ಇಂಡ್ಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಶೈಖುನಾ ಎ.ಪಿ ಉಸ್ತಾದ್ ರವರ ನೇತೃತ್ವದ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟ ಕೇರಳದ ಕಲ್ಲಿಕೋಟೆ ಜಾಮಿಅ ಮರ್ಕಝ್ ಸಂಸ್ಥೆಯಿಂದ ಸಖಾಫಿ ಬಿರುದು ಪಡೆದ ಕರ್ನಾಟಕದ ಸಾವಿರದಷ್ಟು ಸಖಾಫಿ ವಿದ್ವಾಂಸರ ಸಂಗಮವು ನಾಳೆ ಬಿ.ಸಿ ರೋಡ್ ಸಮೀಪದ ಪಾಣೆಮಂಗಳೂರು ಸಾಗರ್ ಆಡಿಟೋರಿಯಂ ನಲ್ಲಿ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ,
ಮರ್ಕಝ್ ಪ್ರದಾನ ಕಾರ್ಯದರ್ಶಿ
ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ಝೈನುಲ್ ಉಲಮಾ ಖಾಝಿ ಮಾಣಿ ಉಸ್ತಾದ್,
ಮರ್ಕಝ್ ಪ್ರೊಫೆಸರ್ ವಿ.ಪಿ.ಎಂ ಫೈಝಿ ವಿಲ್ಯಾಪಳ್ಳಿವಿಶೇಷ ಅತಿಥಿಯಾಗಿ ಭಾಗವಹಿಸುವರು.
ವಿಲ್ಯಾಪಳ್ಳಿ ಉಸ್ತಾದ್ ರವರಿಗೆ ಸಂಗಮದಲ್ಲಿ ಗೌರವಾರ್ಪಣೆ ನಡೆಸಲಾಗುವುದು.ಕರ್ನಾಟಕ ರಾಜ್ಯ ಸಖಾಫಿ ಕೌನ್ಸಿಲ್ ಅಧ್ಯಕ್ಷ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ಣರವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಕೆ.ಮುಹ್ಯಿದ್ದೀನ್ ಸಖಾಫಿ ಸ್ವಾಗತ ಭಾಷಣ ನಡೆಸುವರು. ಕಾರಂತೂರ್ ಮರ್ಕಝ್ ಸಖಾಫತಿ ಸುನ್ನಿಯ್ಯ ಸಮಿತಿ ಸದಸ್ಯ
ಡಾ.ಎಮ್ಮೆಸ್ಸೆಂ ಅಬ್ದುರ್ರಶೀದ್ ಸಖಾಫಿ ಝೈನಿ,ಮರ್ಕಝ್ ಮುದರ್ರಿಸ್ ಹಾಫಿಳ್ ಕೌಸರ್ ಸಖಾಫಿ,ಅಶ್ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ವಿಷಯ ಮಂಡಿಸಿ ಮಾತನಾಡುವರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರದಷ್ಟು ಸಖಾಫಿ ವಿದ್ವಾಂಸರು ಆಗಮಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಹ್ಬೂಬ್ ಸಖಾಫಿ ಕಿನ್ಯ ತಿಳಿಸಿದ್ದಾರೆ.