ಮನಾಮ: ಪ್ರವಾದಿ ಮುಹಮ್ಮದ್ ﷺ ರವರ 1499 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಕರ್ಣಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ಆಯೋಜಿಸಲ್ಪಡುವ ಬೃಹತ್ ಮೀಲಾದ್ ಸಮಾವೇಶ ಕಾರ್ಯಕ್ರಮದ ಸ್ವಾಗತ ಸಮಿತಿಯನ್ನು ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.
ಚೇರ್ಮಾನ್: ಲತೀಫ್ ಪೆರೋಲಿ, ವೈಸ್ ಚೇರ್ಮಾನ್: ಅಶ್ರಫ್ ಕಿನ್ಯ, ಕನ್ವೀನರ್: ತೌಫೀಖ್ ಬೆಳ್ತಂಗಡಿ, ವೈಸ್ ಕನ್ವೀನರ್: ಸುಹೈಲ್ ಬೀಸಿ ರೋಡ್, ಫೈನಾನ್ಸ್ ಕಂಟ್ರೋಲರ್: ನಝೀರ್ ಹಾಜಿ ದೇರಳಕಟ್ಟೆ ಹಾಗೂ ಸ್ವಯಂ ಸೇವಕರಾಗಿ ಅಝೀಝ್ ಪುರ್ಷಂಗೋಡಿ, ಮಜೀದ್ ಪೈಂಬಚ್ಚಾಲ್, ಮೂಸಾ ಪೈಂಬಚ್ಚಾಲ್, ರಿಯಾಝ್ ಸುಳ್ಯ, ಸಮದ್ ಉಜಿರೆಬೆಟ್ಟು, ಕರೀಂ ಮಾಝಾ, ಮನ್ಸೂರ್ ಬೆಳ್ಮ ಇವರನ್ನು ನೇಮಿಸಲಾಯಿತು.
“ಮುತ್ತು ನಬಿ ﷺ ಮಾನವೀಯತೆಯ ಮಾರ್ಗದರ್ಶಿ” ಎಂಬ ಘೋಷ ವಾಕ್ಯದೊಂದಿಗೆ ಸೆಪ್ಟೆಂಬರ್ 6 ರಂದು ಶುಕ್ರವಾರ ರಾತ್ರಿ 7:30 ಕ್ಕೆ ಸರಿಯಾಗಿ ಮನಾಮ ಕನ್ನಡ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಪ್ರಸ್ತುತ ಕಾರ್ಯಕ್ರಮದಲ್ಲಿ ಹಾಫಿಝ್ ಮಸ್ವೂದ್ ಸಖಾಫಿ ಗೂಡಲ್ಲೂರು ಉಸ್ತಾದರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ. ಯೆನೆಪೋಯ ಅಬ್ದುಲ್ಲಾ ಕುಂಞ, (ಚಾನ್ಸೆಲರ್ ಯೆನೆಪೋಯ ಡೆವಲ್ಪ್ ಮೆಂಟ್ ಯುನಿವರ್ಸಿಟಿ ಮಂಗಳೂರು) ಅಬ್ದುಲ್ ಲತೀಫ್ (ಮ್ಯಾನೇಜಿಂಗ್ ಡೈರೆಕ್ಟರ್ ಹಿಲಾಲ್ ಹಾಸ್ಪಿಟಲ್ ಬಹರೈನ್) ಡಾ. ಯು.ಟಿ. ಇಫ್ತಿಕಾರ್ ಫರೀದ್ ಉಳ್ಳಾಲ ಮುಂತಾದ ಗಣ್ಯ ವ್ಯಕ್ತಿಗಳು, ಪ್ರಬುದ್ಧ ಸಾದಾತುಗಳು ಹಾಗೂ ಉಲಮಾ ಉಮರಾ ನೇತಾರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಂದು ಕಾರ್ಯಕರ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆಸಿಎಫ್ ನೋರ್ತ್ ಝೋನ್ ಕಾರ್ಯದರ್ಶಿ ಸಿದ್ದೀಖ್ ಉಸ್ತಾದ್ ದುಆ ಗೈದರು. ರಾಷ್ಟ್ರೀಯ ಸಮಿತಿ ರಿಲೀಫ್ ವಿಂಗ್ ಕಾರ್ಯದರ್ಶಿ ಸುಹೈಲ್ ಬೀಸಿ ರೋಡ್ ಸ್ವಾಗತಿಸಿದರು. ರಾಷ್ಟ್ರೀಯ ಸಮಿತಿ ಸಂಘಟನಾ ಅಧ್ಯಕ್ಷರಾದ ಖಲಂದರ್ ಉಸ್ತಾದ್ ಧನ್ಯವಾದ ಸಲ್ಲಿಸಿದರು.
✍️ ಎಂ. ಎ. ವೇಣೂರು.