ದಾರುಲ್ ಹುದಾ ತಂಬಿನಮಕ್ಕಿ ಬೆಳ್ಳಾರೆ ಸ್ಥಾಪನೆಯ ಪ್ರಚನಾರ್ಥ ಬಹರೈನಿಗೆ ಆಗಮಿಸಿದ ಬಹು ಖಲೀಲ್ ಹಿಮಮಿ ಸಖಾಫಿ ಕೊಟ್ಟಮುಡಿ ಉಸ್ತಾದರ ನೇತೃತ್ವದಲ್ಲಿ ದಿನಾಂಕ 16/08/2024 ರಂದು ಶುಕ್ರವಾರ ಜುಮಾ ನಮಾಜಿನ ನಂತರ ಅರಾದ್ ಜಾಮಿಯಾ ಮಸೀದಿಯ ಮಜ್ಲಿಸಿನಲ್ಲಿ ಸ್ಥಾಪನೆಗೆ ತನು-ಮನ-ಧನದಿಂದ ಸಹಕರಿಸಿದ ಅಭಿಮಾನಿಗಳಿಗೆ ದುಆ ಸಂಗಮವನ್ನು ಏರ್ಪಡಿಸಿ ಭಕ್ತಿ ಪೂರ್ವಕವಾಗಿ ಉಸ್ತಾದರು ದುಆ ನೆರವೇರಿಸಿದರು.
ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದಾರುಲ್ ಹುದಾ ಸ್ಥಾಪನೆಯ ಸಾರಥಿ ಬಹು ಖಲೀಲ್ ಹಿಮಮಿ ಸಖಾಫಿ ಉಸ್ತಾದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ಥಾಪನೆಯ ಕುರಿತು ಸವಿಸ್ತಾರವಾಗಿ ವಿವರಿಸಿ ಸಭೀಕರಿಗೆ ಮನವರಿಕೆ ಮಾಡಿಕೊಟ್ಟರು.
ಸುಳ್ಯ ವೆಲ್ಫೇರ್ ಅಸೋಸಿಯೇಷನ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೂಫಿ ಪೈಂಬಚ್ಚಾಲ್, ಕೆಸಿಎಫ್ ಶಿಕ್ಷಣ ಇಲಾಖೆ ಅಧ್ಯಕ್ಷರಾದ ಹನೀಫ್ ಮುಸ್ಲಿಯಾರ್, ಮುಹಿಮ್ಮಾತ್ ಓರ್ಗನೇಝರ್ ಅಬೂಬಕರ್ ಸಖಾಫಿ, ಡಿಕೆಯಸ್ಸಿ ಡೆವೆಲಪ್ ಮೆಂಟ್ ಚೆಯರ್ಮೇನ್ ಅಬ್ದುಲ್ಲಾ ಅಲವಿ ಮುಂತಾದವರು ಕೆಸಿಎಫ್, ಡಿಕೆಯಸ್ಸಿ, ಕೊಡಗು, ಸುಳ್ಯ, ಮುಹಿಮ್ಮಾತ್ ಕಮಿಟಿಯ ವತಿಯಿಂದ ಕಾರ್ಯಕ್ರಮಕ್ಕೆ ಮನತುಂಬಿ ಶುಭ ಹಾರೈಸಿದರು.
ಕೆಸಿಎಫ್ ನೋರ್ತ್ ಝೋನ್ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸಿದ್ದೀಖ್ ಉಸ್ತಾದ್ ಮಂಜನಾಡಿ, ಕೆಸಿಎಫ್ ಮನಾಮ ಸೆಕ್ಟರ್ ಅಧ್ಯಕ್ಷರಾದ ಅಹ್ಮದ್ ಮುಸ್ಲಿಯಾರ್ ಗಟ್ಟಮನೆ, ಅಸಾಸ್ ಮಲ್ಲೂರು ಓರ್ಗನೇಝರ್ ಅಬ್ದುಲ್ ಖಾದರ್ ಸಖಾಫಿ ಪಟ್ಟೋರಿ, ದಾರುಲ್ ಅಶರಿಯಾ ಸುರಿಬೈಲ್ ಓರ್ಗನೇಝರ್ ಇಸ್ಮಾಯಿಲ್ ಸಅದಿ ಬೇಂಗಿಲ, ಇಹ್ಸಾನ್ ಉತ್ತರ ಕರ್ನಾಟಕ ಓರ್ಗನೇಝರ್ ಮುಹಮ್ಮದ್ ಅಲಿ ವೇಣೂರು, ಅಬೂಬಕರ್ ಮಾದಾಪುರ, ಅಬ್ದುಲ್ಲಾ ಕೊಡಗು, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಾರುಲ್ ಮುಸ್ತಫಾ ಓರ್ಗನೇಝರ್ ಹನೀಫ್ ಮುಸ್ಲಿಯಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷರಾದ ಖಲಂದರ್ ಉಸ್ತಾದರು ನೂತನ ಸಮಿತಿಗೆ ಚಾಲನೆ ನೀಡಿ, ಶುಭ ಹಾರೈಸಿದರು. ನೂತನ ಸಮಿತಿಯ ಅಧ್ಯಕ್ಷರಾದ ಮಜೀದ್ ಝುಹ್ರಿ ಉಸ್ತಾದರು ಧನ್ಯವಾದ ಸಮರ್ಪಿಸಿದರು.
✍️ ಎಂ.ಎ. ವೇಣೂರು