janadhvani

Kannada Online News Paper

ಬಜಗೋಳಿ: ನೂರುಲ್ ಹುದಾ ಜುಮಾ ಮಸೀದಿಯಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ

78ನೇ ಯ ಸ್ವಾತಂತ್ರೋತ್ಸವದ ಧ್ವಜಾರೋಹಣ ಕಾರ್ಯಕ್ರಮವು ಬಜಗೋಳಿ ಮಸೀದಿ ವಠಾರ ದಲ್ಲಿ ನಡೆಯಿತು. ಮಸೀದಿ ಅಧ್ಯಕ್ಷರಾದ ಪುತ್ತಾಕರವರು ಧ್ವಜಾರೋಹಣ ವನ್ನು ನೆರವೇರಿಸಿದರು. ಮಸೀದಿ ಖತೀಬರಾದ ಅಬ್ದುರ್ರಹ್ಮಾನ್ ಹುಮೈದಿ ಬಜಗೋಳಿ ಸಂದೇಶ ಭಾಷಣ ಮಾಡಿದರು. ಗೌರವಾಧ್ಯಕ್ಷರು ಅಬ್ದುರ್ರಹ್ಮಾನ್ ಮುಸ್ಲಿಯಾರ್
ದುಆವನ್ನು ನೆರವೇರಿಸಿದರು.
SMA ಕಾರ್ಕಳ ರೀಜಿನಲ್ ಅಧ್ಯಕ್ಷರು ಹಾಜಿ ಸುಲೈಮಾನ್, ಬಜಗೋಳಿ ಆಡಳಿತ ಸಮಿತಿ ಸದಸ್ಯರು, ಜಮಾತರು, ಮದ್ರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕೊನೆಯಲ್ಲಿ ಸಿಹಿತಿಂಡಿ ಯನ್ನು ವಿತರಿಸಲಾಯಿತು..