ಸುನ್ನೀ ಯುವಜನ ಸಂಘ (SჄS) ದೇರಳಕಟ್ಟೆ ಝೋನ್ ಸಮಿತಿ ನಿರ್ದೇಶನದಂತೆ ಕಿನ್ಯ ಸರ್ಕಲ್ ವ್ಯಾಪ್ತಿಯ SჄS ಸದಸ್ಯತ್ವ ಪಡೆದ ಸರ್ವ ಕಾರ್ಯಕರ್ತರನ್ನು ಕಿನ್ಯ ಕೂಡಾರ ತಾಜುಲ್ ಫುಖಹಾಅ್ ಮದ್ರಸ ಸಭಾಂಗಣದಲ್ಲಿ ಸೇರಿಸಿ ನಡೆಸಿದ “ತಜ್’ದೀದ್ ಮೆಂಬರ್ಸ್ ಇವನ್ಟ್” ಕ್ಯಾಂಪ್ ಆವೇಶ ಭರಿತ ಸಂಗಮವಾಗಿ ಸಮಾಪ್ತಿ ಗೊಂಡಿತು.
ಸರ್ಕಲ್ ಸಮಿತಿ ಅಧ್ಯಕ್ಷ ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ ರವರ ಅಧ್ಯಕ್ಷತೆಯಲ್ಲಿ SჄS ಕುರಿಯ ದಅ್‌ವಾ ಕಾರ್ಯದರ್ಶಿ ಮುಹಮ್ಮದ್ ರಫೀಖ್ ಝುಹ್ರಿ ಉದ್ಘಾಟಿಸಿದರು,ಕಲ್ಕಟ್ಟ ಇಲ್ಯಾಸ್ ಜುಮುಅ ಮಸ್ಜಿದ್ ಖತೀಬ್ ಇಸ್ಹಾಖ್ ಸಖಾಫಿ ಸುನ್ನತ್ ಜಮಾಅತ್ ವಿಷಯದಲ್ಲಿ ತರಗತಿ ನಡೆಸಿ ನೂತನವಾದ ಅದರ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದರು.
ಕಿನ್ಯ ಸರ್ಕಲ್ ದಅ್‌ವಾ ಕಾರ್ಯದರ್ಶಿ ಉಮರುಲ್ ಫಾರೂಖ್ ಸಖಾಫಿ ಮೀಂಪ್ರಿ ಮುನ್ನುಡಿ ಭಾಷಣ ಮಾಡಿದರು, ಕಣ್ಣಂಗಾರ್ ಮುದರ್ರಿಸ್ ಅಶ್ರಫ್ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು.
ಕರ್ನಾಟಕ ಮುಸ್ಲಿಂ ಜಮಾಅತ್ ಕಿನ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ಕೆ.ಎಂ ಇಸ್ಮಾಈಲ್ ಹಾಜಿ ಸಾಗ್,ಬೆಳರಿಂಗೆ ಸಮಿತಿ ಅಧ್ಯಕ್ಷ ಅಬ್ಬಾಸ್ ಹಾಜಿ ಎಲಿಮಲೆ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ಸರ್ಕಲ್ ಸಮಿತಿ ಕೋಶಾಧಿಕಾರಿ ಅಬ್ದುಲ್ ಹಮೀದ್ ಮೀಂಪ್ರಿ, ಸಾಂತ್ವನ ಕಾರ್ಯದರ್ಶಿ ಅಯ್ಯೂಬ್ ಖುತುಬಿನಗರ ಹಾಗೂ ಸರ್ಕಲ್ ವ್ಯಾಪ್ತಿಯ ಏಳು ಯುನಿಟ್ ಗಳ ನಾಯಕ, ಕಾರ್ಯಕರ್ತರು ಭಾಗವಹಿಸಿದ್ದರು, ಸರ್ಕಲ್ ಸಮಿತಿ ಉಪಾಧ್ಯಕ್ಷ ಪಿ.ಎಂ ಉಸ್ಮಾನ್ ಝುಹ್ರಿ ಕುರಿಯ ಸ್ವಾಗತಿಸಿ,ಇಸಾಬ ಕಾರ್ಯದರ್ಶಿ ಬಷೀರ್ ಲತೀಫಿ ಕುರಿಯ ವಂದಿಸಿದರು.