janadhvani

Kannada Online News Paper

SSF ಕ್ಯಾಂಪಸ್ CONFRENCE ಸಮ್ಮೇಳನಕ್ಕೆ ದಿನಗಣನೆ..ದಾರಿ ತಪ್ಪುತ್ತಿರುವ ನಮ್ಮ ಮಕ್ಕಳನ್ನು ಸ್ವರ್ಗದ ಹಾದಿಗೆ ಸೇರಿಸಲು ಮೈಸೂರ್ ಕರೆಯುತ್ತಿದೆ

PKM ಹನೀಫ್ ರಝ್ವಿ ಉರುವಾಲು ಪದವು_

ಮಕ್ಕಳು ಅದು ಅಲ್ಲಾಹು ನೀಡುವ ದೊಡ್ಡ ನಿಹ್ಮತ್.ಮಕ್ಕಳಿಲ್ಲದ ಮನೆ ಕುಟುಂಬ ಅದು ಎಷ್ಟೇ ಆಸ್ತಿ ಅಂತಸ್ತು ಇದ್ದರೂ ಉಪ್ಪು ಹಾಕದ ಸಾರಿನಂತೆ ಇಂದು ಅದೆಷ್ಟೋ ಮಂದಿ ಮಕ್ಕಳಿಲ್ಲ ಎಂಬ ಕಾರಣಕ್ಕೆ ವ್ಯಥೆ ಪಡುತಿದ್ದಾರೆ.ಅದೆಷ್ಟೋ ಮಂದಿ ಮಕ್ಕಳು ದಾರಿ ತಪ್ಪಿದ್ದಾರೆ ವೆಂದು ಸಂಕಟ ಪಡುತ್ತಿದ್ದಾರೆ.

ಹೌದು! ಮಕ್ಕಳನ್ನು ಉತ್ತಮ ದೀನಿ ಚೌಕಟ್ಟಿನಲ್ಲಿ ಬೆಳೆಸುದು ಇಂದಿನ ಪೋಷಕರಿಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ.ಕಲುಷಿತ ಗೊಂಡ ವಾತವರಣ,ಮೊಬೈಲ್ ಅವಾಂತರ,ಸಹಪಾಠಿಗಳ ಸಹವಾಸ,ಡರ್ಗ್ಸ್,ಗಾಂಜಾ ದಂತಹಾ ನಶೆ ಏರುವ ವಸ್ತುಗಳನ್ನು ಉಪಯೋಗಿಸದಿದ್ದರೆ ತಾನೇನು ಸಮಾಜದ ಮುಂದೆ ತಲೆತಗ್ಗಿಸಿ ನಡೆಯಬೇಕಾಗಬಹುದೇ? ಎಂಬ ಚಿಂತನೆ.
ಹೀಗೆ ಮುಂದುವರಿಯುವ ಪಟ್ಟಿಯಲ್ಲಿ ನಮ್ಮ ಮಕ್ಕಳೂ ಎಷ್ಟರ ಮಟ್ಟಿಗೆ ಸೇಫ್ಟಿ ಎಂದು ಯಾವೊಬ್ಬ ತಂದೆಗೂ ಧೈರ್ಯದಿಂದ ಹೇಳಲು ಸಾಧ್ಯವಿಲ್ಲದ ಕಾಲದಲ್ಲಾಗಿದೆ ಪ್ರಸಕ್ತ ಸಮಾಜವು ಮುಂದುವರಿತ್ತಿರುವುದು.

ಧಾರ್ಮಿಕ ಕಲಿಕೆಯಲ್ಲಿ ನಿರಾಸಕ್ತಿ,ಮರಣ,ಖಬ್ರ್,ಆಖಿರ,ಸ್ವರ್ಗ,ನರಕ ಇದರ ಬಗ್ಗೆ ಒಂದಿಷ್ಟು ಭಯವಿಲ್ಲದ ಪ್ರಸಕ್ತ ಸನ್ನಿವೇಶದಲ್ಲಿ.ಮಕ್ಕಳಿಗೆ ಕಲುಷಿತ ಗೊಂಡ ವಾತಾವರಣದಿಂದ ಮುಕ್ತಿಗೊಳಿಸಿ ಧಾರ್ಮಿಕ ಚೌಕಟ್ಟಿನಲ್ಲಿ ಬೆಳೆಸದಿದ್ದರೆ ಮಕ್ಕಳ ಕಾರಣದಿಂದ ನಾಳೆ ಪರಲೋಕದಲ್ಲಿ ಕೈಕಚ್ಚುವ,ಖೇದ ಪಡಿಸುವ ಸಮಯ ಖಂಡಿತ ಬರಲಿದೆ.

ಇಂತಹ ಕಠಿಣ ಪರಿಸ್ಥಿತಿಯಿಂದ ರಕ್ಷೆ ಹೊಂದಲು SSF ಕಳೆದ 50 ವರ್ಷಗಳಿಂದ ವಿಧ್ಯಾರ್ಥಿ ಸಂಘಟನೆ ಕಟ್ಟಿಕೊಂಡು ಸಾಕಷ್ಟು ವಿಧ್ಯಾರ್ಥಿಗಳ ಜೀವನದವಲ್ಲಿ ಬದಲಾವಣೆಯ ಅಲೆ ಎಬ್ಬಿಸಿದ ಚರಿತ್ರೆಗಳು ನಮ್ಮ ಮುಂದೆ ಧಾರಾಳ ಇದೆ.

ಇದೀಗ ಮತ್ತೆ ಗಾಂಜಾ, ಡ್ರಗ್ಸ್ ,ಅಫೀಮುಗಳಿಗೆ ಬಲಿಯಾಗಿ ನಾಡು,ಮನೆ, ಕುಟುಂಬದ ನೆಮ್ಮದಿ ಹಾಳಾಗುತ್ತಿದೆ ಮಾತ್ರವಲ್ಲ, ಹದಿಹರೆಯದ ಮಕ್ಕಳು ತಮ್ಮ ಪವಿತ್ರವಾದ ಜೀವನವನ್ನೇ ನೈಮಿಷಿಕ ಸುಖಕ್ಕಾಗಿ ಒತ್ತೆ ಇಡುತ್ತಿರುವ ಕಲುಷಿತ ಗೊಂಡ ವಿಧ್ಯಾರ್ಥಿಗಳ ಬದುಕನ್ನು ಪಾವನ ಗೊಳಿಸಲುcampus ವಿಧ್ಯಾರ್ಥಿಗಳಿಗಾಗಿ ಇದೇ ಆಗಸ್ಟ್ 24,25ರಂದು ಮೈಸೂರಿನಲ್ಲಿ ಬೃಹತ್ ಕ್ಯಾಂಪಸ್ confrence_SSF ಕರ್ನಾಟಕ ರಾಜ್ಯ ಸಮಿತಿ ಹಮ್ಮಿಕೊಂಡಿದೆ. ಮಾತ್ರವಲ್ಲ ಕಳೆದ 5 ತಿಂಗಳಿಂದ ಈ ಕಾರ್ಯಕ್ರಮದ ಯಶಸ್ವಿಗೆ ಬೇಕಾಗಿ ದಾರಿತಪ್ಪುತ್ತಿರುವ ನಮ್ಮ ಯುವಜನತೆಯನ್ನು ಸಂರಕ್ಷಿಸುವ ಏಕೈಕ ಉದ್ದೇಶದಿಂದ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಕಾರ್ಯಕ್ರಮದ ಎಲ್ಲಾ ತಯಾರಿಗಳನ್ನು ಮಾಡಿ ಕೊಂಡಿದೆ.ರಾಜ್ಯದ ವಿವಿಧ ಜಿಲ್ಲೆಗಳಿಂದ 1000 ದಷ್ಟು ಕಾಲೇಜ್ campus ನಿಂದ ಸುಮಾರು 5000 ದಷ್ಟು ವಿಧ್ಯಾರ್ಥಿಗಳು ಭಾಗವಹಿಸುವ ಈ ಮಹತ್ತರವಾದ ದ್ವಿದಿನ ಕಾರ್ಯಕ್ರಮದಲ್ಲಿ ದೊಡ್ಡ ದೊಡ್ಡ ಆಲಿಂಗಳು , ಪ್ರೊಫೆಸರ್ ಗಳು ತರಗತಿ ಮಂಡಿಸಲಿದ್ದಾರೆ.

ಖಂಡಿತವಾಗಿಯೂ ಈ ಕಾನ್ಫರೆನ್ಸ್ ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಮೈಲಿಗಳನ್ನು ಹಾಕಲು ಜೀವನದಲ್ಲಿ ಬದಲಾವಣೆಯ ಅಲೆ ಎಬ್ಬಿಸಲು 100%ಸಾಧ್ಯವಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.ಆದ್ದರಿಂದ ಪ್ರೀತಿಯ ವಿಧ್ಯಾರ್ಥಿಗಳು ನೀವು ಇನ್ನು ರಿಜಿಸ್ಟರ್ ಮಾಡಿಲ್ಲವೇ ತಕ್ಷಣವೇ ತಮ್ಮ ಸಮೀಪದ SSF ಯುನಿಟ್ ನಾಯಕರನ್ನು ಸಂಪರ್ಕಿಸಿ ತಮ್ಮ ಅಮೂಲ್ಯ ಬದುಕನ್ನು ಬದಲಾಯಿಸಿ,ಪ್ರೀತಿಯ ಪೋಷಕರೇ ಇನ್ನು ನಿಮ್ಮ ಮಕ್ಕಳಿಗೆ ಮೈಸೂರ್ campus confrence ಬಗ್ಗೆ ತಿಳಿದಿಲ್ಲವೇ, ತಿಳಿಸಿಲ್ಲವೇ ನಿಮ್ಮೂರಿನ ಅಥವಾ ಹತ್ತಿರದ SSF ನಾಯಕರನ್ನು ಸಂಪರ್ಕಿಸಿ ನಿಮ್ಮ ಮಕ್ಕಳನ್ನು ಕಳುಹಿಸಿ ಕೊಡಿ .

error: Content is protected !! Not allowed copy content from janadhvani.com