇರಿದ ಸಭೆಯಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷ ಅಮೀನು ಶರೀಅ ಸಯ್ಯಿದ್ ಅಲಿ ಬಾಫಖಿ ತಂಙಳ್ ಅಧ್ಯಕ್ಷ ತೆ ವಹಿಸಿದರು, ಕರ್ನಾಟಕ ಜಂ ಇಯ್ಯತುಲ್ ಉಲಮಾ ಅಧ್ಯಕ್ಷ ಝೖನುಲ್ ಉಲಮಾ ಖಾಝಿ ಮಾಣಿ ಉಸ್ತಾದ್ ಉದ್ಘಾಟನೆ ಮಾಡಿದರು,

ಸಯ್ಯಿದ್ ಅಬ್ದುಲ್ ಸಬೂರ್ ಬಾಹಸನ್ ಅವೇಲಂ,ಸಯ್ಯಿದ್ ಖಲೀಲ್ ಬಾಅಲವಿ ತಂಙಳ್ ಮಡವೂರ್, ಹೈದರ್ ಮದನಿ ಕರಾಯ, ಜೆಪ್ಪು ಮದನಿ, ಅಶ್ಅರಿಯಾ ಸಖಾಫಿ, ಮುಸ್ತಫಾ ನಈಮಿ, ಸಾದಿಖ್ ಮಾಸ್ಟರ್ ಮುಂತಾದವರು ಶುಭ ಹಾರೈಸಿದರು.

ಡಾ ಎಮ್ಮೆಸ್ಸೆಂ. ಝೖನೀ ಕಾಮಿಲ್ ಸ್ವಾಗತಿಸಿ ಸಿ ಎಂ ಸೆಂಟರ್ ಮೆನೇಜರ್ ಮುಸ್ತಫಾ ಸಖಾಫಿ ಮರಂಜಾಟ್ಟಿ ಧನ್ಯವಾದಗಳು ಹೇಳಿದರು.

error: Content is protected !! Not allowed copy content from janadhvani.com