janadhvani

Kannada Online News Paper

ಕಲ್ಲಡ್ಕ ಅಬ್ರಾಡ್ ಫಾರಂ ಯು ಎ ಇ, ಬ್ಲಡ್ ಡೋನರ್ಸ್ ಮಂಗಳೂರು- ಬೃಹತ್ ರಕ್ತದಾನ ಶಿಬಿರ

ದುಬೈ : ಕಲ್ಲಡ್ಕ ಅನಿವಾಸಿ ಮಿತ್ರರ ಆಶಾಕಿರಣವಾದ ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಆಶ್ರಯದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿಯಾಗಿ ಬೃಹತ್ ಯಶಸ್ವಿ ರಕ್ತದಾನ ಶಿಬಿರವು ರಕ್ತ ನಿಧಿ ಕೇಂದ್ರ ಹೆಡ್ ಕ್ವಾಟ್ರಸ್ ದುಬೈಯಲ್ಲಿ ನಡೆಯಿತು…ರಕ್ತದಾನ ಶಿಬಿರದಲ್ಲಿ ಹಲವಾರು ರಕ್ತದಾನಿಗಳು ರಕ್ತದಾನ ಮಾಡಿ ಜೀವದಾನಿಯಾದರು ರಕ್ತದಾನ ಮಾಡಿದ ದಾನಿಗಳಿಗೆ ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು..

ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಅಧ್ಯಕ್ಷರಾದ ನವಾಝ್ ಹಜಾಜ್ , ಉಪಾಧ್ಯಕ್ಷರು ರಫೀಕ್ ಸಾಹೇಬ್ ನೆಕ್ಕರಾಜೆ ಅದೇ ರೀತಿ ಪ್ರಧಾನ ಕಾರ್ಯದರ್ಶಿ ಮಿಕ್ದಾದ್ ಗೋಳ್ತಮಜಲ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಯುಎಇ ಅಧ್ಯಕ್ಷರಾದ ನಝೀರ್ ಬಿಕರ್ನಕಟ್ಟೆ ಅದೇರೀತಿ BDM ಕಾರ್ಯನಿರ್ವಾಹಕರಾದ ಸಂಶುದ್ದೀನ್ ಪಿಲಿಗೂಡು ಭಾಗವಹಿಸಿದರು ಅದೇ ರೀತಿ ಕಲ್ಲಡ್ಕ ಅಬ್ರಾಡ್ ಫಾರಂ ಯುಎಇ ಇದರ ಸದಸ್ಯರು ಶಿಸ್ತುಬದ್ಧವಾಗಿ ಎಲ್ಲರನ್ನೂ ಗೌರವಿಸಿ ಕಾರ್ಯಕ್ರಮದ ಯಶಸ್ವಿಗೆ ಪಾತ್ರರಾದರು ಕಾರ್ಯಕ್ರಮಕ್ಕೆ ಆಗಮಿಸಿದ ಅಥಿತಿಗಳಿಗೆ , ರಕ್ತದಾನಿಗಳಿಗೆ , ಆಸ್ಪತ್ರೆ ಸಿಬ್ಬಂದಿವರ್ಗದವರಿಗೆ ಮಿಕ್ದಾದ್ ಗೋಳ್ತಮಜಲ್ ಸ್ವಾಗತಿಸಿ ವಂದಿಸಿದರು.

ವರದಿ : ಕೆ.ಕೆ ಜಬ್ಬಾರ್ ಕಲ್ಲಡ್ಕ

error: Content is protected !! Not allowed copy content from janadhvani.com