ಮೀತಿ ಮೀರುತ್ತಿರುವ ಅವಮಾನವೀಯ ಕೃತ್ಯಗಳು ಪೆನ್ನು ಹಿಡಿಯುವ ಕೈಗಳು ಗಾಂಜ ಚೂರಿ ಸಿಗರೇಟು ಹಿಡಿಯುತ್ತಿದೆ.ಪೋಲೀಸ್ ಇಲಾಖೆ,ಶಾಲಾಡಳಿತ,ಪೋಷಕ ರು ಎಚ್ಚೆತ್ತುಕೊಳ್ಳಬೇಕು
ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್
ಅಧ್ಯಕ್ಷ ರು ದಕ್ಷಿಣ ಕನ್ನಡ ಜಿಲ್ಲಾ ವಕ್ಪ್ ಸಲಹಾ ಸಮಿತಿ
ಮಂಗಳೂರು: ನಿನ್ನೆ ಮಂಗಳೂರು ಅಡ್ಯಾರ್ ನಲ್ಲಿ ನಡೆದ ವಿದ್ಯಾರ್ಥಿಗಳ ಮೇಲೆ ಹಾಗೂ ಇಂದು ಪುತ್ತೂರಲ್ಲಿ ನಡದ ವಿದ್ಯಾರ್ಥಿ ನಿ ಮೇಲಿನ ಚೂರಿ ಇರಿತ ಇಂತಹ ಘಟನೆಗಳು. ಜಿಲ್ಲೆಯ ಲ್ಲಿ ಆತಂಕ ಸೃಷ್ಟಿ ಸುತ್ತಿದೆ. ಪೆನ್ನು ಹಿಡಿಯುವ ಕೈಗಳಲ್ಲಿ ಚೂರಿ, ಗಾಂಜ, ಸಿಗರೇಟು ಸರಬರಾಜುಗುತ್ತಿದೆ. ಅಡ್ಯಾರ್ ನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಅಮಾನವೀಯ ಕೃತ್ಯ ಹಾಗೂ ಪುತ್ತೂರಿನಲ್ಲಿ ವಿದ್ಯಾರ್ಥಿನಿ ಮೇಲಿನ ಚೂರಿ ಇರಿತ ಎರಡು ಪ್ರಕರಣಗಳು ಗಂಬೀರವಾಗಿ ಪರಿಗಣಿಸಿ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು .
ಜಿಲ್ಲೆಯ ಎಲ್ಲಾ ಕ್ಯಾಂಪಸ್ ಗಳಿಗೆ ಸೂಕ್ತ ಬಂದೋಬಸ್ತು ವ್ಯವಸ್ಥೆ ಗೊಳಿಸಬೇಕು. ವಿದ್ಯಾರ್ಥಿ ಗಳ ಮನ ಪರಿವರ್ತನಾ ಕಾರ್ಯಕ್ರಮ ಗಳನ್ನು ರೂಪಿಸುವಂತೆ ಶಾಲಾಡಳಿತಗಳು ರೂಪು ರೇಶೆ ಕಂಡುಕೊಳ್ಳಬೇಕು ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಮೇಲೆ ನಿಘಾ ವಹಿಸಿಕೊಳ್ಳಬೇಕು. ಸಂಘಟನೆಗಳು ಇಂತಹ ವಿಷಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿಕೊಳ್ಳಬೇಕು.